ಪ್ರತೀ ಭಾರಿ ನಿಮ್ಮ ಶೂಗಳನ್ನು ಧರಿಸುವಾಗ ಸ್ವಲ್ಪ ಜಾಗರೂಕತೆಯಿಂದ ಇರುವುದು ಒಳ್ಳೆಯದು. ಯಾಕೆಂದರೆ ಇನ್ನೇನು ಶೂ ಹಾಕಲು ಹೊರಟಿದ್ದ ಯುವತಿ ಹಾವಿನ ಕಡಿತದಿಂದ ಕೂದಲೆಳೆ ಅಂತರದಿಂದ ಪಾರಾಗಿರುವ ಘ ಟನೆಯೊಂದು ಬೆಳಕಿಗೆ ಬಂದಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಳೆಗೆ ಶೂ ಒಳಗಡೆ ಬೆಚ್ಚಗೆ ಮಲಗಿದ್ದ ಹಾವನ್ನು ಕಂಡು ಯುವತಿ ಬೆಚ್ಚಿ ಬಿದ್ದಿದ್ದಾಳೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಶೂ ಒಳಗೆ ನಾಗರಹಾವು ಹೇಗೆ ಅಡಗಿದೆ ಎಂಬುದನ್ನು ನೋಡಬಹುದು. ಶೂನಲ್ಲಿ ಹಾವು ಕಂಡ ತಕ್ಷಣ ಯುವತಿ ಗಾಬರಿಯಿಂದ ಕಿರುಚಲು ಆರಂಭಿಸಿದ್ದಾಳೆ. ಇದಾದ ನಂತರ ಕುಟುಂಬಸ್ಥರು ಕೂಡಲೇ ಹಾವು ಹಿಡಿಯುವವರಿಗೆ ಕರೆ ಮಾಡಿದ್ದು, ಹಾವು ಹಿಡಿಯುವವರು ಹಾವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ ಎಂದು ವರದಿಯಾಗಿದೆ.
सावधान रहें –
बरसात के इस मौसम में जूता, सेंडिल में सीधे पैर ना डालें उन्हें कम से कम दो बार पलटा कर हल्के से जमीन पर पटकें और जांच परख लें उसके बाद ही पहनने के लिए पैर डालें।
स्कूल जाने वाले बच्चों को भी सचेत करें। pic.twitter.com/qUZa4o2bVb— Mindhack.diva (@MindhackD) July 3, 2024
ಇದನ್ನೂ ಓದಿ: ಮದುವೆ, ಹನಿಮೂನ್‌ಗಾಗಿ ಕಂಪನಿಂದ 10.6 ಕೋಟಿ ರೂ. ದೋಚಿದ ವ್ಯಕ್ತಿ
@MindhackD ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗಿದೆ. ಜುಲೈ 3ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಶೂ ಧರಿಸುವ ಮೊದಲು ಜಾಗರೂಕರಾಗರಿ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ