
ಸೆಲೆಬ್ರಿಟಿಗಳು, ಸಿನಿಮಾ ತಾರೆಯರು, ಕ್ರಿಕೆಟರ್ಸ್ಗಳು ಅವರ ನೆಚ್ಚಿನ ಹೋಟೆಲ್, ಖಾದ್ಯ, ರೆಸ್ಟೋರೆಂಟ್, ವಿನ್ಯಾಸಕಾರ, ಸೆಲೂನ್ಗಳನ್ನು ನೋಡಿರಬಹುದು, ಆದರೆ ಬೀದಿ ಬದಿ ಇರುವ ಪಾನ್ ಅಂಗಡಿಗೂ (Delhi celebrity paan shop) ಸೆಲೆಬ್ರಿಟಿಗಳು ಬರುತ್ತಾರೆ ಎಂಬುದನ್ನು ನಂಬುತ್ತೀರಾ? ಹೌದು ಇದನ್ನು ನಂಬಲೇಬೇಕು. ದೆಹಲಿಯಲ್ಲಿರುವ ಈ ಪಾನ್ ಅಂಗಡಿಗೆ ಕಪೂರ್, ಬಚ್ಚನ್, ಅಂಬಾನಿ ಕುಟುಂಬದವರು ಬಂದು ಪಾನ್ ಸವಿಯುತ್ತಾರೆ. ಈ ಅಂಗಡಿಯನ್ನು 1997ರಲ್ಲಿ ಪ್ರಾರಂಭಿಸಲಾಗಿದೆ. ಅಂದಿನಿಂದ ಇಂದಿನವರೆಗೆ ಅದೇ ರುಚಿಯ ಶ್ರೀಮಂತಿಕೆಯನ್ನು ಉಳಿಸಿಕೊಂಡು ಬಂದಿದೆ. ಇಂದಿಗೂ ಜನರ ಬಾಯಿಯಲ್ಲಿ ಅದರ ಅದ್ಭುತ ರುಚಿ ಹಚ್ಚೆಯಾಗಿದೆ. ಇಲ್ಲಿ ವಿಭಿನ್ನ ರೀತಿಯ ಹಾಗೂ ಬೇರೆ ಬೇರೆ ಪಾನ್ಗಳು ಇದೆ. ಜತೆಗೆ ಅದಕ್ಕೆ ತಕ್ಕಂತೆ ಬೆಲೆ ಕೂಡ ಇದೆ.
ಸುನಿಲ್ ಗವಾಸ್ಕರ್, ಅನಿಲ್ ಅಂಬಾನಿ, ಅಮಿತಾಬ್ ಬಚ್ಚನ್ ಮತ್ತು ಸುನಿಲ್ ದತ್ ಅವರಂತಹ ಅನೇಕ ಪ್ರಸಿದ್ಧ ವ್ಯಕ್ತಿಗಳು ಇಲ್ಲಿಗೆ ಬರುತ್ತಾರೆ. ಈ ಅಂಗಡಿಯ ಹೆಸರು ದೆಹಲಿ ಪ್ರಿನ್ಸ್ ಪಾನ್ ಮತ್ತು ತಿಂಡಿಗಳು ಎಂದು. ಇದನ್ನು 1977ರಲ್ಲಿ ಜಿತೇಂದ್ರ ಕೇಶ್ವಾನಿ ಅವರ ಅಜ್ಜ ಪ್ರಾರಂಭಿಸಿದ್ದು, ಈ ಅಂಗಡಿಯಲ್ಲಿ ವಿಭಿನ್ನ ಪಾನ್ ನೀಡುವ ಕಾರಣ, ಜನ ಅವರ ಪಾನ್ ರುಚಿಗೆ ಫಿದಾ ಆಗಿದ್ದಾರೆ. ಪಾನ್ ಬೆಲೆ 50 ರೂನಿಂದ ಪ್ರಾರಂಭವಾಗಿ 500 ರೂ. ವರೆಗೆ ಇದೆ. ಇದಕ್ಕೆ ಕ್ಯಾಟೆಚು, ವೀಳ್ಯದೆಲೆ ಮತ್ತು ಫೆನ್ನೆಲ್ ಬೀಜದಂತಹ ವಿಭಿನ್ನ ಆಹಾರ ಪದಾರ್ಥಗಳನ್ನು ಸೇರಿಸಲಾಗುತ್ತದೆ.
ಇದನ್ನೂ ಓದಿ: ‘ಹೈಡ್ ಅಂಡ್ ಸೀಕ್ ಬೀಚ್’: ದಿನಕ್ಕೆ ಎರಡು ಬಾರಿ ಕಣ್ಮರೆಯಾಗುವ ಸಮುದ್ರದ ನೀರು
ಹಲವಾರು ಕ್ರೀಡಾಪಟುಗಳು, ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳಾದ ಸುನಿಲ್ ಗವಾಸ್ಕರ್, ಅನಿಲ್ ಅಂಬಾನಿ, ಅಮಿತಾಬ್ ಬಚ್ಚನ್, ಸುನಿಲ್ ದತ್, ದಿಲೀಪ್ ಕುಮಾರ್, ಆಶಿಶ್ ನೆಹ್ರಾ, ಬಾಳ್ ಠಾಕ್ರೆ ಮತ್ತು ಇತರ ಹಲವು ಜನರನ್ನು ಈ ಪ್ರಸಿದ್ಧ ದೆಹಲಿ ಪ್ರಿನ್ಸ್ ಪಾನ್ ಸೆಳೆದಿದೆ. ಕಪೂರ್ ಕುಟುಂಬದವರು ತಮ್ಮ ಮನೆಯ ಕಾರ್ಯಕ್ರಮದಲ್ಲಿ ಇಲ್ಲಿಯ ಪಾನ್ನ್ನು ನೀಡುತ್ತಾರೆ. ಜತೆಗೆ ಬಾಲಿವುಡ್‌ನಲ್ಲಿ ಆಗುವ ಕೆಲವೊಂದು ಕಾರ್ಯಕ್ರಮದಲ್ಲಿ ಈ ಪಾನ್ ಇದೇ ಇರುತ್ತದೆ. ಈಗಲ್ಲೂ ಅನೇಕ ಬಾಲಿಪುಡ್ ತಾರೆಯರ ಮನೆಯಲ್ಲಾಗುವ ಕಾರ್ಯಕ್ರಮದಲ್ಲಿ ಈ ಪಾನ್ ಇರುತ್ತದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ