ವಯಸ್ಸು ಕೇವಲ ಸಂಖ್ಯೆಯಷ್ಟೆ! ಮನದುಂಬಿ ತಾಳಕ್ಕೆ ತಕ್ಕಂತೆ ಸ್ಟೆಪ್​ ಹಾಕಿದ ದಂಪತಿಗೆ ನೆಟ್ಟಿಗರಿಂದ ಪ್ರಶಂಸೆ

|

Updated on: May 11, 2021 | 12:43 PM

ವಯಸ್ಸನ್ನು ಲೆಕ್ಕಿಸದೇ ತಾಳಕ್ಕೆ ತಕ್ಕಂತೆ ನೃತ್ಯ ಮಾಡಿದ ಜೋಡಿ; ನೃತ್ಯಕ್ಕೆ ಸೋತ ನೆಟ್ಟಿಗರು.. ವಿಡಿಯೋ ಇಲ್ಲಿದೆ ನಿವೂ ನೋಡಿ.

ವಯಸ್ಸು ಕೇವಲ ಸಂಖ್ಯೆಯಷ್ಟೆ! ಮನದುಂಬಿ ತಾಳಕ್ಕೆ ತಕ್ಕಂತೆ ಸ್ಟೆಪ್​ ಹಾಕಿದ ದಂಪತಿಗೆ ನೆಟ್ಟಿಗರಿಂದ ಪ್ರಶಂಸೆ
ದಂಪತಿ ನೃತ್ಯ
Follow us on

ಸಂಗೀತ ಕೇಳುವುದರಿಂದ ಮಾನಸಿಕ ಒತ್ತಡದಿಂದ ದೂರವಾಗಬಹುದು ಎಂಬ ಮಾತಿದೆ. ಮನಸ್ಸಿಗೆ ಹಿತ ಎನಿಸುವ ಕೆಲಸವನ್ನು ಮಾಡುವುದರ ಮೂಲಕ ನೆಮ್ಮದಿಯಿಂದ ಇರಬಹುದು. ಅದರಲ್ಲಯೂ ನಮಗಿಷ್ಟದ ಹಾಡನ್ನು ಕೇಳುತ್ತಿದ್ದರೆ ಮನಸ್ಸೋ ಇಚ್ಛೆ ಸ್ಟೆಪ್​ ಹಾಕಿಬಿಡೋಣ ಅನಿಸುತ್ತೆ. ಕುಣಿಯಲು ವಯಸ್ಸೇಕೆ ಅಡ್ಡವಾಗಬೇಕು? ನೃತ್ಯ ಮಾಡಬೇಕು ಅನಿಸಿದಾಗ ಯಾವ ವಯಸ್ಸಿನವರೇ ಆಗಲಿ ಮನಸ್ಸಿಗೆ ಖುಷಿ ನೀಡುವಷ್ಟು ಕುಣಿದುಬಿಡಬೇಕು. ಇಲ್ಲಿ ವಯಸ್ಸಾದ ದಂಪತಿಗಳು ರಾಗ, ತಾಳಕ್ಕೆ ತಕ್ಕಂದೆ ನಗುತ್ತಾ ನೃತ್ಯ ಮಾಡಿದ ವಿಡಿಯೋ ಎಲ್ಲರ ಮನಗೆದ್ದಿದೆ. ಜೋಡಿಯಾಗಿ ಇಬ್ಬರೂ ನೃತ್ಯ ಮಾಡಿ ನೆಟ್ಟಿಗರ ಹೃದಯಗೆದ್ದ ನೃತ್ಯವನ್ನು ನೀವೂ ನೋಡಿ.

ವಿಡಿಯೋದಲ್ಲಿ ಗಮನಿಸುವಂತೆ ಹಾಡು ಪ್ರಾರಂಭವಾಗುತ್ತಿದ್ದಂತೆ ವಯಸ್ಸಾದ ದಂಪತಿಗಳಿಬ್ಬರು ನೃತ್ಯ ಮಅಡಲು ಪ್ರಾರಂಭಿಸುತ್ತಾರೆ. ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ, ಇಬ್ಬರೂ ಹೊಂದಾಣಿಕೆಯಲ್ಲಿ ನೃತ್ಯ ಮಾಡುತ್ತಾರೆ. ನಗುತ್ತಾ ಒಬ್ಬರ ಮುಖವನ್ನು ಒಬ್ಬರು ನೋಡುತ್ತಾ ಸ್ಟೆಪ್​ ಹಾಕಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗಿದೆ. ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ. ಯಾವ ವಯಸ್ಸಿನಲ್ಲಿಯೂ ನೃತ್ಯ ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾದವರು ಈ ಜೋಡಿಗಳು. ಉತ್ತಮ ಆರೋಗ್ಯ ಜೀವನ ಹೊಂದಿದ್ದರೆ ಖುಷಿಯಿಂದ, ಮನದುಂಬಿ ಕುಣಿಯಬಹುದು ಎಂಬುದಕ್ಕೆ ಸಾಕ್ಷಿಯಾದರು.

ಮೇ 7ರಂದು ಹಂಚಿಕೊಳ್ಳಲಾದ ಈ ವಿಡಿಯೋ 6.1 ಲಕ್ಷ ಜನರ ವೀಕ್ಷಣೆಗಳಿಸಿಕೊಂಡಿತು. ದಿನ ಸಾಗುತ್ತಿದ್ದಂತೆಯೇ ಇನ್ನೂ ಹೆಚ್ಚಿನ ಜನರ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ ದಂಪತಿ. ವಿಡಿಯೋ ನೋಡಿ ನೆಟ್ಟಿಗರ ಮನ ಗೆದ್ದ ದಂಪತಿಗೆ ಕಾಮೆಂಟ್​ ವಿಭಾಗದಲ್ಲಿ ಹೃದಯ ಇಮೋಜಿಗಳ ಸುರಿಮಳೆಯೇ ಬಂದಿದೆ. ದಂಪತಿಗಳಿಬ್ಬರು ತುಂಬಾ ಗ್ರೇಟ್​, ಐ ಲವ್​ ಇಟ್​ ಎಂದು ಓರ್ವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಮೆಂಟ್​ ವಿಭಾಗದಲ್ಲಿ ವಯಸ್ಸಾದ ದಂಪತಿ ನೃತ್ಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.

ಇದನ್ನೂ ಓದಿ: ಮದುವೆಯಲ್ಲಿ ಪಾಲ್ಗೊಳ್ಳಲು ಬಂದ ಐಶ್ವರ್ಯಾ ರೈ ಕುಟುಂಬ; ಭರ್ಜರಿ ಡಾನ್ಸ್​ ವಿಡಿಯೋ ವೈರಲ್