Video: ದೆಹಲಿಗಿಂತ ಬೆಂಗಳೂರು ಬೆಸ್ಟ್, ಈ ನಗರವನ್ನೇ ರಾಷ್ಟ್ರ ರಾಜಧಾನಿ ಮಾಡಿ ಎಂದ ಯುವತಿ

ವಿವಿಧ ಜಿಲ್ಲೆ ರಾಜ್ಯಗಳಿಂದ ಬೆಂಗಳೂರಿಗೆ ಲಕ್ಷಾಂತರ ಜನರು ಬರುತ್ತಾರೆ. ಹೀಗೆ ಬಂದವರಲ್ಲಿ ಕೆಲವರು ಬೆಂಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಇದೀಗ ದೆಹಲಿ ಮೂಲದ ಯುವತಿಯೂ ಗಾಳಿಯ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಉಲ್ಲೇಖಿಸಿ ದೆಹಲಿಗಿಂತ ಬೆಂಗಳೂರು ರಾಜಧಾನಿಯಾಗಲು ಯೋಗ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ದೆಹಲಿಗಿಂತ ಬೆಂಗಳೂರು ಬೆಸ್ಟ್, ಈ ನಗರವನ್ನೇ ರಾಷ್ಟ್ರ ರಾಜಧಾನಿ ಮಾಡಿ ಎಂದ ಯುವತಿ
ವೈರಲ್ ವಿಡಿಯೋ
Image Credit source: Instagram

Updated on: Dec 28, 2025 | 12:09 PM

ಬೆಂಗಳೂರು, ಡಿಸೆಂಬರ್ 28: ರಾಷ್ಟ್ರ ರಾಜಧಾನಿ ಯಾವುದೆಂದು ಕೇಳಿದ್ರೆ ಮೊದಲು ನೆನಪಿಗೆ ಬರೋದೇ ದೆಹಲಿ. ಆದರೆ ದೆಹಲಿಯ ಯುವತಿಯು (young woman) ಬೆಂಗಳೂರನ್ನು (Bengaluru) ದೇಶದ ರಾಜಧಾನಿಯಾಗಿ ಮಾಡಬೇಕು ಎಂದು ಹೇಳಿದ್ದಾಳೆ. ಬೆಂಗಳೂರಿಗೆ ಸ್ಥಳಾಂತರಗೊಂಡ ಬಳಿಕ ಇಲ್ಲಿನ ಉತ್ತಮ ಗುಣಮಟ್ಟದ ಜೀವನ, ವಾಯುಗುಣಮಟ್ಟ, ಸುರಕ್ಷತೆ ಹಾಗೂ ರಸ್ತೆ ಈ ಎಲ್ಲವನ್ನು ಹತ್ತಿರದಿಂದ ಗಮನಿಸಿ ಈ ಮಾತನ್ನು ಹೇಳಿದ್ದಾಳೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಮೃದ್ಧಿ ಮಖಿಜಾ (simridhimakhija) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ದೆಹಲಿ ಮೂಲದ ಯುವತಿಯೊಬ್ಬಳು ಬೆಂಗಳೂರಿನ ಜೀವನದ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದನ್ನು ನೋಡಬಹುದು. ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಸ್ಥಳಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದಾಳೆ. ತನ್ನ ಹೆತ್ತವರನ್ನು ಕಾಣಲು ದೆಹಲಿಗೆ ಹೋದ ಬಳಿಕ ತನ್ನ ಈ ಆಲೋಚನೆಗಳು ಮತ್ತಷ್ಟು ಬಲಗೊಂಡವು. ದೆಹಲಿಯ ಗಾಳಿಯು ಕೆಟ್ಟದಾಗಿರುವಂತೆ ಅನಿಸಿತು. ಉಸಿರಾಟ ಕಷ್ಟವಾಯಿತು.ಅಕ್ಷರಶಃ ಗ್ಯಾಸ್ ಚೇಂಬರ್‌ನಲ್ಲಿರುವಂತೆ ಆಯಿತು. ಆದರೆ ಬೆಂಗಳೂರಿನಲ್ಲಿ ಈ ಸಮಸ್ಯೆ ಇಲ್ಲ. ಹೀಗಾಗಿ ದೆಹಲಿಗಿಂತ ಬೆಂಗಳೂರೇ ರಾಜಧಾನಿಯಾಗಲು ಅರ್ಹವಾಗಿದೆ ಎಂದಿದ್ದಾಳೆ.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಈ ನಗರವು ರಾತ್ರಿ ಕೂಡ ಮಹಿಳೆಯರಿಗೆ ಸುರಕ್ಷಿತವಾಗಿದೆ. ಸ್ನೇಹಿತರನ್ನು ಭೇಟಿಯಾಗಿ, ರಾತ್ರಿ 10 ಗಂಟೆಗೆ ಒಬ್ಬಳೇ ಮನೆಗೆ ಹೋಗುವಾಗ ನನಗೆ ಒಂದೊಳ್ಳೆ ಅನುಭವವಾಯಿತು. ದೆಹಲಿಯಲ್ಲಿ ಇಂತಹ ಅನುಭವವಾಗಲ್ಲ. ಬೆಂಗಳೂರಿಗೆ ಹೆಚ್ಚು ಆದ್ಯತೆ ಕೊಡಲು ಇದೂ ಕೂಡ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾಳೆ.

ದೆಹಲಿಗಿಂತ ಬೆಂಗಳೂರಿನ ಮೂಲಸೌಕರ್ಯ, ನಗರ ವ್ಯವಸ್ಥೆ ಮತ್ತು ರಸ್ತೆಗಳು ಉತ್ತಮವಾಗಿದೆ. ಪಾದಚಾರಿಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಭಾರತಕ್ಕೆ ಬರುವ ಪ್ರವಾಸಿಗರು ಕಲುಷಿತಗೊಂಡ ದೆಹಲಿಗೆ ಏಕೆ ಬರಬೇಕು?. ಬೆಂಗಳೂರಿಗೆ ಬಂದ ಉತ್ತಮ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ:ಹಬ್ಬದ ದಿನ ಬೆಂಗಳೂರಿಗೆ ಬರುವಾಗ ಖಾಲಿ ಖಾಲಿ, ಆದರೆ ಹೊರಗೆ ಹೋಗುವಾಗ ಹೇಗಿರುತ್ತದೆ ನೋಡಿ?

ಈ ವಿಡಿಯೋ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನೀವು ಹೇಳುವುದನ್ನು ನಾವು ಒಪ್ಪುತ್ತೇವೆ ಎಂದರೆ, ಮತ್ತೊಬ್ಬರು ನಾನು ಬೆಂಗಳೂರಿಗ. ಈ ಯುವತಿ ಹೇಳುವಂತೆ ಬೆಂಗಳೂರು ಅಷ್ಟೇನು ಚೆನ್ನಾಗಿಲ್ಲ. ನೀವು ಹೈದರಾಬಾದ್, ಚೆನ್ನೈ, ಪುಣೆಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪ್ರಾಮಾಣಿಕ ಅಭಿಪ್ರಾಯ ಹೇಳಿದ್ದೀರಾ, ನೀವು ಗಮನಿಸಿದ್ದಕ್ಕೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:07 pm, Sun, 28 December 25