ಈ ಹುಡುಗಿಯರ ಫೈಟ್ ಮಾಡುವ ವಿಡಿಯೋ, ಅಪರೂಪಕ್ಕೊಮ್ಮೆ ವೈರಲ್ ಆಗುತ್ತಿರುತ್ತದೆ. ಈ ಫೈಟ್ ನೋಡಿ ಅನೇಕ ಬಾಯ್ಸ್ ಮಜಾ ತೆಗೆದುಕೊಳ್ಳುವುದು ಇದೆ. ಆದರೆ ಬಿದಿಯಲ್ಲಿ ಜಡೆ ಜಗಳ ನಡೆಯುವುದು ಅಚ್ಚರಿ ಸಂಗತಿಯಾದರೂ, ನಮ್ಮ ಯುವತಿಯರು ಈ ಸಮಾಜಕ್ಕೆ ಯಾವ ಸಂದೇಶ ನೀಡುತ್ತಿದ್ದರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇಂತಹದೇ ಒಂದು ಘಟನೆ ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಲ್ಲಿ ಇಬ್ಬರು ವಿದ್ಯಾರ್ಥಿನಿಗಳ ನಡುವೆ ದೊಡ್ಡ ಫೈಟ್ ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಈ ಜಗಳಕ್ಕೆ ಕಾರಣ ಏನು ಎಂದು ತಿಳಿದಿಲ್ಲ.
ಕಾಲೇಜಿನ ಕ್ಯಾಂಟೀನ್ನಲ್ಲಿ ಈ ವಿದ್ಯಾರ್ಥಿನಿಯರ ನಡುವೆ ಮೊದಲು ಮಾತಿ ಚಕಮಕಿ ನಡೆಯುತ್ತದೆ. ಮಾತುಗಳು ಜೋರಾಗಿ ನಡೆಯುತ್ತಿರುವ ವೇಳೆ ಇಬ್ಬರ ನಡುವೆಯೂ ತಳ್ಳಾಟ ನಡೆಯುತ್ತದೆ. ನಂತರ ಇಬ್ಬರು ಕೂಡ ಕಾದಾಟಕ್ಕೆ ಮುಂದಾಗಿದ್ದಾರೆ. ಈ ಇಬ್ಬರ ಹೊಡೆದಾಟವನ್ನು ಇತರ ವಿದ್ಯಾರ್ಥಿಗಳು ನೋಡುತ್ತಾ ಕುತಿದ್ದರು. ಈ ಬಗ್ಗೆ ಅನೇಕ ನೆಟ್ಟಿಗರು ವಿರೋಧವನ್ನು ಕೂಡ ವ್ಯಕ್ತಪಡಿಸಿದ್ದಾರೆ.
No context Kalesh b/w Two Girls of Amity Uni. Noida outside campus
pic.twitter.com/DqCOXDspAl— Ghar Ke Kalesh (@gharkekalesh) July 22, 2024
ವಿದ್ಯಾರ್ಥಿನಿಯರ ಜಗಳ ನೋಡಿ ಒಬ್ಬಕೆ ಮಧ್ಯ ಪ್ರವೇಶಿಸಿ ಕಾದಾಟವನ್ನು ನಿಲ್ಲಿಸಲು ಮುಂದಾಗುತ್ತಾರೆ. ಅದರೂ ಕೇಳದ ಈ ವಿದ್ಯಾರ್ಥಿನಿಗಳು ಒಬ್ಬರ ಮೇಲೆ ಒಬ್ಬರು ಬಿದ್ದುಕೊಂಡು ಹೊಡೆದಾಡುತ್ತಾರೆ. ಪಕ್ಕದಲ್ಲಿದ್ದ ಇತರ ವಿದ್ಯಾರ್ಥಿಗಳು ಹೇ ಮೇಜು ಮುರಿದು ಹೋಯಿತು ಎಂದು ಬೊಬ್ಬೆ ಹೊಡೆಯುತ್ತಾರೆ.
ಇದನ್ನೂ ಓದಿ: ನಾಯಿ ಮರಿಗಳಿಗೆ ಹಾಲುಣಿಸಿದ ಗೋಮಾತೆ… ಮಾತೃ ಪ್ರೇಮದ ವಿಡಿಯೋ ವೈರಲ್
ಈ ವಿಡಿಯೋ ಹಲವು ಎಕ್ಸ್ ಖಾತೆಯಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಕಮೆಂಟ್ ಮಾಡಿದ ನೆಟ್ಟಿಗರು, ಇದು ಹುಡುಗಿಯರ WW ಎಂದು ಹೇಳಿದ್ದಾರೆ. ಪ್ರತಿಯೊಂದು ಕಾಲೇಜಿನಲ್ಲೂ ಈ ಹುಡುಗಿಯರ ಜಗಳ ಇರುತ್ತದೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಈ ಯುವ ಸಮಾಜ ಎತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:27 pm, Wed, 24 July 24