ಅಜ್ಜಿಯ ನೆನಪಿನಲ್ಲಿ ಸ್ವರ್ಗಕ್ಕೆ ಏಣಿ ಹಾಕಿದ ಕಲಾವಿದ

ಅಜ್ಜಿಯ ನೆನಪಿನಲ್ಲಿ ಕಲಾವಿದರೊಬ್ಬರು ಸ್ವರ್ಗಕ್ಕೆ ಏಣಿ ಹಾಕಿದ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗಿದೆ. ನಿಮಗೆಲ್ಲರಿಗೂ ಇದನ್ನು ಕೇಳಿ ಆಶ್ಚರ್ಯವಾಗಬಹುದು. ಆದರೆ ಚೀನಾದ ಕಲಾವಿದರೊಬ್ಬರು ಪಟಾಕಿಗಳಿಂದ ಮಾಡಿದ ಏಣಿಯನ್ನು ಅಜ್ಜಿಯ ನೆನಪಿಗಾಗಿ ಆಗಸದಲ್ಲಿ ತೇಲಿಬಿಟ್ಟಿದ್ದು, ಅಕ್ಷರಶಃ ಸ್ವರ್ಗಕ್ಕೆ ಏಣಿಹಾಕಿದಂತೆಯೇ ಕಾಣುತ್ತಿತ್ತು.

ಅಜ್ಜಿಯ ನೆನಪಿನಲ್ಲಿ ಸ್ವರ್ಗಕ್ಕೆ ಏಣಿ ಹಾಕಿದ ಕಲಾವಿದ
Follow us
ನಯನಾ ರಾಜೀವ್
|

Updated on:May 16, 2024 | 2:48 PM

ಸ್ವರ್ಗಕ್ಕೆ ಏಣಿ ಹಾಕುವುದೆಂದರೇನು ಮನುಷ್ಯನಿಂದಾಗುವ ಮಾತೇ ಎಂದು ಯೋಚಿಸುತ್ತಿರಬಹುದು. ಪಟಾಕಿ(Fire Crackers) ಸಹಾಯದಿಂದ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಇದೊಂದು ನಿದರ್ಶನ, ಕೆಲವರು ಪಟಾಕಿ ಸಹಾಯದಿಂದ ತಮ್ಮ ಸಂಗಾತಿಯ ಹೆಸರು ಅಥವಾ ಹುಟ್ಟುಹಬ್ಬದ ಸಂದೇಶ ಅಥವಾ ಪ್ರೇಮ ನಿವೇದನೆಯನ್ನು ಆಗಸದಲ್ಲಿ ಮಾಡುವುದು ನೀವು ನೋಡಿರಬಹುದು. ಆದರೆ ಇದು ಸ್ವಲ್ಪ ವಿಭಿನ್ನ ಪ್ರಯತ್ನವಾಗಿದೆ.

ಅಜ್ಜಿಯ ನೆನಪಿನಲ್ಲಿ ಕಲಾವಿದರೊಬ್ಬರು ಸ್ವರ್ಗಕ್ಕೆ ಏಣಿ ಹಾಕಿದ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗಿದೆ. ನಿಮಗೆಲ್ಲರಿಗೂ ಇದನ್ನು ಕೇಳಿ ಆಶ್ಚರ್ಯವಾಗಬಹುದು. ಆದರೆ ಚೀನಾದ ಕಲಾವಿದರೊಬ್ಬರು ಪಟಾಕಿಗಳಿಂದ ಮಾಡಿದ ಏಣಿಯನ್ನು ಅಜ್ಜಿಯ ನೆನಪಿಗಾಗಿ ಆಗಸದಲ್ಲಿ ತೇಲಿಬಿಟ್ಟಿದ್ದು, ಅಕ್ಷರಶಃ ಸ್ವರ್ಗಕ್ಕೆ ಏಣಿಹಾಕಿದಂತೆಯೇ ಕಾಣುತ್ತಿತ್ತು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪ್ರಕಾಶಮಾನವಾದ ದೀಪಗಳನ್ನು ಹೊಂದಿರುವ ಏಣಿಯು ಆಕಾಶದ ಕಡೆಗೆ ಹೋಗುತ್ತಿರುವುದನ್ನು ಕಾಣಬಹುದು. ವಿಡಿಯೋವನ್ನು ಹಂಚಿಕೊಂಡಿರುವವರು ಸ್ವರ್ಗಕ್ಕೆ ಮೆಟ್ಟಿಲು ಎಂದು ಶೀರ್ಷಿಕೆ ನೀಡಿದ್ದಾರೆ. ಇದು ಚೀನಾದ ಕಲಾವಿದನ ಕೈಯಿಂದ ಮೂಡಿಬಂದ ಕಲೆಯಾಗಿದೆ.

ಮತ್ತಷ್ಟು ಓದಿ: ಈ ವ್ಯಕ್ತಿ ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸುತ್ತಾರೆ; ಇಲ್ಲಿದೆ ಕಾರಣ

39 ಸೆಕೆಂಡುಗಳ ವಿಡಿಯೋ ಇದಾಗಿದ್ದು, ಈ ಪಟಾಕಿಯನ್ನು ಚೀನಾದ ಪಟಾಕಿ ತಜ್ಞ ಕೈ ಗುವೋ-ಕಿಯಾಂಗ್ ತಯಾರಿಸಿದ್ದಾರೆ. ಕಿಯಾಂಗ್ ಕಲಾವಿದನಾಗುವ ತನ್ನ ಕನಸನ್ನು ಯಾವಾಗಲೂ ಬೆಂಬಲಿಸುತ್ತಿದ್ದ ತನ್ನ ಅಜ್ಜಿಗೆ ಗೌರವ ಸಲ್ಲಿಸಿದ್ದಾರೆ. ವಿಯರ್ಡ್ ಅಂಡ್ ಟೆರಿಫೈಯಿಂಗ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ಹಳೆಯ ವೀಡಿಯೊ ಪ್ರಕಾರ, ಅದರ ಎತ್ತರ 1650 ಅಡಿಗಳು.

ವಿಡಿಯೋ

ಇದುವರೆಗೆ 1 ಕೋಟಿ 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 1 ಲಕ್ಷ 34 ಸಾವಿರ ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಇದಕ್ಕಿಂತ ಶ್ರದ್ಧಾಂಜಲಿ ಬೇರೇನಿಲ್ಲ ಎಂದು ಕೆಲವು ಬಳಕೆದಾರರು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:45 pm, Thu, 16 May 24

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು