Kargil Vijay Diwas 2024: ಯೋಧರು ಹೆಚ್ಚಾಗಿ ಸೇವನೆ ಮಾಡುವ ಆಹಾರಗಳು ಯಾವುವು? ನಿವೃತ್ತ ಸೇನಾಧಿಕಾರಿ ಪರಮೇಶ್ವರ್ ಹೇಳಿದ್ದೇನು?

ನಾವಿಲ್ಲಿ ಇಷ್ಟು ಸುರಕ್ಷಿತವಾಗಿರಲು ನಮ್ಮ ಯೋಧರು ಕಾರಣ. ಹಾಗಾದರೆ ಅವರ ಆಹಾರ ಪದ್ಧತಿ ಹೇಗಿರಬಹುದು? ಯಾವ ರೀತಿಯ ಆಹಾರ ಸೇವನೆ ಮಾಡಬಹುದು? ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಂಡಿರಬಹುದು ಎಂದು ಯೋಚಿಸಿದ್ದೀರಾ? ಶತ್ರುಗಳಿಂದ ಬರುವ ಗುಂಡುಗಳಿಗಿಂತ ಅಪಾಯಕಾರಿಯಾಗಿರುವ ಹವಾಮಾನದಲ್ಲಿ ಬದುಕುವುದು ಸುಲಭದ ಮಾತಲ್ಲ. ಮೈನಸ್ 40- 50 ಡಿಗ್ರಿ ತಾಪಮಾನ ಇರುವಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರೆ ಆಹಾರ ಪದ್ಧತಿ, ವ್ಯಾಯಾಮ ಎಲ್ಲವೂ ಕಟ್ಟುನಿಟ್ಟಾಗಿ ಇದ್ದರೆ ಮಾತ್ರ ಸಾಧ್ಯವಾಗುತ್ತದೆ.

Kargil Vijay Diwas 2024: ಯೋಧರು ಹೆಚ್ಚಾಗಿ ಸೇವನೆ ಮಾಡುವ ಆಹಾರಗಳು ಯಾವುವು? ನಿವೃತ್ತ ಸೇನಾಧಿಕಾರಿ ಪರಮೇಶ್ವರ್ ಹೇಳಿದ್ದೇನು?
ಯೋಧರ ಜತೆಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಔತಣಕೂಟ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 25, 2024 | 3:33 PM

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅನೇಕ ರೀತಿಯಲ್ಲಿ ಹರಸಾಹಸ ಪಡುತ್ತೇವೆ. ಆದರೆ ನಾವಿಲ್ಲಿ ಇಷ್ಟು ಸುರಕ್ಷಿತವಾಗಿರಲು ನಮ್ಮ ಯೋಧರು ಕಾರಣ. ಹಾಗಾದರೆ ಅವರ ಆಹಾರ ಪದ್ಧತಿ ಹೇಗಿರಬಹುದು? ಯಾವ ರೀತಿಯ ಆಹಾರ ಸೇವನೆ ಮಾಡಬಹುದು? ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಂಡಿರಬಹುದು ಎಂದು ಯೋಚಿಸಿದ್ದೀರಾ? ಶತ್ರುಗಳಿಂದ ಬರುವ ಗುಂಡುಗಳಿಗಿಂತ ಅಪಾಯಕಾರಿಯಾಗಿರುವ ಹವಾಮಾನದಲ್ಲಿ ಬದುಕುವುದು ಸುಲಭದ ಮಾತಲ್ಲ. ಮೈನಸ್ 40- 50 ಡಿಗ್ರಿ ತಾಪಮಾನ ಇರುವಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರೆ ಆಹಾರ ಪದ್ಧತಿ, ವ್ಯಾಯಾಮ ಎಲ್ಲವೂ ಕಟ್ಟುನಿಟ್ಟಾಗಿ ಇದ್ದರೆ ಮಾತ್ರ ಸಾಧ್ಯವಾಗುತ್ತದೆ.

ನಿವೃತ್ತ ಸೇನಾಧಿಕಾರಿ ಪರಮೇಶ್ವರ್ ಎನ್. ಹೆಗಡೆ ಅವರು ಹೇಳುವ ಪ್ರಕಾರ, ಯೋಧರ ಆಹಾರ ವೈವಿಧ್ಯತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಅಗತ್ಯ ಖಾದ್ಯ ಮತ್ತು ಪೌಷ್ಟಿಕಾಂಶ ಸೇರಿಸಲಾಗುತ್ತದೆ. ಜೊತೆಗೆ ಅವರಿಗೆ ಬೇಕಾದ ಆಯ್ಕೆಗಳನ್ನು ಕೂಡ ನೀಡಲಾಗುತ್ತದೆ. ಅಂದರೆ ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳಿಗೆ ಪ್ರತ್ಯೇಕ ಆಹಾರವಿರುತ್ತದೆ. ಪ್ರತಿದಿನವೂ ಒಂದೊಂದು ರೀತಿಯ ಆಹಾರವಿರುತ್ತದೆ, ಇಲ್ಲಿ ಆಯ್ಕೆ ನಮ್ಮದಾಗಿರುತ್ತದೆ. ಅಲ್ಲಿ ಕೊಡುವ ಆಹಾರ ಆರೋಗ್ಯಕ್ಕೆ ಪೂರಕವಾಗಿರುತ್ತದೆ ಹಾಗಾಗಿ ಒಳ್ಳೆಯ ರೀತಿಯಲ್ಲಿ ನಮ್ಮ ಆಹಾರ ಸೇವನೆ ಮಾಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ”.

ಆಹಾರ ಕ್ರಮ ಹೇಗಿರುತ್ತದೆ?

“ಹಾಲು, ಮೊಟ್ಟೆ ಮತ್ತು ಬಾಳೆಹಣ್ಣು ಇದ್ದೇ ಇರುತ್ತದೆ. ಇವು ದೈಹಿಕ ಶಕ್ತಿ ನೀಡುತ್ತವೆ. ಅಲ್ಲದೆ ಪ್ರತಿದಿನವೂ ಯೋಧರಿಗೆ ಸಮತೋಲಿತ ಆಹಾರ ನೀಡಲಾಗುತ್ತದೆ. ಪನೀರ್, ಕೋಳಿ ಮತ್ತು ಮೀನು ಹೀಗೆ ಪ್ರೋಟೀನ್, ಕ್ಯಾಲ್ಸಿಯಂ ಇರುವ ಆಹಾರಗಳನ್ನು ಕೂಡ ನೀಡಲಾಗುತ್ತದೆ. ಇದೆಲ್ಲದರ ಜೊತೆಗೆ ಋತುಮಾನದ ಹಣ್ಣು ಮತ್ತು ತರಕಾರಿಯನ್ನು ನೀಡಲಾಗುತ್ತದೆ. ಕಾಲೋಚಿತ ಪದಾರ್ಥಗಳು ಆರೋಗ್ಯಕ್ಕೆ ಅಗತ್ಯ ಪೋಷಣೆ ನೀಡುತ್ತವೆ. ಇವೆಲ್ಲವೂ ಕೆಮ್ಮು ಮತ್ತು ಶೀತ, ಜ್ವರದಂತಹ ಸಮಸ್ಯೆ ಕಡಿಮೆ ಮಾಡುತ್ತವೆ.”

ಇದನ್ನೂ ಓದಿ: ನಿಮ್ಮ ಪ್ರೀತಿ ಪಾತ್ರರಿಗೆ ಈ ಸಂದೇಶ ಕಳುಹಿಸಿ ಭಾರತೀಯ ಸೈನ್ಯದ ಗೆಲುವನ್ನು ಸ್ಮರಿಸಿ

ಯಾವ ಆಹಾರ ಒಳ್ಳೆಯದು?

ಯೋಧರು ಹೆಚ್ಚಾಗಿ ಒಣ ಹಣ್ಣುಗಳು, ಅಗಸೆ ಬೀಜಗಳು, ಆಮ್ಲಾ, ಅರಿಶಿನಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು ಇವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ವಿಟಮಿನ್ ಸಿ ಹೇರಳವಾಗಿರುವ ಆಹಾರ ಸೇವಿಸಬೇಕು ಇದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಇದು ಯೋಧರಿಗೆ ಮಾತ್ರವಲ್ಲ ಎಲ್ಲರೂ ಕೂಡ ಪಾಲಿಸುವುದು ಒಳ್ಳೆಯದು.” ಎಂದು ಅವರು ಹೇಳುತ್ತಾರೆ.

Published On - 10:23 am, Wed, 24 July 24

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್