Eastern Brown Snake: ಹಾವಿನೊಂದಿಗೆ ರಾತ್ರಿ ಕಳೆದಿದ್ದ ಮಹಿಳೆ: ಹಾಸಿಗೆಯೊಳಗಿತ್ತು 6 ಅಡಿ ಉದ್ದದ ವಿಷಪೂರಿತ ಹಾವು

|

Updated on: Mar 23, 2023 | 3:12 PM

ನೀವು ರಾತ್ರಿ ಉತ್ತಮ ನಿದ್ರೆ ಮಾಡಿ ಬೆಳಗ್ಗೆ ಚಾದರ ತೆಗೆದಾಗ ಒಮ್ಮೆ ಹಾವು ಕಾಣಿಸಿಕೊಂಡರೆ ಏನಾಗುತ್ತೆ ಹೇಳಿ.ಇಂಥದ್ದೇ ಒಂದು ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ, ಮಹಿಳೆಯೊಬ್ಬಳು ಬೆಳಗ್ಗೆ ಏಳುವಾಗ ಹಾಸಿಗೆಯಲ್ಲಿ 6 ಅಡಿ ಉದ್ದದ ವಿಷಪೂರಿತ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ

Eastern Brown Snake: ಹಾವಿನೊಂದಿಗೆ ರಾತ್ರಿ ಕಳೆದಿದ್ದ ಮಹಿಳೆ: ಹಾಸಿಗೆಯೊಳಗಿತ್ತು 6 ಅಡಿ ಉದ್ದದ ವಿಷಪೂರಿತ ಹಾವು
ಈಸ್ಟರ್ನ್​ ಬ್ರೌನ್ ಸ್ನೇಕ್
Follow us on

ನೀವು ರಾತ್ರಿ ಉತ್ತಮ ನಿದ್ರೆ ಮಾಡಿ ಬೆಳಗ್ಗೆ ಚಾದರ ತೆಗೆದಾಗ ಒಮ್ಮೆಲೆ ಹಾವು ಕಾಣಿಸಿಕೊಂಡರೆ ಏನಾಗುತ್ತೆ ಹೇಳಿ ಪರಿಸ್ಥಿತಿ. ಇಂಥದ್ದೇ ಒಂದು ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ, ಮಹಿಳೆಯೊಬ್ಬಳು ಬೆಳಗ್ಗೆ ಏಳುವಾಗ ಹಾಸಿಗೆಯಲ್ಲಿ 6 ಅಡಿ ಉದ್ದದ ವಿಷಪೂರಿತ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ರಾತ್ರಿ ಇಡೀ ಹಾವು ಅಲ್ಲಿಯೇ ಇತ್ತಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಹಾವು ಕಾಣಿಸಿಕೊಳ್ಳುತ್ತಿದ್ದಂತೆಯೇ ಕಿರುಚಿಕೊಂಡು ಕೋಣೆಯಿಂದ ಹೊರಹೋಗಿದ್ದಾರೆ. ಸಿಬಿಎಸ್ ನ್ಯೂಸ್ ವರದಿಯ ಪ್ರಕಾರ, ಕ್ವೀನ್ಸ್‌ಲ್ಯಾಂಡ್‌ನ ಮಹಿಳೆಯೊಬ್ಬರು ತಮ್ಮ ಹಾಸಿಗೆಯಲ್ಲಿ ಆರು ಅಡಿ ಉದ್ದದ ವಿಷಕಾರಿ ಹಾವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಘಟನೆ ಕಳೆದ ಸೋಮವಾರ ನಡೆದಿದೆ, ಮಹಿಳೆ ಹಾಸಿಗೆಯಿಂದ ಬೆಡ್​ಶೀಟ್​ ಅನ್ನು ಪಕ್ಕಕ್ಕೆ ಸರಿಸುವಾಗ ಕಂದು ಹಾವು  ಕಾಣಿಸಿಕೊಂಡಿತ್ತು.

ಏನಾದರೂ ಶಬ್ದ ಮಾಡಿದರೆ ಹಾವು ಓಡಿ ಹೋಗಬಹುದೆಂದು ಟವೆಲ್​ ಅನ್ನು ನೆಲಕ್ಕೆ ಹಾಕಿದರು, ಯಾವುದಕ್ಕೂ ಬಗ್ಗದೆ ಅದು ಮಲಗಿದಲ್ಲಿಯೇ ಮಲಗಿತ್ತು, ಬಳಿಕ ಹಾವು ಹಿಡಿಯುವವರನ್ನು ಕರೆಸಿ ಹಾವನ್ನು ಸುರಕ್ಷಿತವಾಗಿ ಅಲ್ಲಿಂದ ತೆರವುಗೊಳಿಸಲಾಯಿತು.

ಸ್ನ್ಯಾಕ್ ಕ್ಯಾಚರ್ ಜಚೇರಿ ರಿಚರ್ಡ್ ಅವರು ಕೋಣೆಗೆ ತಲುಪಿದಾಗ ಹಾವು ಅಲ್ಲಿಯೇ ಇತ್ತು, ಶಾಖದಿಂದ ಪಾರಾಗಲು ಹಾವು ಬಾಗಿಲಿನ ಮೂಲಕ ಕೋಣೆಗೆ ಪ್ರವೇಶಿಸಿರಬಹುದು ಎಂದು ರಿಚರ್ಡ್ ಹೇಳಿದರು.

ಹಾವನ್ನು ಹಿಡಿದ ನಂತರ, ರಿಚರ್ಡ್ ಅದನ್ನು ಇತರ ಮನೆಗಳಿಂದ ಸುರಕ್ಷಿತ ದೂರದಲ್ಲಿರುವ ಪೊದೆಯೊಳಗೆ ಬಿಟ್ಟಿದ್ದಾರೆ.
ಈಸ್ಟರ್ನ್ ಬ್ರೌನ್ ವಿಶ್ವದ ಎರಡನೇ ಅತ್ಯಂತ ವಿಷಕಾರಿ ಹಾವು. ಅದರ ವಿಷವು ಪ್ರಬಲವಾದ ನ್ಯೂರೋಟಾಕ್ಸಿನ್ ಅನ್ನು ಹೊಂದಿರುತ್ತದೆ.

ಈ ಹಾವು ಯಾರಿಗಾದರೂ ಕಚ್ಚಿದರೆ, ಅದರ ವಿಷವು ಹೃದಯ ಮತ್ತು ಶ್ವಾಸಕೋಶವನ್ನು ನಿಷ್ಕ್ರಿಯಗೊಳಿಸುತ್ತದೆ. ಆಗ ವ್ಯಕ್ತಿ ಉಸಿರುಗಟ್ಟಿ ವ್ಯಕ್ತಿ ಸಾಯುತ್ತಾನೆ. ಆಸ್ಟ್ರೇಲಿಯಾದಲ್ಲಿ ಈ ಹಾವಿನ ಕಡಿತದಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ