
Noida: ವಸತಿ ಸಮುಚ್ಚಯಗಳಲ್ಲಿ ಸಾಕುಪ್ರಾಣಿಗಳನ್ನು ಸಾಕುವುದು ಅಷ್ಟು ಸುಲಭವಲ್ಲ. ಆದರೂ ಕೆಲವರು ಮುನ್ನುಗ್ಗುತ್ತಾರೆ. ಆದರೆ ಆ ಮುನ್ನುಗ್ಗುವಿಕೆ ಇತರರಿಗೆ ತೊಂದರೆಯುಂಟು ಮಾಡುತ್ತದೆ ಎಂಬ ಅರಿವು ಇರಬೇಕಾಗುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ನೋಯ್ಡಾದ ವಸತಿ ಸಮುಚ್ಚಯವೊಂದರ ಲಿಫ್ಟ್ ಮುಂದೆ ನಾಯಿಯ (Dog) ಪೋಷಕ ಭದ್ರತಾ ಸಿಬ್ಬಂದಿಯೊಂದಿಗೆ ಜಗಳಕ್ಕಿಳಿದಿದ್ದಾನೆ. ಮಗುವೊಂದು ನಾಯಿಯನ್ನು ನೋಡಿ ಹೆದರಿ ಜೋರಾಗಿ ಅಳುತ್ತಿದ್ದರೂ ತನ್ನ ನಾಯಿಯೊಂದಿಗೆ ಅದೇ ಲಿಫ್ಟ್ನಲ್ಲಿ ಹೋಗಬೇಕೆಂದು ಹಠಕ್ಕಿಳಿದಿದ್ದಾನೆ. ಆದರೆ ಭದ್ರತಾ ಸಿಬ್ಬಂದಿ ಅದನ್ನು ತಡೆಯುತ್ತಿದ್ದಾನೆ. ಮಹಿಳೆಯೊಬ್ಬರು ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.
ಇದನ್ನೂ ಓದಿ : Viral Video: ತನ್ನ ಕಿವುಡು ನಾಯಿಯೊಂದಿಗೆ ಸಂಜ್ಞಾಭಾಷೆಯಲ್ಲಿ ಸಂವಹನ ನಡೆಸುವ ವ್ಯಕ್ತಿ
ಗ್ರೇಟರ್ ನೋಯ್ಡಾ ವೆಸ್ಟ್ ಎಂಬ X ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಗೌರ್ ಸಿಟಿ 7ನೇ ಅಡ್ಡರಸ್ತೆಯಲ್ಲಿ ಈ ಘಟನೆ ನಡೆದಿದೆ. ಲಿಫ್ಟ್ನಲ್ಲಿದ್ದ ಮಗುವೊಂದು ನಾಯಿಯನ್ನು ನೋಡಿ ಅಳುತ್ತಿತ್ತು. ನಾಯಿಗೆ ಮಾಸ್ಕ್ ಹಾಕಿದ್ದರಿಂದ ತಾನು ನಾಯಿಯೊಂದಿಗೆ ಅದೇ ಲಿಫ್ಟ್ನಲ್ಲಿ ಹೋಗುವೆ ಎಂದು ವಿತಂಡವಾದಕ್ಕೆ ಬಿದ್ದಿದ್ದಾನೆ ನಾಯಿ ಪೋಷಕ. ನೆಟ್ಟಿಗರು ಈ ವಿಡಿಯೋ ನೋಡಿ ಆ ನಾಯಿ ಪೋಷಕನ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆಗ ನಿವಾಸಿಯೊಬ್ಬರು ಮಧ್ಯಪ್ರವೇಶಿಸಿ ನಾಯಿಯ ಪೋಷಕನಿಗೆ ಮತ್ತೊಂದು ಲಿಫ್ಟ್ ಬಳಸುವಂತೆ ಹೇಳಿದ್ದಾರೆ. ಆದರೂ ಜಗ್ಗದ ಆತ ತಾನು ಮಗುವಿದ್ದ ಲಿಫ್ಟ್ನಲ್ಲಿಯೇ ಹೋಗುವುದು ಎಂದು ಪಟ್ಟು ಹಿಡಿದಿದ್ದಾನೆ. ಇವನ ವರ್ತನೆಗೆ ನಾಯಿಯೂ ಸುಮ್ಮನಾಗಿಬಿಟ್ಟಿದೆ. ಈ ವಿಡಿಯೋ ಅನ್ನು ಸೆ. 25ರಂದು ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 9 ಲಕ್ಷಕ್ಕೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : Viral Optical Illusion: ಚುರುಕು ಕಣ್ಣಿನವರು ಮಾತ್ರ ಇಲ್ಲಿ ಅಡಗಿರುವ ಆರನೇ ಬೆಕ್ಕನ್ನು ಕಂಡುಹಿಡಿಯಬಹುದು
ಇಂಥದೆಲ್ಲವನ್ನೂ ನೋಡಿದಾಗ ಮಾನವೀಯತೆ ಪ್ರತೀದಿನವೂ ಅವಸಾನಗೊಳ್ಳುತ್ತಿದೆ ಎಂದೆನ್ನಿಸುತ್ತದೆ. ಮಗುವಿನ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳದ ಮನುಷ್ಯರು ನಾಯಿಯನ್ನು ಪ್ರೀತಿಸಿ ಏನು ಪ್ರಯೋಜನ ಎಂದಿದ್ದಾರೆ ಒಬ್ಬರು. ಲಿಫ್ಟ್ ಹಿಂದಿರುಗುವತನಕ ಕಾಯ್ದರೆ ಏನು ನಷ್ಟವಾಗುತ್ತಿತ್ತು ಅವನಿಗೆ ಎಂದು ಪ್ರಶ್ನಿಸಿದ್ದಾರೆ ಅನೇಕರು. ನಾನು ಗೌರ್ ಸಿಟಿ 2ರಲ್ಲಿ ವಾಸವಾಗಿದ್ದೇನೆ. ಈತನಕ ಯಾವ ಶ್ವಾನಪ್ರೇಮಿಯೂ ಈ ರೀತಿ ನಡೆದುಕೊಂಡಿಲ್ಲ. ನಾಯಿಯನ್ನು ಸಾಕಿದವರೆಲ್ಲರೂ ವಿನಮ್ರರಾಗಿದ್ದಾರೆ. ಖಾಲೀ ಲಿಫ್ಟ್ಗಾಗಿ ಅವರು ತಾಳ್ಮೆಯಿಂದ ಕಾಯುತ್ತಾರೆ ಎಂದಿದ್ಧಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:41 pm, Wed, 27 September 23