ಶ್ವಾನಗಳೆಂದರೆ ಮಕ್ಕಳಿಗೆ ತುಂಬಾನೇ ಪ್ರೀತಿ. ಮನೆಯ ಸಾಕು ನಾಯಿಗಳೊಂದಿಗೆ ಪುಟಾಣಿಗಳು ಬಲು ಆಪ್ತವಾಗಿರುತ್ತಾರೆ. ಅವುಗಳೊಂದಿಗೆ ಆಟವಾಡುತ್ತಾ ಸಮಯ ಕಳೆಯುತ್ತಿರುತ್ತಾರೆ. ಅಷ್ಟೇ ಅಲ್ಲದೇ ಎಲ್ಲೇ ಶ್ವಾನಗಳನ್ನು ಕಂಡರೂ ಈ ಪುಟಾಣಿ ಮಕ್ಕಳು ಅವುಗಳ ಜೊತೆ ಆಟವಾಡಲು ಇಷ್ಟ ಪಡುತ್ತಾರೆ. ಹೀಗೆ ಶ್ವಾನಗಳು ಮತ್ತು ಮಕ್ಕಳಿಗೆ ಸಂಬಂಧಿಸಿದ ಸುಂದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇಂತಹ ಕ್ಯೂಟ್ ವಿಡಿಯೋಗಳು ನಮ್ಮ ಮನಸ್ಸಿನ ಬೇಸರವನ್ನು ದೂರ ಮಾಡಿ ಮನಸ್ಸು ಉಲ್ಲಾಸಗೊಳ್ಳುವಂತೆ ಮಾಡುತ್ತದೆ. ಸದ್ಯ ಅಂತಹದ್ದೇ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಅಯೋಧ್ಯೆಯ ಸರಯೂ ನದಿ ತಟದಲ್ಲಿ ಪುಟ್ಟ ಹುಡುಗನೊಬ್ಬ ಬೀದಿ ನಾಯಿಯ ಮರಿಯೊಂದಿಗೆ ಆಟವಾಡುತ್ತಾ, ಬಾ ನಾನು ನಿನ್ನನ್ನು ನಿನ್ನ ತಾಯಿಯ ಬಳಿಗೆ ಕರ್ಕೊಂಡು ಹೋಗ್ತೀನಿ ಎನ್ನುತ್ತಾ, ತನ್ನ ಪುಟ್ಟ ಕೈಗಳಲ್ಲಿ ನಾಯಿ ಮರಿಯನ್ನು ಜೋಪಾನವಾಗಿ ಎತ್ತಿಕೊಂಡು ಹೋಗಿ ತಾಯಿ ಶ್ವಾನದ ಬಳಿ ಬಿಟ್ಟು ಬಂದಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
ಶಿಶಿರ್ ವ್ಯಾಸ್ (@_shishir_vyas) ಎಂಬವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಸರಯೂ ನದಿ ದಡದಲ್ಲಿ ಕಂಡಂತಹ ಮಧುರವಾದ ದೃಶ್ಯ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ನಾಯಿ ಮರಿಯನ್ನು ಎತ್ತಿಕೊಂಡು ಬಂದು ಅದರ ತಾಯಿಯ ಜೊತೆಗೆ ಸೇರಿಸುವ ಮಧುರವಾದ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ:
ವೈರಲ್ ವಿಡಿಯೋದಲ್ಲಿ ಅಯೋಧ್ಯೆಯ ಸರಯೂ ನದಿ ತಟದಲ್ಲಿ ಪುಟ್ಟ ಮಗುವೊಂದು ಅಲ್ಲೇ ಇದ್ದಂತಹ ನಾಯಿ ಮರಿಯ ಜೊತೆಗೆ ಆಟವಾಡುತ್ತಿರುತ್ತಾನೆ, ಅಲ್ಲೇ ಸ್ವಲ್ಪ ದೂರದಲ್ಲಿ ಆ ನಾಯಿ ಮರಿಯ ತಾಯಿ ಇರುವುದನ್ನು ಗಮನಿಸಿದ ಈ ಪುಟ್ಟ ಬಾಲಕ, ಬಾ ನಾನು ನಿನ್ನನ್ನು ನಿನ್ನ ತಾಯಿ ಬಳಿ ಬಿಟ್ಟು ಬರುತ್ತೇನೆ ಎನ್ನುತ್ತಾ, ತನ್ನ ಪುಟ್ಟ ಕೈಗಳಲ್ಲಿ ನಾಯಿ ಮರಿಯನ್ನು ಮೆಲ್ಲದೆ ಎತ್ತಿಕೊಂಡು ಹೋಗಿ ಜೋಪಾನವಾಗಿ ತಾಯಿ ಶ್ವಾನದ ಬಳಿ ಬಿಟ್ಟು ಬರುವಂತಹ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ವೈರಲ್ ಆಯಿತು ಯೋಧ-ಡಾಕ್ಟರ್ ಜೋಡಿಯ ವಿಶಿಷ್ಟ ವಿವಾಹ ಆಮಂತ್ರಣ ಪತ್ರಿಕೆ
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 7.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 5 ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಅಯ್ಯಯ್ಯೋ ಎಷ್ಟು ಮುದ್ದಾಗಿದೆ ಈ ದೃಶ್ಯʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಜವಬ್ದಾರಿಯುತ ಭಾರತೀಯ ಮಗುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಒಂದು ಮಗು ಇನ್ನೊಂದು ಮಗುವಿನ ಕಾಳಜಿ ವಹಿಸುವ ದೃಶ್ಯ ಬಹಳ ಅದ್ಭುತವಾಗಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ನಿಷ್ಕಲ್ಮಶ ಮನಸ್ಸುಗಳ ಈ ಸುಂದರ ಬಂಧವನ್ನು ನೋಡಲು ಎರಡು ಕಣ್ಣು ಸಾಲದು ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ