ಬಿದ್ದಿತ್ತು ಸುಂದರ ಹುಡುಗಿಯರ ಮೇಲೆ ಯಾರದ್ದೋ ಕಣ್ಣು, ಈ ಹಳ್ಳಿಯಲ್ಲಿ ಒಂದು ದಿನ ರಾತ್ರಿ ಅಷ್ಟೂ ಮಂದಿ ನಾಪತ್ತೆಯಾಗಿದ್ರಂತೆ!
ಇದು 200 ವರ್ಷಗಳ ಹಿಂದೆ ನಡೆದಿರುವ ಘಟನೆ, ರಾಜಸ್ಥಾನದ ಕಲಧಾರಾ ಎನ್ನುವ ಗ್ರಾಮದ ಜನರು ದುಷ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ತಾವಿದ್ದ ಗ್ರಾಮವನ್ನೇ ತೊರೆದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜಸ್ಥಾನ ಎಂದ ಬಳಿಕ ನಿಮ್ಮ ಕಣ್ಣೆದುರು ಕಾಣುವುದು ಅರಮನೆ, ಕೋಟೆಗಳು, ಮರುಭೂಮಿ. ಆದರೆ ರಾಜಸ್ಥಾನದ ಇತಿಹಾಸದಲ್ಲಿ ನಡೆದ ಘಟನೆ ಕೇಳಿದರೆ ನೀವು ಒಮ್ಮೆ ಬೆಚ್ಚಿ ಬೀಳಬಹುದು. ರಾಜಸ್ಥಾನದ ಒಂದು ಗ್ರಾಮ ರಾತ್ರೋ ರಾತ್ರಿ ಖಾಲಿಯಾಗಿತ್ತು. ಇದು 200 ವರ್ಷಗಳ ಹಿಂದಿನ ಘಟನೆ.
ಇದು ಪಶ್ಚಿಮ ರಾಜಸ್ಥಾನದ ಜೈಸಲ್ಮೇರ್ ಜಿಲ್ಲಾ ಕೇಂದ್ರದಿಂದ 17 ಕಿಲೋಮೀಟರ್ ದೂರದಲ್ಲಿರುವ ಕುಲಧಾರ ಗ್ರಾಮದ ಕಥೆ. ಈ ಗ್ರಾಮವು ನಿಗೂಢ ಕಥೆಗಳಿಗೆ ಹೆಸರುವಾಸಿಯಾಗಿದೆ. 200 ವರ್ಷಗಳ ಹಿಂದೆ ಒಂದು ರಾತ್ರಿ ಇಡೀ ಗ್ರಾಮ ಖಾಲಿಯಾಯಿತು. ಕುಲಧಾರಾಗೆ ಯಾರದೋ ದುಷ್ಟ ಕಣ್ಣು ಬಿದ್ದಿತ್ತು. ಆದರೆ ಇದು ಯಾವುದೇ ದೆವ್ವದ ಕಥೆಯಲ್ಲ.
ಆದರೆ ಅಲ್ಲಿದ್ದ ದಿವಾನ್ ಸಲಾಂ ಸಿಂಗ್ನಿಂದಾಗಿ ಎಲ್ಲರೂ ಊರು ಖಾಲಿ ಮಾಡಬೇಕಾಯಿತು. ಆತ ಹಳ್ಳಿಯ ಸುಂದರ ಹುಡುಗಿಯರ ಮೇಲೆ ಕಣ್ಣು ಹಾಕುತ್ತಿದ್ದ, ಆಕೆಯನ್ನು ಹೇಗಾದರೂ ಮಾಡಿ ಆತ ಪಡೆದೇ ತೀರುತ್ತಿದ್ದ.
ಮತ್ತಷ್ಟು ಓದಿ: Video Viral: ಬೀದಿ ಬದಿ ಟೀ ಮಾರುತ್ತಿದ್ದ ವ್ಯಕ್ತಿಯ ಮಗಳು ಸಿಎ ಪಾಸ್; ವಿಡಿಯೋ ವೈರಲ್
ಕುಲಧಾರಾವನ್ನು ಭೂತದ ಗ್ರಾಮವೆಂದು ಘೋಷಿಸಲಾಯಿತು, ಈ ಗ್ರಾಮದ ಹಳೆಯ ಕಥೆಯು 18 ನೇ ಶತಮಾನದಲ್ಲಿ ನಿವಾಸಿಗಳು ರಾತ್ರಿಯ ಕತ್ತಲೆಯಲ್ಲಿ ತಮ್ಮ ಮನೆಗಳನ್ನು ತೊರೆದರು ಎಂದು ಹೇಳಲಾಗುತ್ತದೆ. ಮುಂದೆ ಯಾರೂ ಕೂಡ ಆ ಗ್ರಾಮಕ್ಕೆ ಬರಬಾರದು ಎನ್ನುವ ದೃಷ್ಟಿಯಿಂದ ಅದನ್ನು ಭೂತದ ಗ್ರಾಮ ಎಂದು ಘೋಷಿಸಲಾಯಿತು.
ಗ್ರಾಮದ ಚೌಪಾಲ್‌ನಲ್ಲಿ ಪಲಿವಾಲ್ ಬ್ರಾಹ್ಮಣರ ಸಭೆ ನಡೆಸಲಾಯಿತು ಮತ್ತು 5000 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಗೌರವ ಉಳಿಸಿಕೊಳ್ಳಲು ತಾವಿದ್ದ ಊರು ಬಿಡಲು ನಿರ್ಧರಿಸಿದ್ದರು. ಆ ಊರು ಬಿಟ್ಟು ಹೋಗುವಾಗ ಬ್ರಾಹ್ಮಣರು ಈ ಹಳ್ಳಿ ಮತ್ತೆ ಮೊದಲಿನಂತೆ ಆಗುವುದಿಲ್ಲ ಎಂದು ಶಾಪ ಕೊಟ್ಟಿದ್ದರು.
ಹಾಗಾಗಿ ಕಾಲಾನಂತರದಲ್ಲಿ ಕುಲಧಾರ ಸುತ್ತಮುತ್ತಲಿನ ಹಳ್ಳಿಗಳು ಮತ್ತೆ ನೆಲೆಗೊಂಡವು. ಆದರೆ ಕುಲಧಾರ ಮತ್ತೆ ನೆಲೆಗೊಳ್ಳಲು ಸಾಧ್ಯವಾಗಲಿಲ್ಲ. ಭಾರತೀಯ ಸಂಸ್ಕೃತಿಯ ಇತಿಹಾಸದ ಪ್ರಮುಖ ಭಾಗವಾಗಿದೆ. ಇಂದು ಕಥೆಗಳನ್ನು ಕೇಳಿ ಜನರು ಈ ಗ್ರಾಮವನ್ನು ನೋಡಲು ಬರುತ್ತಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ