Video: ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ; ವಿಡಿಯೋ ಇಲ್ಲಿದೆ ನೋಡಿ
ವೈರಲ್ ಆದ ವಿಡಿಯೋದಲ್ಲಿ, ಶಾಲೆಯ ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರ ಗುಂಪು ಪ್ರಾಂಶುಪಾಲರ ಕಚೇರಿಗೆ ತೆರಳಿ ಪ್ರಾಂಶುಪಾಲಕಿಯನ್ನು ಕುರ್ಚಿಯಿಂದ ಬಲವಂತವಾಗಿ ಹೊರಹಾಕಿದ್ದಾರೆ. ಇದಲ್ಲದೇ ಅದೇ ಸಮಯದಲ್ಲಿ ಹೊಸ ಪ್ರಾಂಶುಪಾಲರನ್ನು ನೇಮಕ ಮಾಡಿ ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದ್ದಾರೆ. ಮಕ್ಕಳಿಗೆ ಶಿಸ್ತಿನ ಪಾಠ ಕಲಿಸಬೇಕಾದ ಶಾಲೆಯಲ್ಲಿ ಈರೀತಿಯ ವರ್ತನೆ ಕಂಡು ಬಂದಿದ್ದು,ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿರುವ ಬಿಷಪ್ ಜಾನ್ಸನ್ ಗರ್ಲ್ಸ್ ಹೈಸ್ಕೂಲ್ನ ಪ್ರಾಂಶುಪಾಲಕಿ ಪಾರುಲ್ ಸೊಲೊಮನ್ ಅವರನ್ನು ಆಡಳಿತ ಮಂಡಳಿಯು ಬಲವಂತವಾಗಿ ಹೊರದಬ್ಬಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹುಟ್ಟುಹಾಕಿದೆ. ವೈರಲ್ ಆದ ವಿಡಿಯೋದಲ್ಲಿ, ಪ್ರಾಂಶುಪಾಲಕಿ ಪಾರುಲ್ ಅವರನ್ನು ಕುರ್ಚಿಯಿಂದ ಬಲವಂತವಾಗಿ ಹೊರಹಾಕಿ, ಅದೇ ಸ್ಥಾನಕ್ಕೆ ಹೊಸ ಪ್ರಾಂಶುಪಾಲರನ್ನು ನೇಮಕ ಮಾಡಿರುವುದು ಕಂಡುಬಂದಿದೆ. ಮಕ್ಕಳಿಗೆ ಶಿಸ್ತಿನ ಪಾಠ ಕಲಿಸಬೇಕಾದ ಶಾಲೆಯಲ್ಲಿ ಈರೀತಿಯ ವರ್ತನೆ ಕಂಡು ಬಂದಿದ್ದು, ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಲೆಯ ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರ ಗುಂಪು ಪ್ರಾಂಶುಪಾಲರ ಕಚೇರಿಗೆ ಪ್ರವೇಶಿಸಿ ಆಕೆಯ ಕುರ್ಚಿಯನ್ನು ಖಾಲಿ ಮಾಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದ ಪ್ರಾಂಶುಪಾಲಕಿಯನ್ನು ಬಲವಂತವಾಗಿ ಎಳೆದ್ಯೊಯ್ದು ಹೊರಹಾಕಲಾಗಿದೆ. ಬಳಿಕ ಹೊಸ ಪ್ರಾಶುಂಪಾಲರನ್ನು ನೇಮಕ ಮಾಡಲಾಗಿದೆ. ಈ ಘಟನೆಯು ಶಿಕ್ಷಣದ ಸ್ಥಿತಿ ಮತ್ತು ಶಾಲಾ ಆಡಳಿತಗಾರರ ವರ್ತನೆಯ ಬಗ್ಗೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಾಶುಂಪಾಲಕಿ ಪಾರುಲ್ ಸೊಲೊಮನ್ ಕರ್ನಲ್ ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಉಡುಪಿಯಲ್ಲಿ ಭಾರಿ ಮಳೆಗೆ ಮೊದಲ ಬಲಿ; ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಉಸುರುಗಟ್ಟಿ ಸಾವು
Published On - 1:51 pm, Sat, 6 July 24