ಹಬ್ಬದ ದಿನ ಬೆಂಗಳೂರಿಗೆ ಬರುವಾಗ ಖಾಲಿ ಖಾಲಿ, ಆದರೆ ಹೊರಗೆ ಹೋಗುವಾಗ ಹೇಗಿರುತ್ತದೆ ನೋಡಿ?
ಕ್ರಿಸ್‌ಮಸ್ ಹಬ್ಬದಂದು ಬೆಂಗಳೂರಿನಲ್ಲಿ ಸಂಚಾರ ವಿಭಿನ್ನವಾಗಿತ್ತು. ವೈರಲ್ ವಿಡಿಯೋವೊಂದು ನಗರಕ್ಕೆ ಪ್ರವೇಶಿಸುವ ರಸ್ತೆಗಳು ಖಾಲಿಯಾಗಿದ್ದರೆ, ನಗರದಿಂದ ಹೊರ ಹೋಗುವ ಮಾರ್ಗಗಳಲ್ಲಿ ಭಾರಿ ವಾಹನ ದಟ್ಟಣೆ ಇರುವುದನ್ನು ತೋರಿಸಿದೆ. ಹಬ್ಬದ ದಿನಗಳಲ್ಲಿ ಬೆಂಗಳೂರಿನ ರಸ್ತೆಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಈ ಹಾಸ್ಯಮಯ ವಿಡಿಯೋ ವಿವರಿಸುತ್ತದೆ. ನೆಟ್ಟಿಗರು ಈ ವಿಶಿಷ್ಟ ಸಂಚಾರ ಪರಿಸ್ಥಿತಿಗೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಹಬ್ಬ ದಿನಗಳು ಬಂದರೆ ಸಾಕು, ರಸ್ತೆಗಳೆಲ್ಲ ಖಾಲಿ ಖಾಲಿ, ಇದೀಗ ನೆನ್ನೆ (ಡಿ.25) ಕ್ರಿಸ್‌ಮಸ್ (Bengaluru traffic) ಇದ್ದ ಕಾರಣ ಬೆಂಗಳೂರಿನ ಹೊರವಲಯದಲ್ಲಿರುವ ಹೆದ್ದಾರಿಯಲ್ಲಿ ವಾಹನ ಸಂಚಾರ ಹೇಗಿತ್ತು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತೋರಿಸಿದ್ದಾರೆ. ಕಿಸ್ಮಸ್ ದಿನ ಬೆಂಗಳೂರಿನಿಂದ ಊರಿಗೆ ಹೋಗುತ್ತಿರುವ ಒಂದು ಕಡೆಯಾದರೆ, ಇನ್ನೊಂದು ಕಡೆ ಬೆಂಗಳೂರಿಗೆ ಬರುವವರು. ಹಬ್ಬದ ದಿನ ಹೋಗುವಾಗ ಹಾಗೂ ಬರುವಾಗ ರಸ್ತೆಗಳು ಹೇಗಿರುತ್ತದೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಿದ್ದಾರೆ. ಈ ವಿಡಿಯೋವನ್ನು ತುಂಬಾ ತಮಾಷೆಯಾಗಿ ಹಂಚಿಕೊಂಡಿದ್ದಾರೆ. ವಿಡಿಯೋವನ್ನು ನೋಡಿ ಹಲವು ನೆಟ್ಟಗರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿದ್ದಾರೆ.
@wanderjoy ಎಂಬ ಇನ್ಸ್ಟಾಗ್ರಾಮ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಬೆಂಗಳೂರಿಗೆ ಬರುವಾಗ ರಸ್ತೆಗಳು ಫುಲ್ ಖಾಲಿ ಖಾಲಿ ಇದೆ. ಆದರೆ ಅದೇ ಹೈವೇ ಮತ್ತೊಂದು ಕಡೆ ಅಂದರೆ ಬೆಂಗಳೂರಿನಿಂದ ಹೊರಗೆ ಹೋಗುವಾಗ ತುಂಬಾ ಟ್ರಾಫಿಕ್ ಇರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಬೆಂಗಳೂರಿಗೆ ಪ್ರವೇಶಿಸುವಾಗ ಹಾಗೂ ನಿರ್ಗಮಿಸುವಾಗ ರಸ್ತೆಗಳು ಹೇಗಿರುತ್ತದೆ ನೋಡಿ. ಇದು ಬೆಂಗಳೂರಿನಲ್ಲಿ ಕಂಡು ಬಂದ ವಿಭಿನ್ನ ಸಂಚಾರ ಸ್ಥಿತಿ ಎಂದು ಈ ವಿಡಿಯೋದಲ್ಲಿ ಬರೆದುಕೊಳ್ಳಲಾಗಿದೆ. ಡಿಸೆಂಬರ್ 25 ರಂದು ಬೆಳಿಗ್ಗೆ 7 ಗಂಟೆಗೆ ಬೆಂಗಳೂರನ್ನು ಪ್ರವೇಶ ಮಾಡುವಾಗ ಖಾಲಿ ರಸ್ತೆಗಳು. ಆದರೆ ಮತ್ತೊಂದು ಕಡೆ ಸಿಕ್ಕಪಟ್ಟೆ ವಾಹನ ದಟ್ಟಣೆ ಇದೆ ಎಂದು ಹೇಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ವಿಡಿಯೋದ ಬಗ್ಗೆ ನೆಟ್ಟಿಗರು ಹೇಳಿದ್ದೇನು?
ರಜಾ ದಿನ ಎಂದರೆ ಬೆಂಗಳೂರಿನ ಅರ್ಧದಷ್ಟು ಜನರು ನಗರದಿಂದ ಹೊರಗೆ ಓಡುತ್ತಾರೆ ಎಂದು ಒಬ್ಬರು ಹೇಳಿದ್ದಾರೆ. ಬೆಂಗಳೂರಿನೊಳಗೆ ಪ್ರಯಾಣ ಮಾಡುವ ಅವಧಿ 90ರ ದಶಕದಂತೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಹೊಸ ವರ್ಷಕ್ಕೆ ಇದಕ್ಕಿಂತ ಡಬಲ್ ಇರುತ್ತದೆ ನೋಡಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ರಜೆ ಇರುವ ಕಾರಣ ಎಲ್ಲರೂ ಹೊರೆಗೆ ಹೋಗುತ್ತಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಸತತ 10 ವರ್ಷಗಳಿಂದ ಬಿರಿಯಾನಿಗೆ ಅಗ್ರಸ್ಥಾನ: ಸ್ವಿಗ್ಗಿಯಲ್ಲಿ 93 ಮಿಲಿಯನ್ ಬಿರಿಯಾನಿ ಆರ್ಡರ್
ಬೆಂಗಳೂರು ಸಂಚಾರ:
ಈಗಾಗಲೇ ಬೆಂಗಳೂರು ಟ್ರಾಫಿಕ್ಗೆ ಹೆಸರುವಾಸಿ, ಇದು ದೇಶದ ಅತ್ಯಂತ ಜನದಟ್ಟಣೆಯ ನಗರಗಳಲ್ಲಿ ಒಂದಾಗಿದೆ. ಹಬ್ಬ ದಿನ ಈ ನಗರದ ಚಿತ್ರಣವೇ ಬದಲಾಗುತ್ತದೆ. ನಗರದೊಳಗಿನ ರಸ್ತೆಗಳು ಸುಗಮವಾಗಿದ್ದರೆ, ಹೊರ ಹೋಗುವ ಮಾರ್ಗಗಳು ಭಾರೀ ದಟ್ಟಣೆಯಿಂದ ಕೂಡಿರುತ್ತದೆ. ಈ ವರ್ಷದ ಆರಂಭದಲ್ಲಿ, ದೀಪಾವಳಿಯ ಸಮಯದಲ್ಲಿ ಬೆಂಗಳೂರು ರಸ್ತೆಗಳು ತುಂಬಾ ಶಾಂತವಾಗಿರುತ್ತದೆ. ಈ ಮೌನವನ್ನು ನೋಡಿ ಒಬ್ಬರು ಬೆಂಗಳೂರು “ಭೂತ ಪಟ್ಟಣ” ದಂತೆ ಕಾಣುತ್ತಿದೆ ಎಂದು ಟೀಕಿಸಿದ್ದರು.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




