Video: ಜೀವನಕ್ಕಾಗಿ ಮೆಕ್ಯಾನಿಕ್ ಕೆಲಸ, ಪ್ರಾಣಿಗಳೇ ಈತನ ಪ್ರಪಂಚ; ಇದು ಕುದುರೆಮುಖದ ರೂಬನ್ ಜೀವನದ ಕಥೆ

ಪ್ರಾಣಿಗಳೇ ಹಾಗೆ, ಒಂದು ಹೊತ್ತು ಊಟ ಹಾಕಿದರೆ ಸಾಕು ತನ್ನ ಮಾಲೀಕನಿಗೆ ನಿಯತ್ತಾಗಿರುತ್ತದೆ. ಇದಕ್ಕೆ ಉದಾಹರಣೆಯಂತಿದೆ ಈ ದೃಶ್ಯ. ಇದು ಕಾಡುಹಂದಿ ಹಾಗೂ ರೂಬನ್ ಎಂಬ ವ್ಯಕ್ತಿಯ ಹನ್ನೊಂದು ವರ್ಷದ ಗೆಳೆತನದ ಕಥೆ. ಹೌದು, ಮೆಕ್ಯಾನಿಕ್ ಆಗಿರುವ ರೂಬನ್ ಅವರನ್ನು ಹುಡುಕಿ ಬರುವ ಕಾಡುಹಂದಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಜೀವನಕ್ಕಾಗಿ ಮೆಕ್ಯಾನಿಕ್ ಕೆಲಸ, ಪ್ರಾಣಿಗಳೇ ಈತನ ಪ್ರಪಂಚ; ಇದು ಕುದುರೆಮುಖದ ರೂಬನ್ ಜೀವನದ ಕಥೆ
ರೂಬನ್‌
Image Credit source: Instagram

Updated on: Nov 24, 2025 | 2:24 PM

ಚಿಕ್ಕಮಗಳೂರು, ನವೆಂಬರ್‌ 24 : ಸ್ವಾರ್ಥ(selfishness) ತುಂಬಿದ ಪ್ರಪಂಚದಲ್ಲಿ ಮನುಷ್ಯ ಮನುಷ್ಯನನ್ನು ನಂಬುವುದೇ ಕಷ್ಟವಾಗಿದೆ. ಹೀಗಾಗಿ ಕೆಲವರು ಪ್ರಾಣಿಗಳನ್ನೇ ಹಚ್ಚಿಕೊಂಡಿರುತ್ತಾರೆ. ಇದಕ್ಕೆ ನೈಜ ಉದಾಹರಣೆಯಂತಿದ್ದಾರೆ. ಕುದುರೆಮುಖ ಕಾಡಂಚಿನಲ್ಲಿ ವಾಸಿಸುತ್ತಿರುವ ಈ ಮೆಕ್ಯಾನಿಕ್. ಇದು ಕುದುರೆಮುಖದ ಕಾಡಂಚಿನಲ್ಲಿ ಬದುಕುತ್ತಿರುವ ರೂಬನ್  (Ruben) ಹಾಗೂ ಕಾಡಂದಿಯ ಹನ್ನೊಂದು ವರ್ಷದ ಗೆಳೆತನದ ಕಥೆ. ಇಪ್ಪತ್ತಕ್ಕೂ ಹೆಚ್ಚು ಬೆಕ್ಕುಗಳು ಹಾಗೂ ಮೂವತ್ತಕ್ಕೂ ಹೆಚ್ಚು ನಾಯಿಗಳ ಜತೆಗೆ ಕಾಡು ಹಂದಿಗೂ ಊಟ ಹಾಕುತ್ತಿರುವ ಈ ವ್ಯಕ್ತಿಗೆ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ನಿತ್ಯವೂ ಕಾಡು ಹಂದಿಯೂ ಇವರನ್ನು ಅರಸಿಕೊಂಡು ಬರುತ್ತದೆ.  ಪ್ರಾಣಿಗಳ ಪರಿಶುದ್ಧಪ್ರೀತಿಗೆ ಕರಗಿದ್ದು, ಜೀವನಕ್ಕಾಗಿ ಮೆಕ್ಯಾನಿಕ್ ಕೆಲಸದೊಂದಿಗೆ ಮುಗ್ಧ ಜೀವಿಗಳ ಹಸಿವನ್ನು ನೀಗಿಸುತ್ತಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋವೊಂದು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

ಪ್ರಾಣಿಗಳ ಹಸಿವು ನೀಗಿಸುತ್ತಿರುವ ವ್ಯಕ್ತಿ

sg malenad ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ರೂಬನ್ ಎಂಬ ವ್ಯಕ್ತಿಗೆ ಪ್ರಾಣಿಗಳ ಮೇಲಿನ ಪ್ರೀತಿಯನ್ನು ತೆರೆದಿಡಲಾಗಿದೆ. ಕಾಡಂಚಿನಲ್ಲೇ ನೆಲೆಸಿದ್ದು ಮೆಕ್ಯಾನಿಕ್ ಕೆಲಸ ಮಾಡುವುದರೊಂದಿಗೆ ಇವರನ್ನೇ ನಂಬಿಕೊಂಡಿರುವ ಹಂದಿ, ನಾಯಿಗಳು ಹಾಗೂ ಬೆಕ್ಕುಗಳಿಗೆ ಆಶ್ರಯದಾತರು ಆಗಿದ್ದಾರೆ. ಈ ವಿಡಿಯೋದಲ್ಲಿ ಕುದುರೆಮುಖ ಅದಿರು ಕಂಪನಿ ಮುಚ್ಚಿರುವುದನ್ನು ಕಾಣಬಹುದು. ರೂಬನ್‌ ಎಂಬ ವ್ಯಕ್ತಿ ಕಾಡಾಗಿ ಪರಿವರ್ತನೆಗೊಂಡಿರುವ ಈ ಪ್ರದೇಶದಲ್ಲಿ ನೆಲೆಸಿರುವುದನ್ನು ನೀವಿಲ್ಲಿ ಕಾಣಬಹುದು. ಪ್ರಾಣಿಗಳಿಗೆ ತಮ್ಮ ದುಡಿಮೆಯ ಹಣದಲ್ಲೇ ಆಹಾರವನ್ನು ತಯಾರಿಸಿ ಬಡಿಸುತ್ತಿದ್ದು, ಈ ಪ್ರಾಣಿಗಳೇ ಆತ್ಮೀಯ ಬಂಧುಗಳಾಗಿವೆ. ಅದರಲ್ಲೂ ಕಾಡುಹಂದಿಯೊಂದು ಇವರನ್ನು ಅರಸಿಕೊಂಡು ನಿತ್ಯವೂ ಬರುವುದನ್ನು ಈ ವಿಡಿಯೋದಲ್ಲಿ ನೀವು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ರೂಬನ್ ಅವರು ಮೊದಲು ಮುಂಬೈನಲ್ಲಿ ನೆಲೆಸಿದ್ದರು. ಆದರೆ, 1979ರಲ್ಲಿ ಕುದುರೆಮುಖಕ್ಕೆ ಬಂದು, ಇಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿದರು. ಆ ವೇಳೆಯಲ್ಲಿ ಈ ವ್ಯಕ್ತಿಯ ಸ್ನೇಹಿತರಾದದ್ದು ಈ ನಾಯಿಗಳು ಬೆಕ್ಕಗಳಂತೆ. ಆ ಬಳಿಕ ತನ್ನ ದುಡಿಮೆಯ ಸ್ವಲ್ಪ ಹಣದಲ್ಲಿ ಅವುಗಳ ಹಸಿವು ನೀಗಿಸಲು ಪ್ರಯತ್ನಿಸಿದರು. ಮದುವೆ ಮಾಡಿಕೊಳ್ಳದೇ ಒಂಟಿಯಾಗಿ ಬದುಕುತ್ತಿರುವ ಇವರಿಗೆ ಈ ಪ್ರಾಣಿಗಳೇ ಕುಟುಂಬವಾಗಿದೆ. ಶುದ್ಧ ಸಸ್ಯಾಹಾರಿಯಾಗಿದ್ದರೂ ಮೀನು, ಮಾಂಸ ತಂದು ಪ್ರಾಣಿಗಳಿಗೆ ತಮ್ಮ ಕೈಯಾರೆ ಅಡುಗೆ ಮಾಡಿ ಹಾಕುತ್ತಾರೆ. ಇವರ ಪರಿಶುದ್ಧ ಪ್ರಾಣಿ ಪ್ರೀತಿಯೂ ಎಲ್ಲರಿಗೂ ಮಾದರಿಯಾಗಿದೆ.

ಇದನ್ನೂ ಓದಿ:ಶ್ವಾನಕ್ಕೆ ಸೊಂಡಿಲಿನಿಂದ ನೀರು ಎರಚುತ್ತಾ ಖುಷಿ ಪಟ್ಟ ಕಂಜನ್‌ ಆನೆ

ಈ ವಿಡಿಯೋ ಇದುವರೆಗೂ 1.1 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಮ್ಮ ಗಾಡಿ ಕೆಟ್ಟು ನಿಂತಾಗ ಸಹಾಯ ಮಾಡಿದ ಫುಣ್ಯಾತ್ಮ ಎಂದಿದ್ದಾರೆ. ಇನ್ನೊಬ್ಬರು, ಆ ಹಂದಿಯ ಕಣ್ಣನ್ನು ನೋಡಿದರೆ ಆ ಹಂದಿಯೇ ದೈವ ಸ್ವರೂಪಿಯಾಗಿ ಬಂದು ಆ ಜಾಗವನ್ನು ಕಾಯುತ್ತಿದೆ ಎಲ್ಲರೂ ದೈವ ವನ್ನು ಬಿಟ್ಟು ಹೋದ ನಂತರ ಅದು ಅಲ್ಲಿ ನೆಲೆಸಿದೆ ಎಂದು ನನಗೆ ಅನಿಸಿದೆ ಅದರ ಕಣ್ಣನ್ನು ನೋಡಿದರೆ ಏನೋ ಒಂದು ವಿಶೇಷತೆ ಕಾಣುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ಇಂಥ ವ್ಯಕ್ತಿಗಳಿಗೆ ಸಹಾಯ ಮಾಡಿದರೆ ದೇವರು ಮೆಚ್ಚುತ್ತಾನೆ.. ದಯವಿಟ್ಟು ಎಲ್ಲರೂ ಸಹಾಯ ಮಾಡಿ ಇಂತಹ ಒಳ್ಳೆಯ ಮನಸ್ಸು ಇರುವವರು ಸಿಗುವುದು ಅಪರೂಪ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 2:23 pm, Mon, 24 November 25