ಸಚಿವ ಸೋಮಣ್ಣ ಎದುರೇ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ರಾಮನಗರ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಹಾಗೂ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ನಡುವೆ ಕೇಂದ್ರ ಸಚಿವ ವಿ ಸೋಮಣ್ಣ ಎದುರಲ್ಲೇ ತೀವ್ರ ಮಾತಿನ ಜಟಾಪಟಿ ನಡೆದಿದ್ದು, ಘಟನೆಯ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಸಚಿವರ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ನಂತರ ರೈಲ್ವೆ ಕಾಮಗಾರಿಗಳ ವೀಕ್ಷಣೆ ಮುಂದುವರಿದಿದೆ.
ರಾಮನಗರ, ಡಿಸೆಂಬರ್ 26: ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಹಾಗೂ ನಗರಸಭೆ ಅಧ್ಯಕ್ಷರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರ ಎದುರೇ ಈ ಘಟನೆ ನಡೆದಿರುವುದು ವಿಶೇಷ. ರಾಮನಗರಕ್ಕೆ ರೈಲ್ವೆ ಕಾಮಗಾರಿಗಳ ವೀಕ್ಷಣೆಗೆ ಆಗಮಿಸಿದ್ದ ಸಚಿವ ವಿ. ಸೋಮಣ್ಣ ಅವರ ಎದುರಲ್ಲೇ, ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹಾಗೂ ರಾಮನಗರ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ನಡುವೆ ಮಾತಿನ ಜಟಾಪಟಿ ಆರಂಭವಾಯಿತು. ಕೆಲಕಾಲ ಇಬ್ಬರ ನಡುವಿನ ವಾಗ್ವಾದ ತೀವ್ರಗೊಂಡಿತು. ಪರಿಸ್ಥಿತಿ ಕೈ ಮೀರುವ ಲಕ್ಷಣ ಕಾಣುತ್ತಿದ್ದಂತೆಯೇ ಸಚಿವ ವಿ. ಸೋಮಣ್ಣ ಮಧ್ಯ ಪ್ರವೇಶಿಸಿ ನಗರಸಭೆ ಅಧ್ಯಕ್ಷರನ್ನು ಸಮಾಧಾನಪಡಿಸಿದರು.
