ಜಗತ್ತಿನ ಈ ಒಂದು ದೇಶದಲ್ಲಿ ಮಾತ್ರ ವರ್ಷಕ್ಕೆ 12 ಅಲ್ಲ 13 ತಿಂಗಳಂತೆ! ವಾರಕ್ಕೆ ಐದೇ ದಿನವಂತೆ

|

Updated on: Aug 28, 2024 | 10:38 AM

ಜಗತ್ತಿನಲ್ಲಿರುವ ಒಂದು ದೇಶದಲ್ಲಿ ಮಾತ್ರ ವರ್ಷಕ್ಕೆ 12 ಅಲ್ಲ ಬದಲಾಗಿ 13 ತಿಂಗಳಿದೆ, ಹಾಗೆಯೇ ವಾರಕ್ಕೆ 7 ದಿನವಲ್ಲ ಬದಲಾಗಿ 5 ದಿನಗಳಿವೆ. ಅದೇ ಇಥಿಯೋಪಿಯಾ ದೇಶ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ದೇಶದ ಹೆಸರೇ ಇಥಿಯೋಪಿಯಾ. ಇಲ್ಲಿ ಒಟ್ಟು 13 ತಿಂಗಳುಗಳಿರಲಿವೆ, ವಾರಕ್ಕೆ ಐದು ದಿನ ಮಾತ್ರ, ಒಂದೊಮ್ಮೆ ಅಧಿಕ ವರ್ಷ ಇರುವ ಸಂದರ್ಭದಲ್ಲಿ ಕ್ಯಾಲೆಂಡರ್​ನಲ್ಲಿ 6 ದಿನಗಳಿರಲಿವೆ.

ಜಗತ್ತಿನ ಈ ಒಂದು ದೇಶದಲ್ಲಿ ಮಾತ್ರ ವರ್ಷಕ್ಕೆ 12 ಅಲ್ಲ 13 ತಿಂಗಳಂತೆ! ವಾರಕ್ಕೆ ಐದೇ ದಿನವಂತೆ
ಇಥಿಯೋಪಿಯಾ
Follow us on

ಪ್ರಪಂಚದ ವಿವಿಧ ದೇಶಗಳಲ್ಲಿ ವಿಭಿನ್ನ ಸಂಸ್ಕೃತಿ, ಸಂಪ್ರದಾಯಗಳಿವೆ. ಯಾಕೆಂದರೆ ಹಲವು ಧರ್ಮ, ಜಾತಿಯ ಜನರು ವಾಸಿಸುತ್ತಿದ್ದಾರೆ. ಆದರೆ ಈ ಎಲ್ಲಾ ಸ್ಥಳಗಳಲ್ಲಿ ಸಾಮಾನ್ಯವೆಂದರೆ ಅದು ವಾರ, ತಿಂಗಳು, ವರ್ಷ. ಅದಕ್ಕಾಗಿ ಹಲವು ಬಗೆಯ ಕ್ಯಾಲೆಂಡ್​ಗಳು ಕೂಡ ಚಾಲ್ತಿಯಲ್ಲಿವೆ, ಆದರೆ ಜಗತ್ತಿನ ಒಂದು ದೇಶದಲ್ಲಿ ಮಾತ್ರ 12 ತಿಂಗಳ ಬದಲು 13 ತಿಂಗಳುಗಳಿವೆ, ವಾರದಲ್ಲಿರುವ ದಿನ ಐದು ಹೀಗಾಗಿ, ಈ ದೇಶದ ಬೇರೆಲ್ಲಾ ದೇಶಗಳಿಗಳಿಂದ 7 ವರ್ಷ ಹಿಂದುಳಿದಿದೆ ಎಂದೇ ಹೇಳಲಾಗುತ್ತದೆ.

ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ದೇಶದ ಹೆಸರೇ ಇಥಿಯೋಪಿಯಾ. ಇಲ್ಲಿ ಒಟ್ಟು 13 ತಿಂಗಳುಗಳಿರಲಿವೆ, ವಾರಕ್ಕೆ ಐದು ದಿನ ಮಾತ್ರ, ಒಂದೊಮ್ಮೆ ಅಧಿಕ ವರ್ಷ ಇರುವ ಸಂದರ್ಭದಲ್ಲಿ ಕ್ಯಾಲೆಂಡರ್​ನಲ್ಲಿ 6 ದಿನಗಳಿರಲಿವೆ.

ಇಥಿಯೋಪಿಯಾ ಸೆಪ್ಟೆಂಬರ್ 11 ರಂದು ಹೊಸ ವರ್ಷವನ್ನು ಆಚರಿಸುತ್ತದೆ. ಕೆಲವು ದೇಶಗಳು ತಮ್ಮ ಪ್ರಾಚೀನ ಕ್ಯಾಲೆಂಡರ್ ಅನ್ನು ಅನುಸರಿಸುತ್ತವೆ. ಇಥಿಯೋಪಿಯಾದಲ್ಲಿ ಕೂಡ ಹಾಗೆ. ಇದನ್ನು ರೋಮನ್ ಚರ್ಚ್ 525 AD ನಲ್ಲಿ ತಿದ್ದುಪಡಿ ಮಾಡಿದೆ.

ಮತ್ತಷ್ಟು ಓದಿ: ಮದುವೆಯಾದ ಕೇವಲ 15 ದಿನಕ್ಕೆ ತಿರುಪತಿ ತಿಮ್ಮಪ್ಪನ ಸಾನಿಧ್ಯದಲ್ಲಿ ಪ್ರಾಣಬಿಟ್ಟ ಮದುಮಗ

ಬ್ರಿಟನ್‌ನ ಗುಲಾಮನಾಗದ ಏಕೈಕ ಆಫ್ರಿಕನ್ ದೇಶ ಇಥಿಯೋಪಿಯಾ. ಇದನ್ನು ಒಮ್ಮೆ ಇಟಲಿ ಆಕ್ರಮಿಸಿಕೊಂಡಿತ್ತು, ಆದರೆ ಅವರು 6 ವರ್ಷಗಳ ನಂತರ ಬಿಟ್ಟು ಹೋದರು. ಲಭ್ಯವಿರುವ ಮಾಹಿತಿಯ ಪ್ರಕಾರ, ಕಾಫಿ ಇಥಿಯೋಪಿಯಾದಲ್ಲಿಯೇ ಹುಟ್ಟಿಕೊಂಡಿದೆ.\

12 ತಿಂಗಳುಗಳು ಪ್ರತಿಯೊಂದೂ 30 ದಿನಗಳನ್ನು ಹೊಂದಿರುತ್ತವೆ ಮತ್ತು 13 ನೇ ತಿಂಗಳು ವರ್ಷದ ಕೊನೆಯ ತಿಂಗಳಾಗಿದ್ದು, ಐದು ಅಥವಾ ಆರು ದಿನಗಳನ್ನು ಹೊಂದಿರುತ್ತದೆ.

ಜನವರಿ-ಫೆಬ್ರವರಿಯಲ್ಲ, ಇವು ತಿಂಗಳ ಹೆಸರುಗಳು!
ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ತಿಂಗಳುಗಳ ಹೆಸರುಗಳು ಜನವರಿ, ಫೆಬ್ರವರಿ, ಮಾರ್ಚ್ ಇತ್ಯಾದಿ, ಆದರೆ ಇಥಿಯೋಪಿಯನ್ ಅಂದರೆ ಗೀಜ್ ಕ್ಯಾಲೆಂಡರ್‌ನ ತಿಂಗಳುಗಳ ಹೆಸರುಗಳು ಸಹ ವಿಭಿನ್ನವಾಗಿವೆ.
ಮೊದಲ ತಿಂಗಳು ಮೆಸ್ಕೆರೆಮ್, ಇದು ಹೊಸ ವರ್ಷದ ತಿಂಗಳು. ಈ ತಿಂಗಳು ಸೆಪ್ಟೆಂಬರ್ 11 ರಿಂದ ಪ್ರಾರಂಭವಾಗುತ್ತದೆ. ಇದರ ನಂತರ ಎರಡನೇ ತಿಂಗಳು ಟಿಕಿಮ್ಟ್. ನಂತರ ಹಿದರ್, ತಹ್ಸಾಸ್, ತಿರ್, ಯಕಟಿಟ್, ಮ್ಯಾಗಬಿಟ್, ಮಿಯಾಜಿಯಾ, ಗಿನ್ಬೋಟ್, ಸೆನೆ, ಹ್ಯಾಮ್ಲೆ, ನೆಹಾಸಾ ಮತ್ತು ಪಗುಮೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 10:37 am, Wed, 28 August 24