ಕಾಡು ಪ್ರಾಣಿಗಳನ್ನು ಅದರಲ್ಲೂ ಅಪಾಯಕಾರಿ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆ, ಹಾವುಗಳನ್ನು ಮನೆಯಲ್ಲಯೇ ಸಾಕು ಪ್ರಾಣಿಗಳೆಂತೆ ಸಾಕುತ್ತಾರೆ. ಅದನ್ನು ಮುದ್ದಿಸುತ್ತಾರೆ. ಹೀಗೆ ಪಾಕಿಸ್ತಾನಿ ಕಂಟೆಂಟ್ ಕ್ರಿಯೇಟರ್ ನೌಮನ್ ಹಾಸನ್ ಎಂಬ ವ್ಯಕ್ತಿ ಚಿರತೆಯೊಂದನ್ನು ಮನೆಯೇ ಸಾಕಿದ್ದಾರೆ. ಇದೀಗ ಅದು ಕೋಪಗೊಂಡ ದಾಳಿ ಮಾಡಿದೆ. ಈ ಬಗ್ಗೆ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಚಿರತೆಯ ಬಳಿ ನಿಂತಿದ್ದಾನೆ. ಇನ್ನೊಬ್ಬ ಚಿರತೆಯ ಪಕ್ಕದಲ್ಲಿ ಸೋಫಾದಲ್ಲಿ ಕುಳಿತುಕೊಂಡಿದ್ದಾರೆ. ಈ ನಿಂತವನ ಮೇಲೆ ಈ ಚಿರತೆ ದಾಳಿ ಮಾಡಿದೆ. ತಕ್ಷಣ ಅಲ್ಲಿಂದ ಎದ್ದು ಆತ ದೂರ ಹೋಗಿದ್ದಾನೆ.
ಇದೀಗ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಕಾಡು ಪ್ರಾಣಿಗಳನ್ನು ಮನೆಯಲ್ಲಿ ಸಾಕು ಪ್ರಾಣಿಯಂತೆ ಸಾಕುತ್ತಿರುವುದಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸುಂದರವಾದ ಪ್ರಾಣಿಯನ್ನು ಮನೆಯಲ್ಲಿ ಸಾಕುವುದು ಸರಿಯಲ್ಲ, ಇದನ್ನು ನೈಸರ್ಗಿಕವಾಗಿ ಬದುಕಲು ಬಿಡಬೇಕು ಎಂದು ನೆಟ್ಟಿಗರು ಹೇಳಿದ್ದಾರೆ. ಈ ಕಮೆಂಟ್ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ: ಮೊಳೆಗಳನ್ನು ತಿಂದ ವ್ಯಕ್ತಿ, ಇದು ಸಾಧ್ಯನಾ? ಇಂತಹ ವಿಲಕ್ಷಣ ವ್ಯಕ್ತಿಗಳು ಇರುವುದು ಸತ್ಯ
ಇನ್ನು ಕೆಲವರು ಈ ವಿಡಿಯೋ ನೋಡಿ ಇವರಿಗೆ ಕಾಡು ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಯಾರು ಅವಕಾಶ ನೀಡಿದ್ದು, ಅವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಈ ನೌಮನ್ ಎಂಬ ವ್ಯಕ್ತಿ ಅನೇಕ ಇಂತಹ ಸಾಕು ಪ್ರಾಣಿಗಳ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹುಲಿಯ ಬಗ್ಗೆಯೂ ಒಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನೌಮನ್ ಹಾಸನ್ ಅವರು Instagram ನಲ್ಲಿ 2 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದು, YouTube ನಲ್ಲಿ 9.35 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ