Viral Video: ಈ ಚಿಂಪಾಂಜಿಗೂ ಇನ್‌ಸ್ಟಾಗ್ರಾಮ್‌ ಹುಚ್ಚು, ಇದು ಫೋನ್‌ ನೋಡ್ತಾ ಕೂತ್ರೆ ಏಳೋದೇ ಇಲ್ಲ

ಒಮ್ಮೊಮ್ಮೆ ಪ್ರಾಣಿಗಳು ತೋರುವ ವರ್ತನೆ ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತವೆ. ಕೆಲವೊಂದು ಸಲ ಪ್ರಾಣಿಗಳು ಥೇಟ್‌ ಮನುಷ್ಯರಂತೆಯೇ ವರ್ತಿಸುತ್ತವೆ. ಅದರಲ್ಲೂ ಈ ಚಿಂಪಾಂಜಿಗಳಿಗೆ ಹಾಗೂ ಮನುಷ್ಯರಿಗೆ ಹಲವು ಹೋಲಿಕೆಗಳಿದ್ದು, ಅವುಗಳು ಥೇಟ್‌ ಮನುಷ್ಯರಂತೆಯೇ ವರ್ತಿಸುತ್ತವೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋವೊಂದು ವೈರಲ್‌ ಆಗಿದ್ದು, ಚಿಂಪಾಂಜಿಯೊಂದು ಮನುಷ್ಯರಂತೆ ಇನ್‌ಸ್ಟಾಗ್ರಾಮ್‌ ಬಳಕೆ ಮಾಡುವುದನ್ನು ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ.

Viral Video: ಈ ಚಿಂಪಾಂಜಿಗೂ ಇನ್‌ಸ್ಟಾಗ್ರಾಮ್‌ ಹುಚ್ಚು, ಇದು ಫೋನ್‌ ನೋಡ್ತಾ ಕೂತ್ರೆ ಏಳೋದೇ ಇಲ್ಲ
ವೈರಲ್​​ ವಿಡಿಯೋ
Edited By:

Updated on: Jul 02, 2024 | 5:21 PM

ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಹೆಚ್ಚಿನವರು ಇನ್‌ಸ್ಟಾಗ್ರಾಮ್‌ಗೆ ಅಡಿಕ್ಟ್‌ ಆಗಿದ್ದಾರೆ. ಹೌದು ಟಿಕ್‌ಟಾಕ್‌ ಬ್ಯಾನ್‌ ಆದ ನಂತರ ಇನ್‌ಸ್ಟಾಗ್ರಾಮ್‌ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದ್ದು, ಇದರಲ್ಲಿರುವ ರೀಲ್ಸ್‌ ಆಯ್ಕೆ ಜನರನ್ನು ಹೆಚ್ಚು ಆಕರ್ಷಿಸಿದೆ. ಇದೇ ಕಾರಣಕ್ಕಾಗಿ ಮಕ್ಕಳಿಂದ ಹಿಡಿದು ವಯಸ್ಸಾದವವವರೆಗೂ ಇನ್‌ಸ್ಟಾಗ್ರಾಮ್‌ ಬಳಕೆ ಮಾಡುತ್ತಾರೆ. ಮನುಷ್ಯರಷ್ಟೇ ಅಲ್ಲ ಕಣ್ರೀ ಇಲ್ಲೊಂದು ಚಿಂಪಾಂಜಿಗೂ ಇನ್‌ಸ್ಟಾಗ್ರಾಮ್‌ ಅಂದ್ರೆ ಬಲು ಇಷ್ಟವಂತೆ, ಈ ಕುರಿತ ಹಳೆಯ ವಿಡಿಯೋವೊಂದು ಇದೀಗ ಮತ್ತೊಮ್ಮೆ‌ ವೈರಲ್‌ ಆಗಿದೆ.

AMAZINGNATUR ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದ್ದು, “ಇನ್‌ಸ್ಟಾಗ್ರಾಮ್‌ ಬಳಕೆ ಮಾಡುವ ಚಿಂಪಾಂಜಿ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

60 ಸೆಕೆಂಡುಗಳ ವೈರಲ್‌ ವಿಡಿಯೋದಲ್ಲಿ ಸ್ಟೈಲ್‌ ಆಗಿ ಮೊಬೈಲ್‌ ಹಿಡಿದು ಕುಳಿತಿರುವ ಚಿಂಪಾಂಜಿಯೊಂದು ಇನ್‌ಸ್ಟಾಗ್ರಾಮ್‌ ಆಪ್‌ ಓಪನ್‌ ಮಾಡಿ ಸ್ಕ್ರೋಲ್‌ ಮಾಡುತ್ತಾ ರೀಲ್ಸ್‌ ಇತ್ಯಾದಿ ಪೋಸ್ಟ್‌ಗಳನ್ನು ವೀಕ್ಷಿಸುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಆಕಾಶದಲ್ಲಿ ಗಾಳಿಗೆ ಅಲುಗಾಡಿದ ವಿಮಾನ, ಲಗೆಜ್‌ ಕಂಪಾರ್ಟ್ಮೆಂಟ್‌ನಲ್ಲಿ ಸಿಲುಕಿದ ಪ್ರಯಾಣಿಕ

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ಪೋಸ್ಟ್‌ 1.1 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈಗಂತೂ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳೂ ಕೂಡಾ ಸೋಷಿಯಲ್‌ ಮೀಡಿಯಾ ಚಟ ಅಂಟಿಕೊಂಡಿದೆ ಎಂದು ನೆಟ್ಟಿಗರು ತಮಾಷೆಯ ಕಾಮೆಂಟ್ಸ್‌ಗಳನ್ನು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us