ಕಾಡುಗಳಲ್ಲಿ ಪ್ರಾಣಿಗಳ ನಡುವೆ ಪರಸ್ಪರ ಕಾದಾಟವು ಸಾಮಾನ್ಯವಾಗಿರುತ್ತವೆ. ಬಲಶಾಲಿ ಪ್ರಾಣಿಗಳು ತಮಗಿಂತ ಬಲಹೀನ ಪ್ರಾಣಿಗಳ ಜೊತೆ ಗುದ್ದಾಡುತ್ತಿರುತ್ತವೆ. ಇದೇನೇ ಇದ್ದರೂ ಕಾಡಿನಲ್ಲಿ ಸಿಂಹ, ಹುಲಿಯಂತಹ ಅದೆಷ್ಟೇ ಬಲಶಾಲಿ ಪ್ರಾಣಿಗಳು ಅಷ್ಟಾಗಿ ಆನೆಗಳ ತಂಟೆಗೆ ಹೋಗುವುದಿಲ್ಲ. ಕಾಡಿನ ಇತರ ಪ್ರಾಣಿಗಳು ಆನೆಯ ಮೇಲೆ ದಾಳಿ ಮಾಡುವುದು ತೀರಾ ವಿರಳ. ಆದರೆ ಇಲ್ಲೊಂದು ಪುಟ್ಟ ಘೇಂಡಾಮೃಗ ದೈತ್ಯ ಆನೆಯ ಜೊತೆಗೆ ಕಾದಡಲು ಹೋಗಿ ಪಜೀತಿಗೆ ಸಿಳುಕಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಇವುಗಳ ಕಾದಾಟದ ವೀಡಿಯೋ ವೈರಲ್ ಆಗಿದ್ದು, ಪುಟ್ಟ ಘೇಂಡಾಮೃಗದ ಧೈರ್ಯವನ್ನು ಮೆಚ್ಚಲೇಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.
ಈ ಕಾಡು ಪ್ರಾಣಿಗಳ ಕಾಳಗದ ಈ ವೀಡಿಯೋವನ್ನು ಭಾರತೀಯ ಅರಣ್ಯ ಅಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ದೈತ್ಯ ಆನೆ ಮತ್ತು ಘೇಂಡಾಮೃಗದ ನಡುವೆ ನಡೆಯುವ ಭೀಕರ ಕಾಳಗವನ್ನು ಕಾಣಬಹುದು.
ಯಾವುದೋ ಒಂದು ಕಾಡಿನಲ್ಲಿ ಆನೆ ಮತ್ತು ಘೇಂಢಾಮೃಗ ಮುಖಾಮುಖಿಯಾಗುತ್ತವೆ. ಒಬ್ಬರನ್ನೊಬ್ಬರು ಕಂಡು ಪರಸ್ಪರ ಕೋಪಗೊಂಡು ಕಾಳಗಕ್ಕೆ ಇಳಿಯುತ್ತವೆ. ಮೊದಲಿಗೆ ಆನೆ ಮುಂದೆ ಮುಂದೆ ಹೋಗಿ ತನ್ನ ಸೊಂಡಿಲಿನಿಂದ ಘೇಂಡಾಮೃಗಕ್ಕೆ ದಾಳಿ ಮಾಡಲು ಮುಂದಾಗುತ್ತದೆ. ಆಗ ಪುಟ್ಟ ಘೇಂಢಾಮೃಗವು ನನಗೂ ಶಕ್ತಿಯಿದೆ ಎಂದು ತನ್ನ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿ ಕೊಂಬಿನಿಂದ ಆನೆಯನ್ನು ತಿವಿಯಲು ಹೋಗುತ್ತದೆ. ಇದರಿಂದ ಇನ್ನಷ್ಟು ಕೋಪಗೊಂಡ ಆನೆ ತನ್ನ ಸೊಂಡಿಲಿನಿಂದ ಆ ಘೇಂಡಾಮೃಗವನ್ನು ಹೊಡೆದು ನೆಲಕ್ಕುರುಳಿಸುತ್ತದೆ. ಅಬ್ಬಬ್ಬಾ ಇನ್ನೂ ಜಗಳ ಯಾಕೆ ನನ್ನ ಪ್ರಾಣ ಉಳಿದರೆ ಸಾಕು ಎನ್ನುತ್ತಾ ಘೇಂಢಾಮೃಗವು ಆನೆಯ ದಾಳಿಯಿಂದ ತಪ್ಪಿಸಿಕೊಂಡು ಓಡಿ ಹೋಗುತ್ತದೆ.
ಇಲ್ಲಿದೆ ನೋಡಿ ವೀಡಿಯೊ:
‘Clash Of The Titans’ pic.twitter.com/Ztjm97H8wR
— Susanta Nanda (@susantananda3) June 8, 2023
ಇದನ್ನೂ ಓದಿ: Viral Video: ಕೆ.ಎಲ್-19 ಗಾಡಿ ಸೈಡಿಗೆ ಹಾಕಿ, ಹೇ ಹುಡುಗ ಏನೋ, ಯುವಕನ ತರ್ಲೆ ನೋಡಿ
ಜೂನ್ 8 ರಂದು ಟ್ವಿಟರ್ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೋ 114.7 ಸಾವಿರ ವೀಕ್ಷಣೆಗಳನ್ನು ಹಾಗೂ 2 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಲವು ಕಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ‘ಇಂತಹ ಕಾದಾಟವನ್ನು ನಾನೆಲ್ಲೂ ನೋಡಿಲ್ಲ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಘೇಂಡಾಮೃಗದ ಧೈರ್ಯವನ್ನು ಮೆಚ್ಚಲೇಬೇಕು. ಆ ಪ್ರಾಣಿ ಪುಟ್ಟದಾಗಿದ್ದರು, ದೈತ್ಯ ಆನೆಯ ಜೊತೆಗೆ ಧೈರ್ಯದಿಂದ ಹೋರಾಡಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಅದ್ಭುತ. ಇಂತಹ ಪ್ರಕೃತಿಯ ಸೊಬಗನ್ನು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು’ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: