Viral: ಅಕ್ಕನ ಗಂಡನ ಜತೆ ಅನೈತಿಕ ಸಂಬಂಧ, ಮದುವೆ ಮಂಟಪದಲ್ಲಿ ವಧುವಿನ ಸರಸ ಸಲ್ಲಾಪದ ವಿಡಿಯೋ ಪ್ಲೇ ಮಾಡಿದ ವರ

ಅನೈತಿಕ ಸಂಬಂಧಗಳಿಂದ ಉಂಟಾಗುವ ರಂಪಾಟಗಳಿಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ತನ್ನ ಭಾವಿ ಪತ್ನಿ ಆಕೆಯ ಭಾವನೊಂದಿಗೆ ಅನೈಕ ಸಂಬಂಧವನ್ನು ಹೊಂದಿರುವ ವಿಷಯ ತಿಳಿದ ವರ, ಮದುವೆಯ ದಿನ ಅತಿಥಿಗಳ ಮುಂದೆಯೇ ವಧು ತನ್ನ ಭಾವನ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋವನ್ನು ಪ್ರೊಜೆಕ್ಟರ್‌ನಲ್ಲಿ ಪ್ಲೇ ಮಾಡುವ ಮೂಲಕ ಆಕೆಯ ವಂಚನೆಯನ್ನು ಬಯಲು ಮಾಡಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ಅಕ್ಕನ ಗಂಡನ ಜತೆ ಅನೈತಿಕ ಸಂಬಂಧ, ಮದುವೆ ಮಂಟಪದಲ್ಲಿ ವಧುವಿನ  ಸರಸ ಸಲ್ಲಾಪದ ವಿಡಿಯೋ ಪ್ಲೇ ಮಾಡಿದ ವರ
ಸಾಂದರ್ಭಿಕ ಚಿತ್ರ
Edited By:

Updated on: Nov 20, 2024 | 9:15 PM

ಕೆಲವರು ಮದುವೆ ನಿಶ್ಚಯವಾಗಿದ್ದರೂ ಅಥವಾ ಮದುವೆಯಾಗಿದ್ದರೂ ಬೇರೊಬ್ಬರ ಜೊತೆ ಅನೈತಿಕ ಸಂಬಂಧವನ್ನು ಹೊಂದಿರುತ್ತಾರೆ. ಈ ಅಕ್ರಮ ಸಂಬಂಧದ ಕಾರಣದಿಂದ ಸುಂದರ ಸಂಸಾರಗಳು ಮುರಿದು ಬಿದ್ದಂತಹ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಅಷ್ಟೇ ಅಲ್ಲದೆ ಅನೈತಿಕ ಸಂಬಂಧದಲ್ಲಿ ತೊಡಗಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದು ಪತಿ ಪತ್ನಿಯರ ನಡುವೆ ಹೈ ಡ್ರಾಮ ನಡೆಯುವಂತಹ ವಿಡಿಯೋಗಳು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ತಾನು ಮದುವೆಯಾಗಬೇಕಿದ್ದ ಹುಡುಗಿ ಆಕೆಯ ಅಕ್ಕನ ಗಂಡನೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿರುವ ವಿಷಯ ತಿಳಿದ ವರ ತನ್ನ ಮದುವೆಯ ದಿನ ಅತಿಥಿಗಳ ಮುಂದೆಯೇ ತನ್ನ ಭಾವಿ ಪತ್ನಿ ಭಾವನ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋವನ್ನು ಪ್ರೊಜೆಕ್ಟರ್‌ನಲ್ಲಿ ಪ್ಲೇ ಮಾಡುವ ಮೂಲಕ ಆಕೆಯ ಮೋಸದಾಟವನ್ನು ಬಯಲು ಮಾಡಿ ಸೇಡು ತೀರಿಸಿಕೊಂಡಿದ್ದಾನೆ.

ಈ ದೃಶ್ಯವನ್ನು ಕಂಡು ನೋಡುಗರು ಫುಲ್‌ ಶಾಕ್‌ ಆಗಿದ್ದಾರೆ.

ಈ ಘಟನೆ 2019 ರಲ್ಲಿ ಚೀನಾದ ಫುಜಿಯಾನ್‌ ಪ್ರಾಂತ್ಯದಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್‌ ಆಗುತ್ತಿದೆ. ತನ್ನ ಭಾವಿ ಪತ್ನಿ ಆಕೆಯ ಗರ್ಭಿಣಿ ಅಕ್ಕನ ಪತಿಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದಾಳೆ ಎಂದು ಗೊತ್ತಾದ ಬಳಿಕ ವರ ಮದುವೆಯ ದಿನ ಅತಿಥಿಗಳ ಮುಂದೆಯೇ ವಧು ಹಾಗೂ ಆಕೆಯ ಭಾವನ ಬೆಡ್‌ರೂಮ್‌ ದೃಶ್ಯವನ್ನು ಎಲ್ಲರಿಗೂ ತೋರಿಸುವ ಮೂಲಕ ಆಕೆಯ ವಿರುದ್ಧ ಸೇಡನ್ನು ತೀರಿಸಿಕೊಂಡಿದ್ದಾನೆ. ಪ್ರೊಜೆಕ್ಟರ್‌ ಮೂಲಕ ಸರಸಸಲ್ಲಾಪದ ವಿಡಿಯೋ ಪ್ಲೇ ಮಾಡಿದ್ದು, ಇದಾದ ಬಳಿಕ ದೊಡ್ಡ ರಂಪಾಟವೇ ನಡೆದಿದೆ.

ಈ ಕುರಿತ ವಿಡಿಯೋವನ್ನು jushendo ಹೆಸರಿನ ಎಕ್ಸ್‌ ಖಾಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ವರ ಪ್ರೊಜೆಕ್ಟರ್‌ ಮೂಲಕ ವಧು ಆಕೆಯ ಭಾವನೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ಪ್ಲೇ ಮಾಡಿ, ಆಕೆಯ ಮೋಸದಾಟವನ್ನು ಬಯಲು ಮಾಡಿದಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ದೆಹಲಿ ಮಾರುಕಟ್ಟೆಗೂ ಲಗ್ಗೆಯಿಡಲಿದೆ ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನ

ನವೆಂಬರ್‌ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೊಂದು ರೀತಿಯಲ್ಲಿ ಸಿಹಿಯಾದ ಸೇಡುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆಕೆಗೆ ತಿಳಿಯದಂತೆ ವಿಡಿಯೋ ಮಾಡಿದ್ದು ಕೂಡಾ ಅಪರಾಧವಲ್ಲವೇʼ ಎಂದು ಕೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 2:48 pm, Wed, 20 November 24