ಹೊರಟಿದ್ದ ರೈಲಿಗೆ ಸಾಕು ನಾಯಿ ಹತ್ತಿಸಲು ಹೋದ ಮಾಲೀಕ, ಹತ್ತಲಾಗದೆ ಕೆಳಗೆ ಬಿದ್ದ ನಾಯಿ

ರೈಲ್ವೆ ನಿಲ್ದಾಣದಲ್ಲಿ ಹೊರಟಿದ್ದ ರೈಲಿಗೆ ನಾಯಿಯನ್ನು ಹತ್ತಿಸಲು ಹೋಗಿ ನಾಯಿ ಆಯತಪ್ಪಿ ಪ್ಲಾಟ್​ಫಾರಂ ಹಾಗೂ ರೈಲಿನಡಿ ಸಿಲುಕಿರುವ ಘಟನೆ ಮುಂಬೈನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನು ಕರೆದುಕೊಂಡು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ, ರೈಲು ಆಗಲೇ ಹೊರಟಿತ್ತು..ಅವಸರವೇ ಅಪಾಯಕ್ಕೆ ಕಾರಣ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಒಂದೊಮ್ಮೆ ರೈಲು ಹೊರಟಿತೆಂದರೆ ಕಾದು ಮತ್ತೊಂದು ರೈಲಿನಲ್ಲಿ ಪ್ರಯಾಣಿಸಬೇಕೇ ವಿನಃ ಇಂಥಾ ತಪ್ಪು ಎಂದೂ ಮಾಡಬೇಡಿ.

ಹೊರಟಿದ್ದ ರೈಲಿಗೆ ಸಾಕು ನಾಯಿ ಹತ್ತಿಸಲು ಹೋದ ಮಾಲೀಕ, ಹತ್ತಲಾಗದೆ ಕೆಳಗೆ ಬಿದ್ದ ನಾಯಿ
ನಾಯಿ
Image Credit source: Free Press Journal

Updated on: Apr 02, 2025 | 10:24 AM

ಮುಂಬೈ, ಏಪ್ರಿಲ್ 02: ಏನೇ ಅನಿವಾರ್ಯತೆ ಇದ್ದರೂ ರೈಲು(Train) ಹೊರಟ ಮೇಲೆ ಅಥವಾ ರೈಲು ನಿಲ್ದಾಣದಲ್ಲಿ ನಿಲ್ಲುವ ಮೊದಲು ಇಳಿಯುವ ಅಥವಾ ಹತ್ತುವ ಸಾಹಸ ಮಾಡಬಾರದು. ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನು ಕರೆದುಕೊಂಡು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ, ರೈಲು ಆಗಲೇ ಹೊರಟಿತ್ತು. ರೈಲಿಗೆ ನಾಯಿಯನ್ನು ಮೊದಲು ಹತ್ತಿಸಲು ಹೋಗಿ ಅದು ರೈಲು ಹಾಗೂ ಪ್ಲಾಟ್​ಫಾರಂ ನಡುವೆ ಸಿಕ್ಕಿ ಹಾಕಿಕೊಂಡು ನಂತರ ಕೆಳಗೆ ಬಿದ್ದಿದೆ. ಆದರೆ ನಾಯಿ ಪವಾಡವೆಂಬಂತೆ ಬದುಕುಳಿದಿದೆ ಎಂದು ಹೇಳಲಾಗುತ್ತಿದೆ.

ಅವಸರವೇ ಅಪಾಯಕ್ಕೆ ಕಾರಣ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಒಂದೊಮ್ಮೆ ರೈಲು ಹೊರಟಿತೆಂದರೆ ಕಾದು ಮತ್ತೊಂದು ರೈಲಿನಲ್ಲಿ ಪ್ರಯಾಣಿಸಬೇಕೇ ವಿನಃ ಇಂಥಾ ತಪ್ಪು ಎಂದೂ ಮಾಡಬೇಡಿ. ಮಕ್ಕಳಿರಬಹುದು, ಹೆಣ್ಣುಮಕ್ಕಳಿರಬಹುದು, ಯಾರೂ ಕೂಡ ರೈಲು ಹೊರಟ ಮೇಲೆ ಓಡಿ ಹೋಗಿ ಹತ್ತಲು ಪ್ರಯತ್ನಿಸಬೇಡಿ.

ಮುಂಬೈನ ರೈಲು ನಿಲ್ದಾಣವೊಂದರಲ್ಲಿ ರಾಜಧಾನಿ ಎಕ್ಸ್​ಪ್ರೆಸ್ ಆಗ ತಾನೇ ಹೊರಟಿತ್ತು. ಬೋಗಿ ಸಂಖ್ಯೆ 193751 ರ ಬಳಿ ಮಾಲೀಕರೊಬ್ಬರು ತಮ್ಮ ನಾಯಿ ಜತೆಗೆ ರೈಲು ಹತ್ತಲು ಪ್ರಯತ್ನಿಸಿದ್ದರು. ಆದರೆ ನಾಯಿ ಮೇಲೆ ಹತ್ತಲಾಗದೆ ಕೆಳಗೆ ಬಿದ್ದಿದೆ. ವೈರಲ್ ವಿಡಿಯೋ ಆಘಾತಕಾರಿ ದೃಶ್ಯಗಳನ್ನು ತೋರಿಸುತ್ತದೆ. ಘಟನೆಯ ನಿಖರವಾದ ಸಮಯ ಮತ್ತು ಸ್ಥಳ ಇನ್ನೂ ತಿಳಿದಿಲ್ಲ.

ಮತ್ತಷ್ಟು ಓದಿ: ಬೆಂಗಳೂರು ಜನರಿಗೆ ಸಿಹಿ ಸುದ್ದಿ: 2 ಹೊಸ ರೈಲು ನಿಲ್ದಾಣ ನಿರ್ಮಾಣ!

ವೈರಲ್ ಆಗಿರುವ ಈ ವಿಡಿಯೋ ಪ್ರಾಣಿ ಪ್ರಿಯರು ಮತ್ತು ಕಾರ್ಯಕರ್ತರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕರು ಮಾಲೀಕರ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿದ್ದಾರೆ, ಇದನ್ನು ಸಂಪೂರ್ಣ ನಿರ್ಲಕ್ಷ್ಯದ ಕೃತ್ಯ ಎಂದು ಕರೆದಿದ್ದಾರೆ. ಈ ಘಟನೆಯು ಪ್ರಾಣಿ ಹಿಂಸೆಗೆ ಸಂಬಂಧಿಸಿದ ಬಿಎನ್‌ಎಸ್ ವಿಭಾಗಗಳ ಅಡಿಯಲ್ಲಿ ಸಾಕುಪ್ರಾಣಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಗಳಿಗೂ ಕಾರಣವಾಯಿತು.

ವಿಡಿಯೋ

ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ರೈಲ್ವೆ ನಿಲ್ದಾಣಗಳಲ್ಲಿ ಇಂತಹ ಅಪಘಾತಗಳು  ಸಂಭವಿಸದಂತೆ ತಡೆಗಟ್ಟಲು,  ಸಾಕುಪ್ರಾಣಿಗಳ ಸುರಕ್ಷತೆಯ ಬಗ್ಗೆ ಕಠಿಣ ನಿಯಮಗಳ ಅಗತ್ಯವನ್ನು ಹಲವಾರು ಕಾರ್ಯಕರ್ತರು ಒತ್ತಿ ಹೇಳಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:22 am, Wed, 2 April 25