AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'

‘ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ’

ಭಾವನಾ ಹೆಗಡೆ
|

Updated on: Dec 26, 2025 | 2:58 PM

Share

ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಗಾನವಿ (26), ಆತ್ಮಹತ್ಯೆಗೆ ಯತ್ನಿಸಿದ್ದರು. ಹನಿಮೂನ್​ನಲ್ಲಿಯೇ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿದ್ದು, ಮಾನಸಿಕ ಒತ್ತಡಕ್ಕೊಳಗಾದ ಗಾನವಿ, ಪಾಲಕರ ಮನೆಗೆ ಮರಳಿದ್ದರು. ಈ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದ ಗಾನವಿಯನ್ನು ಪಾಲಕರು ಆಸ್ಪತ್ರೆಗೆ ಸೇರಿಸಿದ್ದರೂ ಬ್ರೇನ್ ಡೆಡ್ ಆಗಿದ್ದ ಕಾರಣ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಆಕೆಯ ಪತಿ ಸೂರಜ್ ಮತ್ತು ಅವನ ಕುಟುಂಬದವರ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿದ್ದು,ಅವರ ವಿರುದ್ಧ ರಾಮಮೂರ್ತಿನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಗಾನವಿಯ ದೊಡ್ಡಮ್ಮ, ಅವನು ಗಂಡಸೇ ಅಲ್ಲ ಎಂದು ಆಕೆಗೆ ಫಸ್ಟ್​​ ನೈಟ್​​ ದಿನವೇ ಗೊತ್ತಾಗಿತ್ತು ಎಂದು ಹೇಳಿಕೊಂಡು ನೋವು ತೋಡಿಕೊಂಡಿದ್ದಾರೆ.

ಬೆಂಗಳೂರು, ಡಿಸೆಂಬರ್ 26: ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಗಾನವಿ (26), ಆತ್ಮಹತ್ಯೆಗೆ ಯತ್ನಿಸಿದ್ದರು. ಹನಿಮೂನ್​ನಲ್ಲಿಯೇ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿದ್ದು, ಮಾನಸಿಕ ಒತ್ತಡಕ್ಕೊಳಗಾದ ಆಕೆ, ಪಾಲಕರ ಮನೆಗೆ ಮರಳಿದ್ದರು. ಈ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದ ಗಾನವಿಯನ್ನು ಪಾಲಕರು ಆಸ್ಪತ್ರೆಗೆ ಸೇರಿಸಿದ್ದರೂ ಬ್ರೈನ್ ಡೆಡ್ ಆಗಿದ್ದ ಕಾರಣ ಮೃತಪಟ್ಟಿದ್ದರು. ಈ ಹಿನ್ನೆಲೆ ಆಕೆಯ ಪತಿ ಸೂರಜ್ ಮತ್ತು ಅವನ ಕುಟುಂಬದವರ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ರಾಮಮೂರ್ತಿನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಗಾನವಿಯ ದೊಡ್ಡಮ್ಮ, ಅವನು ಗಂಡಸೇ ಅಲ್ಲ ಎಂದು ಆಕೆಗೆ ಫಸ್ಟ್​​ ನೈಟ್​​ ದಿನವೇ ಗೊತ್ತಾಗಿತ್ತು ಎಂದು ಹೇಳಿಕೊಂಡು ನೋವು ತೋಡಿಕೊಂಡಿದ್ದಾರೆ.

ಮದುವೆಗೆ ಬರೋಬ್ಬರಿ 50 ಲಕ್ಷ ರೂ. ಖರ್ಚು ಮಾಡಲಾಗಿತ್ತು ಮತ್ತು ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ಧೂರಿ ಆರತಕ್ಷತೆ ಏರ್ಪಡಿಸಲಾಗಿತ್ತು ಎಂದ ಮೃತಳ ದೊಡ್ಡಮ್ಮ, ಮದುವೆಗೂ ಮುನ್ನ ವರದಕ್ಷಿಣೆ ಬಗ್ಗೆ ಯಾವುದೇ ಬೇಡಿಕೆ ಸೂರಜ್ ಕುಟುಂಬ ಯಾವುದೇ ಬೇಡಿಕೆ ಇಡಲಿಲ್ಲ. ಆದರೆ ಮದುವೆಯಾದ ಮರುದಿನದಿಂದಲೇ ಚಿನ್ನ, ಸೈಟ್, ಕಾರು ಹಾಗೂ ಪ್ರತಿ ತಿಂಗಳು ಹಣಕ್ಕಾಗಿ ಗಾನವಿಗೆ ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.