Viral: ಹಸುವನ್ನು ಬಿಡದ ಕಾಮುಕ; ಗೋವಿನ ಮೇಲೆ ಅತ್ಯಾಚಾರ ಎಸಗಿದ ಪಾಪಿ

ಕೆಲವು ದುರುಳರು ದಯೆ ತೋರದೆ ಮೂಕ ಪ್ರಾಣಿಗಳ ಮೇಲೆಯೂ ಅತ್ಯಾಚಾರ ಎಸಗುವ ಪ್ರಕರಣಗಳ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಇದೀಗ ಅಂತಹದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, 25 ವರ್ಷದ ಕಾಮಾಂಧ ಯುವಕನೊಬ್ಬ ಹಸುವಿನ ಮೇಲೆಯೇ ಅತ್ಯಾಚಾರಗೈದಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Viral: ಹಸುವನ್ನು ಬಿಡದ ಕಾಮುಕ; ಗೋವಿನ ಮೇಲೆ ಅತ್ಯಾಚಾರ ಎಸಗಿದ ಪಾಪಿ
ವೈರಲ್​ ಪೋಸ್ಟ್​​
Edited By:

Updated on: Jul 05, 2024 | 10:38 AM

ಮನುಷ್ಯನ ಕ್ರೌರ್ಯ ವರ್ತನೆ ಹೆಚ್ಚಾಗುತ್ತಿದ್ದು, ಜೊತೆಗೆ ಅತ್ಯಾಚಾರ ಪ್ರಕರಣಗಳು ಸಹ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ. ಈ ಕಾಮುಕರು ತಮ್ಮ ಲೈಂಗಿಕ ತೃಷೆ ತೀರಿಸಿಕೊಳ್ಳಲು ಹೆಣ್ಣಿನ ಮೇಲಷ್ಟೇ ಅಲ್ಲದೆ ಮೂಕ ಪ್ರಾಣಿಗಳ ಮೇಲೂ ಅತ್ಯಾಚಾರವೆಗುತ್ತಿದ್ದಾರೆ. ನಾಯಿ, ಆಡು, ದನ ಮೇಲೆ ಅತ್ಯಾಚಾರ ಮಾಡಿದಂತಹ ಬಹಳಷ್ಟು ಘಟನೆಗಳು ಈ ಹಿಂದೆಯೂ ನಡೆದಿದೆ. ನಾಗರಿಕ ಸಮಾಜವೇ ತಲೆ ತಗ್ಗಿಸುವಂತ ಇಂತಹ ಮತ್ತೊಂದು ಘಟನೆ ಇದೀಗ ನಡೆದಿದ್ದು, ವಿಕೃತ ಕಾಮಿಯೊಬ್ಬ ಹಸುವಿನ ಮೇಲೆಯೇ ಅತ್ಯಾಚಾರವೆಸಗಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಆಘಾತಕಾರಿ ಘಟನೆ ಛತ್ತೀಸ್‌ಗಢದ ಡೊಂಗರ್‌ಗಢದಲ್ಲಿ ನಡೆದಿದ್ದು, ಇಲ್ಲಿನ ಟಂಕೇಶ್ವರ್‌ ಕನ್ವರ್‌ (25) ಎಂಬ ಯುವಕ ಸೋಮವಾರ (ಜುಲೈ 01) ತಡ ರಾತ್ರಿ ಹಸುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಸಂದರ್ಭದಲ್ಲಿ ಆತ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಅಲ್ಲದೆ ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದ್ದು, ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಸಹಜ ಲೈಂಗಿಕ ಕ್ರಿಯೆ ಮತ್ತು ಪ್ರಾಣಿ ಹಿಂಸೆ ಮಾಡಿದ್ದಕ್ಕಾಗಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ ( ಎಕ್ಸ್​​​ ಖಾತೆಯಿಂದ)

ಈ ಕುರಿತ ಪೋಸ್ಟ್‌ ಒಂದನ್ನು TrueStoryUP ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಹಸುವಿನ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಟಂಕೇಶ್ವರ್‌ ಕನ್ವರ್‌ (25) ನನ್ನು ಪೊಲೀಸರು ಬಂಧಿಸಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ಇದನ್ನೂ ಓದಿ: ಸಿರಪ್‌ ಬಾಟಲಿ ನುಂಗಿ ಸಂಕಷ್ಟಕ್ಕೆ ಸಿಲುಕಿದ ನಾಗಪ್ಪ; ರಕ್ಷಣೆಗೆ ಧಾವಿಸಿದ ಸ್ನೇಕ್‌ ಹೆಲ್ಪ್‌ಲೈನ್‌

ಜುಲೈ 03 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇಂತಹ ವಿಕೃತ ಕಾಮಿಗಳನ್ನು ಗಲ್ಲಿಗೇರಿಸಬೇಕು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us