Viral: ಭಾರತೀಯರ ಮನಸ್ಸು ಗೆದ್ದ ಎಲಾನ್ ಮಸ್ಕ್, ಗಣೇಶನ ಬಗ್ಗೆ ಗ್ರೋಕ್ ಎಐ ಹೇಳಿದ್ದೇನು?

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ತಮ್ಮ ಕಂಪನಿ xAI ಅಭಿವೃದ್ಧಿಪಡಿಸಿದ ಎಐ ಚಾಟ್‌ಬಾಟ್ ಗ್ರೋಕ್ ಜೊತೆಗೆ ನಡೆಸಿದ ಸಂಭಾಷಣೆಯೂ ಭಾರತೀಯರ ಹೃದಯ ಗೆದ್ದುಕೊಂಡಿದೆ. ಇದಕ್ಕೆ ಕಾರಣವಾಗಿದ್ದು AI ಚಾಟ್‌ಬಾಟ್ ಗ್ರೋಕ್ ಗಣೇಶನನ್ನು ಗುರುತಿಸಿ, ವಿವರವನ್ನು ನೀಡಿರುವುದು. ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಭಾರೀ ಸಂಚಲನ ಮೂಡಿಸಿದೆ. ಈ ಕುರಿತಾದ ಪೋಸ್ಟ್ ಇಲ್ಲಿದೆ.

Viral: ಭಾರತೀಯರ ಮನಸ್ಸು ಗೆದ್ದ ಎಲಾನ್ ಮಸ್ಕ್, ಗಣೇಶನ ಬಗ್ಗೆ ಗ್ರೋಕ್ ಎಐ ಹೇಳಿದ್ದೇನು?
ಎಲಾನ್‌ ಮಸ್ಕ್‌
Image Credit source: Pinterest

Updated on: Nov 12, 2025 | 2:52 PM

ಎಐ ಲೋಕದಲ್ಲಿ ದಿನಕ್ಕೊಂದು ಬದಲಾವಣೆಗಳು ಆಗುತ್ತಿದ್ದು ಇದು ತಂತ್ರಜ್ಞಾನವು ಎಷ್ಟು ಮುಂದುವರೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಹೌದು, ಎಐಗೆ ಪ್ರತಿಸ್ಪರ್ಧಿಯಾಗಿರುವ ಎಲಾನ್ ಮಸ್ಕ್ (Elon Musk) ಅಭಿವೃದ್ಧಿಪಡಿಸಿರುವ AI ಚಾಟ್‌ಬಾಟ್ ಗ್ರೋಕ್ (AI Grok) ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಇದರ ಇಮೇಜ್ ಗುರುತಿಸುವಿಕೆ ಸಾಮರ್ಥ್ಯಗಳನ್ನು ಪರೀಕ್ಷಿಸಲು ಮಸ್ಕ್ ಹಿಂದೂ ದೇವರಾದ ಗಣೇಶನನ್ನು ಬಳಸಿಕೊಂಡಿದ್ದಾರೆ. ಗಣೇಶ ಫೋಟೋ ಅಪ್ಲೋಡ್ ಮಾಡಿದ್ದಾರೆ. ಆ ಬಳಿಕ ಚಾಟ್‌ಬಾಟ್ ಗ್ರೋಕ್‌ನಲ್ಲಿ ಈ ಬಗ್ಗೆ ವಿವರ ಕೇಳಿದ್ದು ಮಸ್ಕ್‌ ಅವರಿಗೆ ಉತ್ತರ ಸಿಕ್ಕಿದೆ. ಈ ಸಂಭಾಷಣೆಯ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು ಇದು ಎಲ್ಲರ ಗಮನ ಸೆಳೆಯುತ್ತಿದೆ.

ಭಾರತೀಯರ ಮನಸ್ಸು ಗೆದ್ದ ಎಲಾನ್ ಮಸ್ಕ್

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥರು ತಮ್ಮ ಕಂಪನಿ xAI ಅಭಿವೃದ್ಧಿಪಡಿಸಿದ AI ಚಾಟ್‌ಬಾಟ್ ಗ್ರೋಕ್ ನ ಚಿತ್ರ ಗುರುತಿಸುವಿಕೆ ಸಾಮರ್ಥ್ಯಗಳನ್ನು ಪರೀಕ್ಷಿಸಲು ಸಾಂಪ್ರದಾಯಿಕ ಹಿತ್ತಾಳೆ ಗಣೇಶನ ವಿಗ್ರಹದ ಫೋಟೋವನ್ನು ಅಪ್‌ಲೋಡ್ ಮಾಡಿ “ಇದು ಏನು?” ಎಂದು ಕೇಳಿದ್ದಾರೆ. ಚಾಟ್‌ಬಾಟ್ ವಿಗ್ರಹವನ್ನು ಗುರುತಿಸಿದ್ದು ಗಣೇಶನ ಬಗ್ಗೆ ವಿವರವಾರ ಮಾಹಿತಿ ನೀಡಿದೆ ಭಾರತೀಯರು ಪೂಜಿಸಲ್ಪಡುವ ಹಿಂದೂ ದೇವರಾದ ಗಣೇಶನ ಸಣ್ಣ ಹಿತ್ತಾಳೆಯ ಪ್ರತಿಮೆಯಾಗಿದೆ. ಆನೆಯ ತಲೆ, ನಾಲ್ಕು ತೋಳುಗಳು, ಕುಳಿತಿರುವ ಭಂಗಿ ಮತ್ತು ದೇವರ ಪಾದಗಳ ಹತ್ತಿರ ಇಲಿ ಇರುವ ಬಗ್ಗೆ ಪ್ರಮುಖ ಈ ಪ್ರತಿಮೆಯ ವೈಶಿಷ್ಟ್ಯಗಳನ್ನು ವಿವರಿಸಿದೆ.

ಗಣೇಶನನ್ನು ಅಡೆತಡೆಗಳನ್ನು ನಿವಾರಿಸುವವನು. ಆರಂಭ, ಬುದ್ಧಿವಂತಿಕೆ ಮತ್ತು ಸಮೃದ್ಧಿಯ ದೇವರು ಎಂದು ಕರೆಯಲಾಗುತ್ತದೆ. ಈ ವಿಗ್ರಹಗಳನ್ನು ಸಾಮಾನ್ಯವಾಗಿ ಪೂಜಾ ಕೊಠಡಿಗಳಲ್ಲಿ ದೈನಂದಿನ ಪೂಜೆಗೆ ಬಳಸಲಾಗುತ್ತದೆ. ಇದು ಸಾಂಪ್ರದಾಯಿಕ ದಕ್ಷಿಣ ಭಾರತೀಯ ಶೈಲಿಯ ಹಿತ್ತಾಳೆಯ ಮೂರ್ತಿಯಂತೆ ಕಾಣುತ್ತದೆ. ಇದನ್ನು ಬಹುಶಃ ಕೆಂಪು ಹಿನ್ನೆಲೆಯಲ್ಲಿ ಮರದ ಪೀಠದ ಮೇಲೆ ಇರಿಸಲಾಗುತ್ತದೆ ಎಂದು ಅದು ಮಸ್ಕ್‌ಗೆ ತಿಳಿಸಿದೆ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

ಇದನ್ನೂ ಓದಿ:ಮೊಟ್ಟ ಮೊದಲ ಬಾರಿಗೆ ಮನುಷ್ಯರ ಬಳಿಯೇ ಸಲಹೆ ಕೇಳಿದ ಎಐ ಇನ್ಫ್ಲುಯೆನ್ಸರ್ ನೈನಾ

ನವೆಂಬರ್ 11 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 11.1 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಡಿವೆ. ಒಬ್ಬ ಬಳಕೆದಾರ ಈ ಕಾರಣದಿಂದಲೇ ಭಾರತೀಯರ ಮನಸ್ಸನ್ನು ಗೆದ್ದುಕೊಂಡಿತು ಎಂದಿದ್ದಾರೆ. ಇನ್ನೊಬ್ಬರು, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಹಿಂದೂ ಸಂಪ್ರದಾಯದಲ್ಲಿ ಆಳವಾಗಿ ಬೇರೂರಿರುವ ಚಿಹ್ನೆಯ ಬಗ್ಗೆ ಆಸಕ್ತಿ ವಹಿಸುವುದನ್ನು ನೋಡಲು ಖುಷಿಯಾಗುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ನಿಜಕ್ಕೂ ಇದು ಅದ್ಭುತವಾಗಿದೆ. ಹಿಂದೂ ದೇವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಮೆಚ್ಚುವಂತಹದ್ದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ