Kargil Vijay Diwas 2024: ಕಾರ್ಗಿಲ್ ಯುದ್ಧದಲ್ಲಿ ಭಾರತ ವಾಯುಪಡೆ ನಡೆಸಿದ ಲೇಸರ್ ಬಾಂಬ್ ದಾಳಿ, ರೋಮಾಂಚನಕಾರಿ ವಿಡಿಯೋ ವೈರಲ್
1999 ರ ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು 60 ದಿನಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಭಾರತೀಯ ಸೇನೆ ಅಭೂತಪೂರ್ವ ವಿಜಯವನ್ನು ಸಾಧಿಸಿತ್ತು. ಇದೀಗ 1999 ಜೂನ್ 24 ರಂದು ಭಾರತೀಯ ವಾಯಪಡೆ ಟೈಗರ್ ಹಿಲ್ ಮೇಲಿದ್ದ ಪಾಕಿಸ್ತಾನಿ ಸೇನಾ ಶಿಬಿರದ ಮೇಲೆ ಲೇಸರ್ ಬಾಂಬ್ ದಾಳಿ ನಡೆಸಿದ ರೋಮಾಂಚನಕಾರಿ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಪಾಕಿಸ್ತಾನ ಸೇನೆಯ ಕುತಂತ್ರದಿಂದ 1999 ರ ಮೇ ತಿಂಗಳಲ್ಲಿ ಕಾರ್ಗಿಲ್ ಯುದ್ಧ ಎನ್ನುವಂತದ್ದು ಆರಂಭವಾಯಿತು. ಪಾಕಿಸ್ತಾನದ ಸೈನಿಕರು ಮತ್ತ ಉಗ್ರರು ಕಾರ್ಗಿಲ್ ಜಿಲ್ಲೆಯಲ್ಲಿ ಲೈನ್ ಆಫ್ ಕಂಟ್ರೋಲ್ (LOC) ಮೂಲಕ ಒಳ ನುಸುಳಿದ್ದರು. ಹೀಗೆ ದೇಶದೊಳಗೆ ನುಸುಳಿದ ಪಾಕಿಸ್ತಾನಿ ಸೈನ್ಯವನ್ನು ಆಪರೇಷನ್ ವಿಜಯ್ ಮೂಲಕ ನಮ್ಮ ಹೆಮ್ಮೆಯ ಸೇನೆ ಸದೆ ಬಡಿದು ಕಾರ್ಗಿಲ್ ಬೆಟ್ಟಗಳ ಮೇಲೆ ಜುಲೈ 26, 1999 ರಂದು ವಿಜಯ ಧ್ವಜವನ್ನು ಸ್ಥಾಪಿಸಿ ಮಹಾ ವಿಜಯವನ್ನು ಘೋಷಿಸಿತು. ಈ ಕಾರ್ಗಿಲ್ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಟೈಗರ್ ಹಿಲ್ ಗೆಲುವು. ಟೈಗರ್ ಹಿಲ್ ಮರಳಿ ವಶಕ್ಕೆ ಪಡೆಯಲು ಭಾರತೀಯ ವಾಯು ಸೇನೆ ಲೇಸರ್ ಬಾಂಬ್ ದಾಳಿ ನಡೆಸಿತ್ತು. ಈ ದಾಳಿಗೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ವೈರಲ್ ಆಗುತ್ತದೆ.
1999 ರ ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿಯಂತ್ರಣಾ ರೇಖೆಯನ್ನು ದಾಡಿ ಭಾರತದೊಳಗೆ ನುಸುಳಿದ ಪಾಕ್ ಸೇನೆ, ಕುತಂತ್ರದಿಂದ ಕಾರ್ಗಿಲ್‌ನ ಹಲವು ಪರ್ವತ ಶಿಖರಗಳನ್ನು ವಶಪಡಿಸಿಕೊಂಡಿತು. ಹೀಗೆ ವಶಪಡಿಸಿಕೊಂಡ ಶಿಖರಗಳಲ್ಲಿ ಟೈಗರ್ ಹಿಲ್ ಪ್ರಮುಖವಾದದ್ದು. ದ್ರಾಸ್ ವಲಯದ ಅತೀ ಎತ್ತರದ ಬೆಟ್ಟವಾಗಿರುವ ಟೈಗರ್ ಹಿಲ್ ಮೇಲೆ ಪಾಕಿಸ್ತಾನಿ ಸೇನೆ ಶಿಬಿರವನ್ನು ಹೂಡಿ, ಬೆಟ್ಟದ ಕೆಳ ಭಾಗದಲ್ಲಿದ್ದ ಭಾರತೀಯ ಸೇನೆಯ ಮೇಲೆ ಸುಲಭವಾಗಿ ದಾಳಿ ನಡೆಸುತ್ತಿತ್ತು. ಇದು ನಮ್ಮ ಸೈನಿಕರ ಸುರಕ್ಷತೆಗೆ ಭಾರೀ ಅಪಾಯವನ್ನು ಉಂಟುಮಾಡಿತ್ತು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಟೈಗರ್ ಹಿಲ್ ತುದಿಯನ್ನೇರುವುದು ಅತ್ಯಂತ ಕ್ಷಿಷ್ಟಕರವಾಗಿದ್ದರಿಂದ ಭಾರತೀಯ ಸೇನೆಯ ಸೈನಿಕರಿಗೆ ಈ ಬೆಟ್ಟದ ಮೇಲೇರಿ ಪಾಕಿಸ್ತಾನಿ ಸೈನ್ಯದ ಸೊಕ್ಕಡಗಿಸುವುದು ತುಂಬಾನೇ ಕ್ಲಿಷ್ಟಕರವಾಗಿತ್ತು. ಅಷ್ಟೇ ಅಲ್ಲದೇ ಶಿಖರ ಮೇಲೇರಲು ಪ್ರಯತ್ನಿಸಿದಾಗ ಸೈನಿಕರ ಮೇಲೆ ದಾಳಿಯನ್ನು ಕೂಡಾ ಮಾಡಿದರು. ಹೀಗಾಗಿ ಭಾರತೀಯ ವಾಯುಪಡೆಯು ಯುದ್ಧ ವಿಮಾನವನ್ನು ಬಳಸಿ ಟೈಗರ್ ಹಿಲ್ ಮೇಲಿದ್ದ ಪಾಕ್ ಸೇನೆಯ ಮೇಲೆ ದಾಳಿ ನಡೆಸಲು ನಿರ್ಧರಿಸಿತು. ನಂತರ ಜೂನ್ 24, 1999 ರ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಭಾರತೀಯ ವಾಯಪಡೆಯು ಮಿರಾಜ್ 2000 ಫೈಟರ್ ಜೆಟ್‌ನಲ್ಲಿ ಲೇಸರ್ ಬಾಂಬ್ ದಾಳಿ ನಡೆಸಿ, ಪಾಕಿಸ್ತಾನ ಸೇನಾ ಶಿಬಿರಗಳನ್ನು ಹಾಗೂ ಬಂಕರ್‌ಗಳನ್ನು ನಾಶಪಡಿಸಿತು. ನಂತರ ಫೈನಲ್ ಟಾಸ್ಕ್‌ಗೆಂದು 18 ಗ್ರೆನೇಡಿಯರ್‌ಗಳು ಮತ್ತು 8 ಸಿಖ್ ಯೋಧರ ತಂಡವನ್ನು ಟೈಗರ್ ಹಿಲ್ ಮೇಲೆ ಕಳುಹಿಸಲಾಯಿತು. ಅತ್ಯಂತ ಕ್ಲಿಷ್ಟಕರ ಹಾದಿಯನ್ನು ತಲುಪಿ ಭಾರತ ಮಾತೆಯ ರಕ್ಷಣೆಗಾಗಿ ರೋಷಾವೇಶದಿಂದ ಹೋರಾಡಿದ ನಮ್ಮ ಹೆಮ್ಮೆಯ ಸೈನಿಕರು ಪಾಕ್ ಸೇನೆಯ ವಶವಾಗಿದ್ದ ಟೈಗರ್ ಹಿಲ್ ಅನ್ನು ಜುಲೈ 04, 1999 ರಂದು ಮರು ವಶಪಡಿಸಿಕೊಂಡರು.
ಇದನ್ನೂ ಓದಿ: ಯೋಧರು ಹೆಚ್ಚಾಗಿ ಸೇವನೆ ಮಾಡುವ ಆಹಾರಗಳು ಯಾವುವು? ನಿವೃತ್ತ ಸೇನಾಧಿಕಾರಿ ಪರಮೇಶ್ವರ್ ಹೇಳಿದ್ದೇನು?
ಜೂನ್ 24, 1999 ರಂದು ಭಾರತೀಯ ವಾಯು ಸೇನೆ ಮಿರಾಜ್ 2000 ಯುದ್ಧ ವಿಮಾನದಲ್ಲಿ ಪಾಕ್ ಸೇನೆ ಶಿಬಿರ ಹೂಡಿದ್ದ ಟೈಗರ್ ಹಿಲ್ ಬೆಟ್ಟದ ಮೇಲೆ ಲೇಸರ್ ಗೈಡೆಡ್ ಬಾಂಬ್ ದಾಳಿ ನಡೆಸಿದಂತಹ ವಿಡಿಯೋ ತುಣುಕೊಂದು ಇದೀಗ ವೈರಲ್ ಆಗುತ್ತಿದೆ. ಭಾರತೀಯ ವಾಯು ಸೇನೆ ಕೆಲ ಸಮಯಗಳ ಹಿಂದೆ ಈ ಕುರಿತ ವಿಡಿಯೋವೊಂದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ