
Viral Video : ಆಗಾಗ ಆನೆಗಳ ವೈರಲ್ ವಿಡಿಯೋ ನೋಡುತ್ತಿರುತ್ತೀರಿ. ಅಷ್ಟೇ ಬಲಶಾಲಿ ಅಷ್ಟೇ ಚುರುಕಾಗಿರುವ ಆನೆ ಬುದ್ಧಿವಂತಿಕೆಗೂ ಹೆಸರಾದ ಪ್ರಾಣಿ. ಮನುಷ್ಯನನ್ನು ಅನುಕರಿಸುವಲ್ಲಿ ಇವುಗಳು ಎತ್ತಿದ ಕೈ. ಆನೆಗಳು ಪೇಂಟ್ ಮಾಡುವ ವಿಡಿಯೋ ನೋಡಿದ್ದೀರಿ. ಚೆಂಡಾಟವಾಡುವ ವಿಡಿಯೋ ನೋಡಿದ್ದೀರಿ, ಮೊಬೈಲ್ನಲ್ಲಿ ಇಣುಕುವ ಆನೆಯ ವಿಡಿಯೋ ನೋಡಿದ್ದೀರಿ. ಈಗ ವೈರಲ್ ಆದ ಈ ವಿಡಿಯೋ ನೋಡಿ, ಡ್ರಮ್ ಕಲಾವಿದರನೊಬ್ಬ ತನ್ನ ಪಾಡಿಗೆ ತಾನು ನುಡಿಸುತ್ತ ಕುಳಿತಿದ್ದಾನೆ. ಅಲ್ಲಿಗೆ ಬಂದ ಆನೆ ತಾನೂ ನುಡಿಸುವಲ್ಲಿ ಆಸಕ್ತಿ ತೋರಿ ತನ್ನ ಸೊಂಡಿಯನ್ನು ಬೇಲಿಯೊಳಗಿಂದ ಚಾಚಿದೆ.
ಎರಿಕ್ ಸ್ಕಿಫರ್ ಎಂಬುವವರು ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ. ಸೊಂಡಿಲಿನಿಂದ ನುಡಿಸಲು ಪ್ರಯತ್ನಿಸುತ್ತದೆ, ಅದೂ ಲಯಬದ್ಧವಾಗಿ. ನಂತರ ಅದಕ್ಕೆ ಸ್ಟಿಕ್ ಬೇಕೆನ್ನಿಸುತ್ತದೆ ಎನ್ನಿಸುತ್ತದೆ. ಸ್ಟಿಕ್ಗಾಗಿ ಸೊಂಡಿಲು ಚಾಚಿದ್ದನ್ನು ಗಮನಿಸಬಹುದು. ಸುಮಾರು 50,000 ಜನರಿಂದ ಈ ವಿಡಿಯೋ ಆಕರ್ಷಿಸಲ್ಪಟ್ಟಿದೆ.
ಈ ಆನೆಯು ಕಾಡಿನಲ್ಲಿ ತನ್ನದೇ ಆದ ಬ್ಯಾಂಡ್ ಶುರು ಮಾಡಬೇಕು ಎಂದು ಅನೇಕರು ಅಭಿಪ್ರಾಯಿಸಿದ್ದಾರೆ. ಇನ್ನೂ ಅನೇಕರು ಆನೆಯ ಬ್ಯಾಂಡ್ಗೆ ಯಾವ್ಯಾವ ಪ್ರಾಣಿಗಳ ಹೆಸರನ್ನು ಸೇರಿಸಬೇಕು ಎಂದು ಪಟ್ಟಿ ಮಾಡಿದ್ದಾರೆ. ಆನೆಯ ಬ್ಯಾಂಡ್ ಪ್ರದರ್ಶನ ನೀಡಿದರೆ ನಾನಂತೂ ಖಂಡಿತ ಹಣ ಕೊಟ್ಟು ನೋಡುತ್ತೇನೆ ಎಂದ್ದಾರೆ ಇನ್ನೂ ಒಬ್ಬರು. ನಂತರ ಯಾರಾದರೂ ಈ ಕಲಾವಿದ ಆನೆ ಬಗ್ಗೆ ಡಾಕ್ಯುಮೆಂಟರಿ ಮಾಡಿದರೆ ನಾನು ನೆಟ್ಫ್ಲಿಕ್ಸ್ನಲ್ಲಿ ನೋಡಲು ಇಚ್ಛಿಸುತ್ತೇನೆ ಎಂದಿದ್ಧಾರೆ ಮಗದೊಬ್ಬರು. ಇಡೀ ಕಾಡಿನಲ್ಲಿಯೇ ಇದು ಮುದ್ದಾದ ಕೂಸು ಎಂದಿದ್ದಾರೆ ಇನ್ನೂ ಒಬ್ಬರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:25 pm, Thu, 24 November 22