ವೀಲ್​​ಚೇರ್​ನಲ್ಲಿ ಕುಳಿತು 10 ಟನ್ ತೂಕದ ಟ್ರಕ್​ ಎಳೆಯುತ್ತಾರೆ ಈ ವ್ಯಕ್ತಿ

| Updated By: Pavitra Bhat Jigalemane

Updated on: Mar 15, 2022 | 3:09 PM

ಇಲ್ಲೊಬ್ಬ ಅಂಗವಿಕಲ ವ್ಯಕ್ತಿ ಎರಡು 10  ಟನ್​ ಭಾರದ ಟ್ರಕ್​ ಅನ್ನು ವೀಲ್​ಚೇರ್​ನಲ್ಲಿ ಕುಳಿತು ಎಳೆಯುತ್ತಾರೆ. ಸದ್ಯ ಈ ವಿಚಾರ ಜಗತ್ತಿನೆಲ್ಲಡೆ ವೈರಲ್​ ಆಗಿದೆ.

ವೀಲ್​​ಚೇರ್​ನಲ್ಲಿ ಕುಳಿತು 10 ಟನ್ ತೂಕದ ಟ್ರಕ್​ ಎಳೆಯುತ್ತಾರೆ ಈ ವ್ಯಕ್ತಿ
ಅಂಗವಿಕಲ ವ್ಯಕ್ತಿ
Follow us on

ಆರೋಗ್ಯವಾಗಿರುವ ವ್ಯಕ್ತಿಗಳು ಸಾಹಸದ ತರಬೇತಿ ಪಡೆಯುವುದು ಸಾಮಾನ್ಯ. ಆದರೆ ಅಂಗವಿಕಲ ವ್ಯಕ್ತಿಗಳು ಸಾಹಸಕ್ಕೆ ತರಬೇತಿ ಪಡೆಯುವುದು ವಿಶಿಷ್ಟವಾಗಿದೆ. ಇಲ್ಲೊಬ್ಬ ಅಂಗವಿಕಲ ವ್ಯಕ್ತಿ (Disabled Man) ಎರಡು 10  ಟನ್​ ಭಾರದ ಟ್ರಕ್​ ಅನ್ನು ವೀಲ್​ಚೇರ್​ನಲ್ಲಿ (Wheelchair) ಕುಳಿತು ಎಳೆಯುತ್ತಾರೆ. ಸದ್ಯ ಈ ವಿಚಾರ ಜಗತ್ತಿನೆಲ್ಲಡೆ ವೈರಲ್​ ಆಗಿದೆ. ವೀಲ್​ ಚೇರ್​ ಮೇಲೆ ಕುಳಿತ ವ್ಯಕ್ತಿ ಭಾರ ಎತ್ತಿ ತರಬೇತಿ ಪಡೆಯುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಡೇವಿಡ್ ವಾಲ್ಷ್, ಮೂರು ಮಕ್ಕಳ ತಂದೆ, 2012 ರಲ್ಲಿ ಮಲ್ಟಿಪಲ್ ಸ್ಕ್ಲೆರೋಸಿಸ್ ಎನ್ನುವ ಕಾಯಿಲೆಗೆ ತುತ್ತಾಗಿದ್ದರು. ಸೈನ್ಯದಲ್ಲಿ ಕೆಲಸಮಾಡುತ್ತಿದ್ದ ಅವರು 2016ರಲ್ಲಿ ಸೇನೆಯನ್ನು ತೊರೆದು ದೈಹಿಕ ತರಬೇತಿ ಪಡೆಯಲು ಪ್ರಾರಂಭಿಸಿದರು. ಕೇವಲ ಐದು ವರ್ಷಗಳ ನಂತರ, ಅವರು ಹಲವು ಸ್ಟ್ರಾಂಗ್‌ಮ್ಯಾನ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರು. 2020ರಲ್ಲಿ, ಅವರು ವಿಶ್ವದ ಪ್ರಬಲ ಅಂಗವಿಕಲ ವ್ಯಕ್ತಿಯಲ್ಲಿ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದರು.

ಈ ವರ್ಷ, ಅವರು ಅಗ್ರಸ್ಥಾನದಲ್ಲಿ ಸ್ಥಾನ ಪಡೆಯುವ ಭರವಸೆಯನ್ನು ಹೊಂದಿದ್ದಾರೆ.  ಡೇವಿಡ್ ಇ​ತ್ತೀಚಿಗೆ ಎರಡು 10-ಟನ್ ಟ್ರಕ್‌ಗಳನ್ನು ಯಾವುದೇ ಸಹಾಯವಿಲ್ಲದೆ ತನ್ನ ಗಾಲಿಕುರ್ಚಿಯಲ್ಲಿ ಎಳೆದು ಸಾಧನೆ ಮಾಡಿದ್ದಾರೆ. ವಾಲ್ಷ್ ಅವರು ರೋಗ ಕಾಣಸಿಕೊಳ್ಳುವ ಮೊದಲು ಸ್ಟ್ರಾಂಗ್‌ಮೆನ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ 2014 ರಲ್ಲಿ ತರಬೇತಿ ಅವಧಿಯಲ್ಲಿ ಬಲಗೈ ನಿಶ್ಚೇಷ್ಟಿತವಾಗಿದೆ ಎಂದು ಅವರು ಭಾವಿಸಿದ ನಂತರ ಜೀವನ ಬದಲಾಗಿತ್ತು ಎನ್ನುತ್ತಾರೆ. ಈ ಕುರಿತು ಟೈಮ್ಸ್​ ನೌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ:

ನಡು ರಸ್ತೆಯಲ್ಲಿ ಹೊತ್ತಿ ಉರಿದ ಕೋಟಿ ಮೌಲ್ಯದ ಮರ್ಸಿಡಿಸ್​ ಕಾರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Published On - 3:05 pm, Tue, 15 March 22