Viral Video: ಚಿರತೆಯನ್ನು ಮೂರ್ಖನನ್ನಾಗಿ ಮಾಡಿದ ಮೊಸಳೆ.. ಆಮೇಲ್​ ಏನಾಯ್ತು?​

ವಿಡಿಯೋ ನೋಡಿದ ನೆಟ್ಟಿಗರು ಬಾರೀ ಇಷ್ಟಪಟ್ಟಿದ್ದು ಕಾಮೆಂಟ್​ ಹಾಕುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 14 ಸೆಕೆಂಡುಗಳ ಈ ವಿಡಿಯೋ 3,000 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ.

Viral Video: ಚಿರತೆಯನ್ನು ಮೂರ್ಖನನ್ನಾಗಿ ಮಾಡಿದ ಮೊಸಳೆ.. ಆಮೇಲ್​ ಏನಾಯ್ತು?​

Updated on: May 31, 2021 | 3:21 PM

ಪ್ರಾಣಿಗಳ ಕಿತ್ತಾಟ ವಿಡಿಯೋ ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸದ್ದು ಮಾಡುತ್ತವೆ. ಕಿತ್ತಾಡದ ದೃಶ್ಯವು ಕೆಲವು ಬಾರಿ ಬೆರಗಾಗುವಂತೆ ಮಾಡಿದರೂ ಇನ್ನು ಕೆಲವು ತಮಾಷೆಯಾಗಿರುತ್ತದೆ. ನೀರು ಕುಡಿಯಲೆಂದ ಬಂದ ಚಿರತೆಯನ್ನು ಮೂರ್ಝನನ್ನಾಗಿ ಮಾಡಿದ ಮೊಸಳೆಯ ವಿಡಿಯೋ ಇದೀಗ ನೋಡುಗರಿಗೆ ಅಚ್ಚರಿ ಮೂಡಿಸುವಂತಿದೆ. ವಿಡಿಯೋ ನೋಡಿದ ನೆಟ್ಟಿಗರು ‘ಅದ್ಭುತ’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬೇರೆ ಪ್ರಾಣಿಗಳಿಗಳ ಬೇಟೆಗಾಗಿ ಸಂಚು ಹೂಡುತ್ತಾ ಚಿರತೆ ಕಾಯುತ್ತಿರುವ ದೃಶ್ಯವನ್ನು ನೋಡಿರಬಹುದು. ಸದ್ದಿಲ್ಲದೆ ಮರದ ಮೇಲೆ ಕೂರು, ಕೆಂಗಣ್ಣಿನಿಂದ ಗುರಾಯಿಸುತ್ತಾ ತನ್ನ ಹಸಿವನ್ನು ನೀಗಿಸಿಕೊಳ್ಳಲು ಇತರ ಪ್ರಾಣಿಗಳನ್ನು ಹುಡುಕುತ್ತಿರುತ್ತದೆ. ಆ ಚಿರತೆಯು ಒಂದೇ ಕ್ಷಣ ಹೆದರಿ ಪರಾರಿಯಾದ ದೃಶ್ಯ ಸೆರೆಯಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ವಿಡಿಯೋ ಕ್ಲಿಪ್​ನಲ್ಲಿ ನೋಡುವಂತೆ ಚಿರತೆಯು ನೀರು ಕುಡಿಯಲೆಂದು ನದಿಯ ದಡಕ್ಕೆ ಬರುತ್ತಿರುತ್ತದೆ. ಬಾಯಾರಿಕೆಗೊಂಡ ಚಿರತೆ, ಇನ್ನೇನು ನೀರು ಕುಡಿಯಬೇಕು ಅನ್ನುವಷ್ಟರಲ್ಲಿ ನೀರಿನಲ್ಲಿ ಅಡಗಿದ್ದ ಮೊಸಳೆಯು ಒಮ್ಮೆಲೆ ಮೇಲೇರುತ್ತದೆ. ತತ್​ಕ್ಷಣಕ್ಕೆ ಹೆದರಿದ ಚಿರತೆ ಸ್ಥಳದಿಂದ ಎತ್ತರಕ್ಕೆ ಜಿಗಿದು ಪರಾರಿಯಾಗುತ್ತದೆ. ಗಾಬರಿಯಿಂದ ಚಿರತೆ ಓಡುವುದನ್ನು ನೀವೂ ನೋಡಿ..

ವಿಡಿಯೋ ನೋಡಿದ ನೆಟ್ಟಿಗರು ಬಾರೀ ಇಷ್ಟಪಟ್ಟಿದ್ದು ಕಾಮೆಂಟ್​ ಹಾಕುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 14 ಸೆಕೆಂಡುಗಳ ಈ ವಿಡಿಯೋ 3,000 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: 

ಚಿತ್ರದುರ್ಗದಲ್ಲಿ ಮನೆಯೊಳಗೆ ನುಗ್ಗಿದ ಚಿರತೆ; ಸ್ಥಳಕ್ಕೆ ಜಮಾಯಿಸಿದ ಸಾವಿರಾರು ಜನ

ಮೈಸೂರಿನ ವೃದ್ದೆ ನಾಪತ್ತೆ; ಚಿರತೆ ಹೊತ್ತೊಯ್ದಿರುವ ಶಂಕೆ

Published On - 3:19 pm, Mon, 31 May 21