ಸಂಗೀತವು ವ್ಯಕ್ತಿಯನ್ನು ಆಕರ್ಷಿಸುವ ಏಕೈಕ ಶಕ್ತಿಯಾಗಿದೆ. ಪ್ರತಿಯೊಬ್ಬರೂ ಸಂಗೀತದಿಂದ ಪ್ರಭಾವಿತರಾಗುತ್ತಾರೆ. ಅಂತೆಯೇ ಪ್ರಾಣಿ ಮತ್ತು ಪಕ್ಷಿಗಳು ಆಕರ್ಷಿತವಾಗುತ್ತವೆ. ಇದಕ್ಕೆ ಮುಖ್ಯ ಉದಾಹರಣೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ(Social media) ವಿಡಿಯೋವೊಂದು ವೈರಲ್ ಆಗಿದೆ. ಕೊಲೊರಾಡೋದ ಕಾಡಿನಲ್ಲಿ ಬಾಂಜೋ(Banjo) ಸಂಗೀತ ವಾದ್ಯವನ್ನು ನುಡಿಸುತ್ತಿರುವ ವ್ಯಕ್ತಿಯ ಬಳಿಗೆ ನರಿಯೊಂದು(Fox) ಬಂದಿದ್ದು, ವ್ಯಕ್ತಿ ನುಡಿಸುವ ಸಂಗೀತ ನಾದಕ್ಕೆ ಕಿವಿಯಾಡಿಸುವಂತೆ ನರಿ ಕಂಡು ಬಂದಿದೆ. ಸದ್ಯ ನೆಟ್ಟಿಗರು ಈ ವೈರಲ್ ವಿಡಿಯೋ ಕಂಡು ಸಂತೋಷಪಟ್ಟಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಗುಡ್ ನ್ಯೂಸ್ ಮೂವ್‌ಮೆಂಟ್ ಪೋಸ್ಟ್ ಮಾಡಿದ ಈ ವೈರಲ್ ವೀಡಿಯೊದಲ್ಲಿ, ಆಂಡಿ ಥಾರ್ನ್ ತನ್ನ ಬ್ಯಾಂಜೋ ನುಡಿಸುತ್ತಿರುವುದನ್ನು ಕಾಣಬಹುದು. ಅವನು ಒಂದು ರಮಣೀಯ ಸ್ಥಳದಲ್ಲಿ ಹಿತವಾದ ರಾಗವನ್ನು ನುಡಿಸುತ್ತಿದ್ದಾಗ ಇದ್ದಕ್ಕಿದ್ದಂತೆ ನರಿಯೊಂದು ಅವನಿಗೆ ಅಡ್ಡಲಾಗಿ ಬಂದು ಕುಳಿತಿತು. ಇದನ್ನು ಕಂಡ ಆಂಡಿ ಥಾರ್ನ್ ಹಿಂಜರಿಯಲಿಲ್ಲ. ಇದಕ್ಕೆ ಅನುಗುಣವಾಗಿ ನರಿ ಕೂಡ ಗಮನವಿಟ್ಟು ಸಂಗೀತವನ್ನು ಆಲಿಸಿದೆ.
ಸುಮಾರು 55 ಸೆಕೆಂಡ್ನ ಈ ವಿಡಿಯೋ 9.5 ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿದೆ. ಸಂಗೀತದ ಶಕ್ತಿ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನರಿ ಓಡಿ ಬಂದು ಕುಳಿತ ರೀತಿ ನೋಡಿ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಸ್ವಲ್ಪ ಯೋಚನೆ ಮಾಡಿ ಯಾವತ್ತು ಸಂಗೀತ ಕೇಳದೆ, ಇಂದು ಹೊಸದಾಗಿ ಸಂಗೀತ ಕೇಳಿದರೆ ಎನಾಗಬಹುದು ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಾರೆ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Published On - 11:39 am, Mon, 21 February 22