Video Viral: ಸಾಕು ನಾಯಿಯ ವಿಚಾರಕ್ಕೆ ಮಾಲೀಕನನ್ನು ಥಳಿಸಿದ ಐವರು ಯುವಕರು

|

Updated on: May 16, 2024 | 12:13 PM

ನಾಯಿ ಹಾಗೂ ಮಾಲೀಕನ ಮೇಲೆ ಐವರು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆ ಸೆರೆಯಾಗಿದ್ದು, ಈ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Video Viral: ಸಾಕು ನಾಯಿಯ ವಿಚಾರಕ್ಕೆ ಮಾಲೀಕನನ್ನು ಥಳಿಸಿದ ಐವರು ಯುವಕರು
Follow us on

ಹೈದರಾಬಾದ್ : ಸಾಕು ನಾಯಿಯನ್ನು ಸಂಜೆ ವಾಕಿಂಗ್ ಗೆ ಕರೆದುಕೊಂಡು ಹೋದ ವ್ಯಕ್ತಿಯ ಮೇಲೆ ಏಕಾಏಕಿ ಐವರು ಯುವಕರು ಬಂದು  ದೊಣ್ಣೆಯಿಂದ ಥಳಿಸಿರುವ ಆಘಾತಕಾರಿ ಘಟನೆ ಹೈದರಾಬಾದ್ ನ ರಸ್ತೆಯಲ್ಲಿ ನಡೆದಿದೆ. ನಾಯಿ ಹಾಗೂ ಮಾಲೀಕನ ಮೇಲೆ ಐವರು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆ ಸೆರೆಯಾಗಿದ್ದು, ಈ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೇ 8ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.

ಮಧುರಾನಗರದ ರಹಮತ್ ನಗರದ ನಿವಾಸಿ ಶ್ರೀನಾಥ್ ಎಂಬುವವರ ಮುದ್ದಿನ ನಾಯಿ ನೆರೆಮನೆಯ ಧನಂಜಯ್ ಅವರ ಮೇಲೆ ಕಚ್ಚಲು ಮುಂದಾಗಿದೆ ಎಂದು ದೂರಿದ್ದು, ನಂತರ ಹೊಡೆದಾಟ ಸಂಭವಿಸಿದೆ. ಧನಂಜಯ್ ತನ್ನ ಒಂದೆರಡು ಸ್ನೇಹಿತರೊಂದಿಗೆ ಸೇರಿ ನಾಯಿಯ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಪ್ರೀತಿ ವಿಚಾರ: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ರಕ್ಷಿಸಿದ ಪೊಲೀಸರು

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಶ್ರೀನಾಥ್ ಮತ್ತು ಅವರ ಪತ್ನಿ ಮತ್ತು ಅವರ ನಾಯಿಗೆ. ತೀವ್ರವಾಗಿ ಗಾಯಗೊಂಡಿದ್ದು, ನಾಯಿ ಮತ್ತು ದಂಪತಿಯನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಮಧುರಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

IPC ಸೆಕ್ಷನ್ 147 (ಗಲಭೆಗೆ ಶಿಕ್ಷೆ), 148 (ಗಲಭೆ, ಮಾರಣಾಂತಿಕ ಆಯುಧದಿಂದ ಹಲ್ಲೆ), 307 (ಕೊಲೆಯ ಯತ್ನ) ಅಡಿಯಲ್ಲಿ 34 IPC ಮತ್ತು ಸೆಕ್ಷನ್ 11, ಎರಡೂ ಕುಟುಂಬಗಳ ದೂರುಗಳ ಆಧಾರದ ಮೇಲೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ದೂರು ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ