Video: ಹುಟ್ಟುಹಬ್ಬದ ದಿನ ಮಗಳು ಕೊಟ್ಟ ಸರ್ಪ್ರೈಸ್ ಗಿಫ್ಟ್ ನೋಡಿ ತಾಯಿ ಭಾವುಕ

ಆತ್ಮೀಯರ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಉಡುಗೊರೆಗಳನ್ನು ನೀಡಿ ಖುಷಿ ಪಡಿಸುತ್ತಾರೆ. ಆದರೆ ಇಲ್ಲೊಬ್ಬಳು ಮಗಳು ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಉಡುಗೊರೆಯಾಗಿ ಚಿನ್ನದ ಕಿವಿಯೋಲೆ ನೀಡಿದ್ದಾಳೆ. ಮಗಳ ಗಿಫ್ಟ್ ನೋಡಿ ತಾಯಿ ಭಾವುಕರಾಗಿದ್ದು, ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಹುಟ್ಟುಹಬ್ಬದ ದಿನ ಮಗಳು ಕೊಟ್ಟ ಸರ್ಪ್ರೈಸ್ ಗಿಫ್ಟ್ ನೋಡಿ ತಾಯಿ ಭಾವುಕ
ವೈರಲ್‌ ವಿಡಿಯೋ
Image Credit source: Instagram

Updated on: Dec 07, 2025 | 4:54 PM

ತಂದೆ ತಾಯಿಯರೇ (parents) ಹಾಗೆ, ತಮಗೆಷ್ಟೇ ನೋವು ಕಷ್ಟ ಇರಲಿ, ತಮ್ಮ ಮಕ್ಕಳಿಗೆ ಯಾವುದೇ ಕಷ್ಟಗಳು ಬರದಂತೆ ನೋಡಿಕೊಳ್ತಾರೆ. ಹೀಗಿರುವಾಗ ಮಕ್ಕಳು ತಮ್ಮ ವಿಶೇಷ ದಿನಗಳಲ್ಲಿ ಮರೆಯಲಾಗದ ಉಡುಗೊರೆ (gift) ನೀಡಿದ್ರೆ ಆ ಕ್ಷಣವನ್ನು ವಿವರಿಸಲು ಅಸಾಧ್ಯ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಮಗಳೊಬ್ಬಳು ತನ್ನ ತಾಯಿ ಹುಟ್ಟುಹಬ್ಬದ ದಿನ ಚಿನ್ನದ ಓಲೆಯನ್ನು ಉಡುಗೊರೆ ನೀಡಿ ಖುಷಿ ಪಡಿಸಿದ್ದಾಳೆ. ಈ ಭಾವನಾತ್ಮಕ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಪರ್ಣಾ ದೇವ್ಯಾಲ್ (aparna_devyal) ಹೆಸರಿನ ಖಾತೆಯಲ್ಲಿ ಈ ಹೃದಯ ಸ್ಪರ್ಶಿ ವಿಡಿಯೋ ಹಂಚಿಕೊಂಡು, ನಾನು ನಿಮಗೆ ಪ್ರಪಂಚದ ಎಲ್ಲಾ ಸಂತೋಷವನ್ನು ನೀಡಲು ಬಯಸುತ್ತೇನೆ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ಯುವತಿಯೂ ಮನೆಗೆ ಹಿಂದಿರುಗುವ ಮೊದಲು ಆಭರಣದ ಅಂಗಡಿಗೆ ಹೋಗಿ ಚಿನ್ನದ ಕಿವಿಯೋಲೆ ಖರೀದಿಸಿ ಗಿಫ್ಟ್ ಪ್ಯಾಕ್ ಮಾಡಿದ್ದಾಳೆ. ಮನೆಗೆ ಬಂದು ಬರ್ತ್ಡೇಗೆ ಸ್ಪೆಷಲ್ ಉಡುಗೊರೆಯನ್ನು ತನ್ನ ತಾಯಿಗೆ ನೀಡಿದ್ದಾಳೆ. ಮಗಳು ನೀಡಿದ ಗಿಫ್ಟ್ ನೋಡಿ ಒಂದು ಕ್ಷಣ ಶಾಕ್ ಆಗಿರುವುದನ್ನು ಕಾಣಬಹುದು. ಆ ಕಿವಿಯೋಲೆ ತೊಟ್ಟು ಮಗಳನ್ನು ಅಪ್ಪಿ ಮುದ್ದಾಡುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ವೃತ್ತಿ ಜೀವನದ ಒತ್ತಡಕ್ಕೆ ಮಣಿದು ತಂದೆಗೆ ಕರೆ ಮಾಡಿದ ಯುವತಿ, ಮುಂದೇನಾಯ್ತು ನೋಡಿ

ಈ ವಿಡಿಯೋ 5.3 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ವಿಡಿಯೋ ತಾಯಿ ಮಗಳ ನಡುವಿನ ಬಾಂಧವ್ಯವನ್ನು ಸಾರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಈ ದೃಶ್ಯ ನನ್ನ ಕಣ್ಣಲ್ಲಿ ನೀರು ತರಿಸಿತು ಎಂದಿದ್ದಾರೆ. ಮತ್ತೊಬ್ಬರು, ತಾಯಂದಿರು ಎಂದಿಗೂ ಉಡುಗೊರೆಗಳನ್ನು ಬಯಸುವುದಿಲ್ಲ, ಸರ್ಪ್ರೈಸ್ ಗಿಫ್ಟ್ ನೋಡಿ ಭಾವುಕರಾಗುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Sun, 7 December 25