
ಈಗಿನ ಜನರೇಷನ್ ಅವರು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವುದರಲ್ಲಿ ನಿಸ್ಸಿಮರು. ಕಾಲೇಜ್ ಡೇ, ಟ್ಯಾಲೆಂಟ್ ಡೇ ಎಂದ ಮೇಲೆ ಕೇಳಬೇಕೇ, ಡ್ಯಾನ್ಸ್ ಅಂತೂ ಇದ್ದೆ ಇರುತ್ತದೆ. ಆದರೆ ಈ ಶಾಸ್ತ್ರೀಯ ನೃತ್ಯಗಳ ಕಡೆಗೆ ಗಮನ ಹರಿಸುವವರು ಸ್ವಲ್ಪ ಕಡಿಮೆಯೇ. ಆದರೆ ಈ ವೈರಲ್ ವಿಡಿಯೋದಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (Nitte Mahalinga Adyanthaya Memorial Institute of Technology) ವಿದ್ಯಾರ್ಥಿನಿಯರು ಮಳೆಯನ್ನು ಲೆಕ್ಕಿಸದೆ ಹನುಮಾನ್ ಚಾಲೀಸ್‌ಗೆ (Hanuman Chalisa) ಭರತನಾಟ್ಯ ಪರ್ಫಾರ್ಮೆನ್ಸ್ ನೀಡಿದ್ದಾರೆ. ಈ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.
rednewsindia ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯರ ಗುಂಪೊಂದು ಕಾರಿಡಾರ್‌ನಲ್ಲಿ ಭರತನಾಟ್ಯ ಪ್ರದರ್ಶನ ನೀಡುತ್ತಿರುವುದನ್ನು ಕಾಣಬಹುದು. ಮಳೆಯ ನಡುವೆಯೇ ಹನುಮಾನ್ ಚಾಲೀಸ್‌ಗೆ ಅದ್ಭುತವಾಗಿ ಭರತನಾಟ್ಯ ಪ್ರದರ್ಶನ ನೀಡಿದ್ದು ಅಲ್ಲೇ ಇದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ನೃತ್ಯವನ್ನು ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ:Video: ಪುಷ್ಪಾ 2 ಸಿನಿಮಾದ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ ಬೆಂಗ್ಳೂರಿನ ಕಾಲೇಜ್ ಸ್ಟೂಡೆಂಟ್ಸ್
ಈ ವಿಡಿಯೋವನ್ನು ಇದುವರೆಗೂ ಮೂರು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಬಳಕೆದಾರರು ಕರ್ನಾಟಕ ಸಂಸ್ಕೃತಿಯ ತವರೂರು ಎಂದಿದ್ದಾರೆ. ಇನ್ನೊಬ್ಬರು ಕಲೆಯೂ ಭಕ್ತಿಯನ್ನು ಸಂಧಿಸಿದಾಗ ಮಳೆಯೂ ಲಯವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಡ್ಯಾನ್ಸ್ ಪರ್ಫಾರ್ಮೆನ್ಸ್ ನೋಡಿದಾಗ ಪ್ರತಿಕ್ಷಣವು ಮೈ ರೋಮಾಂಚನವಾಯಿತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ಧಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Tue, 9 September 25