ಆನೆಮುದ್ದು; ‘ಸೂಪರ್​! ನಿನ್ನ ವರದಿಗಾರಿಕೆಯನ್ನು ನಾನು ಮೆಚ್ಚಿದೆ’

| Updated By: ಶ್ರೀದೇವಿ ಕಳಸದ

Updated on: Nov 15, 2022 | 9:51 AM

Elephant Love : ‘ವನ್ಯಜೀವಿಗಳನ್ನು ಸಂರಕ್ಷಿಸಬೇಕು, ಆನೆಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು’ ಎಂದು ಈ ಪತ್ರಕರ್ತ ಲೈವ್​ ವರದಿ ಮಾಡುತ್ತಿರುವಾಗ ಆನೆಯೊಂದು ಖುಷಿಯಾಗಿ ಹೀಗೆ ತನ್ನ ಪ್ರೀತಿ ವ್ಯಕ್ತಪಡಿಸಿದೆ. ನೋಡಿ ವಿಡಿಯೋ.

ಆನೆಮುದ್ದು; ‘ಸೂಪರ್​! ನಿನ್ನ ವರದಿಗಾರಿಕೆಯನ್ನು ನಾನು ಮೆಚ್ಚಿದೆ’
Elephant showers TV reporter with love during broadcast
Follow us on

Viral Video : ಪತ್ರಕರ್ತರು ಲೈವ್​ನಲ್ಲಿದ್ದಾರೆ. ಹಿಂದೆ ಆನೆಗಳ ಹಿಂಡು ಇದೆ. ಅದರಲ್ಲಿ ಒಂದು ಆನೆ ಹಿಂದಿನಿಂದ ತನ್ನ ಸೊಂಡಿಲನ್ನೆತ್ತಿ ಅವರನ್ನು ಮುದ್ದಿಸಿದೆ. ಇದೀಗ ವೈರಲ್​ ಆಗಿದ್ದು ಈ ಸುಂದರವಾದ ದೃಶ್ಯವನ್ನು ನೆಟ್ಟಿಗರು ಮನಸಾರೆ ನೋಡುತ್ತಿದ್ದಾರೆ. ವನ್ಯಜೀವಿ ಟ್ರಸ್ಟ್​ವೊಂದರ ಬಗ್ಗೆ ಪತ್ರಕರ್ತ ಆಲ್ವಿನ್​ ಪ್ಯಾಟರ್ಸನ್​ ಕೌಂಡಾ ಸ್ಟೋರಿ ಮಾಡಲು ಹೋದಾಗ ಈ ಆಪ್ಯಾಯಮಾನ ಘಳಿಗೆಗಳು ಸಂಭವಿಸಿವೆ.

ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್‌ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ‘ಪ್ರತಿಯೊಬ್ಬರೂ ಸ್ಟಾರ್ ಆಗಲು ಇಚ್ಛಿಸುತ್ತಾರೆ! ಆಲ್ವಿನ್‌ನ ಪರ್ಫಾರ್ಮನ್ಸ್​ನಿಂದ ಕಿಂದಾನಿ ಪ್ರೇರಿತಳಾಗಿ ಅವನ ಮನಸ್ಸನ್ನು ಕಲಿಯಲು ನಿರ್ಧರಿಸಿದಳು’ ಎಂದು ವಿಡಿಯೋಗೆ ಒಕ್ಕಣೆ ಬರೆಯಲಾಗಿದೆ.

ಅಲ್ವಿನ್​ ಅನಾಥ ಆನೆಗಳು ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ವರದಿ ಮಾಡಲು ಇಲ್ಲಿ ಬಂದಿದ್ದರು. ಆ ಆನೆಗಳ ಹಿಂಡಿನಲ್ಲಿ ಒಂದು ಆನೆ ಹಿಂದಿನಿಂದ ಚುಂಬಿಸುವಾಗ ಆಲ್ವಿನ್​ ಆನೆಗಳಿಗೆ ವಾಸ್ತವ್ಯ ಕಲ್ಪಿಸುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಮೊದಲು ಸೊಂಡಿಲಿನಿಂದ ಕಿವಿಯನ್ನು ಮುದ್ದಿಸಿತು ನಂತರ ನೇರ ಅವನ ಬಾಯಿಯನ್ನು! 54,000 ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ