Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಗರ್ಭಿಣಿಯಾಗಲು ವಿದೇಶಿ ಮಹಿಳೆಯರು ಭಾರತದ ಈ ಗ್ರಾಮಕ್ಕೆ ಬರುತ್ತಾರೆ, ಇದರ ಹಿಂದಿನ ಕಾರಣ ಎನ್ ಗೊತ್ತಾ?

ಭಾರತದ ಈ ಹಳ್ಳಿಯ ಪುರುಷರಿಂದ ಗರ್ಭಿಣಿಯಾಗಲು ವಿದೇಶಿ ಮಹಿಳೆಯರು ನಾ ಮುಂದು ತಾ ಮುಂದು ಎಂದು ಇಲ್ಲಿಗೆ ಪ್ರವಾಸ ಬರ್ತಾರೆ, ಈ ವಿಶೇಷ ಹಳ್ಳಿ ಎಲ್ಲಿದೆ ಗೊತ್ತಾ?

Viral: ಗರ್ಭಿಣಿಯಾಗಲು ವಿದೇಶಿ ಮಹಿಳೆಯರು ಭಾರತದ ಈ ಗ್ರಾಮಕ್ಕೆ ಬರುತ್ತಾರೆ, ಇದರ ಹಿಂದಿನ ಕಾರಣ ಎನ್ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 27, 2024 | 5:37 PM

ಭಾರತವು ವಿದೇಶಿಯರ ಆಕರ್ಷಣೆಯ ತಾಣವಾಗಿದೆ. ಇಲ್ಲಿನ ಧಾರ್ಮಿಕ, ಐತಿಹಾಸಿಕ ಮತ್ತು ನೈಸರ್ಗಿಕ ತಾಣಗಳ ಸೌಂದರ್ಯವನ್ನು ಸವಿಯಲು ಪ್ರಪಂಚದ ಮೂಲೆ ಮೂಲೆಗಳಲ್ಲಿನ ಜನರು ನಮ್ಮ ದೇಶಕ್ಕೆ ಭೇಟಿ ನೀಡುತ್ತಾರೆ. ಅಷ್ಟು ಮಾತ್ರವಲ್ಲದೆ ನಮ್ಮ ದೇಶದ ಒಂದು ವಿಶೇಷ ಹಳ್ಳಿಗೆ ಇಲ್ಲಿನ ಪುರುಷರಿಂದ ಗರ್ಭಿಣಿಯಾಗಲು ಯುರೋಪಿನ ಮಹಿಳೆಯರು ಇಲ್ಲಿಗೆ ಪ್ರವಾಸ ಬರುತ್ತಾರೆ. ಅಷ್ಟಕ್ಕೂ ಈ ಹಳ್ಳಿ ಎಲ್ಲಿದೆ, ಗರ್ಭ ಧರಿಸಲು ಇಲ್ಲಿಗೆಯೇ ಬರಲು ಕಾರಣವೇನು? ಈ ಎಲ್ಲದರ ಮಾಹಿತಿ ಇಲ್ಲಿದೆ.

ಈ ವಿಶೇಷ ಸ್ಥಳ ಎಲ್ಲಿದೆ? ವಿದೇಶಿ ಮಹಿಳೆಯರು ಇಲ್ಲಿನ ಪುರುಷರಿಂದ ಗರ್ಭಿಣಿಯಾಗಲು ಏಕೆ ಬಯಸುತ್ತಾರೆ?

ಕಾರ್ಗಿಲ್‌ನಿಂದ ಸುಮಾರು 70 ಕಿಮೀ ದೂರದಲ್ಲಿ ಲಡಾಖ್‌ನಲ್ಲಿ ಒಂದು ಗ್ರಾಮವಿದೆ. ಈ ಗ್ರಾಮವನ್ನು ಆರ್ಯ ಕಣಿವೆ ಎಂದು ಕರೆಯಲಾಗುತ್ತದೆ. ಇಲ್ಲಿ ವಾಸಿಸುವ ಪುರುಷರಿಂದ ಗರ್ಭಿಣಿಯಾಗಲು ವಿದೇಶದಲ್ಲಿನ ಮಹಿಳೆಯರು ಇಲ್ಲಿಗೆ ಪ್ರವಾಸ ಬರುತ್ತಾರೆ. ಬ್ರೋಕ್ಪಾ ಎಂಬ ಬುಡಕಟ್ಟು ಜನಾಂಗದವರು ಲಡಾಖ್‌ನ ಆರ್ಯ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಈ ಬುಡಕಟ್ಟು ಜನಾಂಗದವರು ಅಲೆಕ್ಸಾಂಡರ್ ದಿ ಗ್ರೇಟ್ ಸೈನ್ಯದ ವಂಶಸ್ಥರು ಎಂದು ಹೇಳಲಾಗುತ್ತದೆ. ಅಲ್ಲದೆ ಅಲೆಕ್ಸಾಂಡರ್ ದಿ ಗ್ರೇಟ್ ಭಾರತವನ್ನು ತೊರೆದಾಗ ಆತನ ಕೆಲ ಸೈನ್ಯವು ಭಾರತದಲ್ಲಿ ಉಳಿದಿತ್ತು. ಮತ್ತು ಅವರ ವಂಶಸ್ಥರು ಇನ್ನೂ ಭಾರತದಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ಈ ಜನಾಂಗದ ಪುರುಷರಿಂದ ಗರ್ಭ ಧರಿಸಿದರೆ ಉತ್ತಮ ಮೈಕಟ್ಟು ಹಾಗೂ ಶಾರೀರಿಕ ರಚನೆ, ನೀಲಿ ಕಣ್ಣುಗಳು ಹಾಗೂ ಸದೃಢ ದೇಹದಿಂದ ಮಗು ಜನಿಸುತ್ತದೆ ಎಂಬುದು ಯುರೋಪ್ ಮಹಿಳೆಯರ ನಂಬಿಕೆ. ಇದೇ ಕಾರಣಕ್ಕೆ ಯುರೋಪಿನ ಮಹಿಳೆಯರು ಇಲ್ಲಿಗೆ ಬರುತ್ತಾರೆ. ಗರ್ಭಿಣಿಯಾದ ನಂತರ, ವಿದೇಶಿ ಮಹಿಳೆಯರು ತಮ್ಮ ದೇಶಕ್ಕೆ ಮರಳುತ್ತಾರೆ. ಇದಕ್ಕಾಗಿ ವಿದೇಶಿ ಮಹಿಳೆಯರು ಈ ಪುರುಷರಿಗೆ ಹಣವನ್ನು ಕೂಡಾ ಪಾವತಿಸುತ್ತಾರೆ ಎಂದು ಹೇಳಲಾಗುತ್ತದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ಪೋಸ್ಟ್ ಒಂದನ್ನು ದೇವೇಂದ್ರ ಕುಮಾರ್ ಸೈನಿ(Devendra Kumar Saini) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಭಾರತದ ಲಡಾಖ್‌ನಲ್ಲಿ ಗರ್ಭಧಾರಣೆಯ ಪ್ರವಾಸೋದ್ಯಮ ಇದೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ವಿಡಿಯೋದಲ್ಲಿ ವ್ಯಕಿಯೊಬ್ಬರು ಲಡಾಖ್ ನಲ್ಲಿರುವ ಗರ್ಭಧಾರಣೆಯ ಪ್ರವಾಸೋದ್ಯಮ ಬಗ್ಗೆ ವಿವರಿಸುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಪೊಲೀಸ್‌ ಪರೀಕ್ಷೆ ಬರೆಯಲು ಹೋದ ಗಂಡ, ಬಾಯ್‌ಫ್ರೆಂಡನ್ನು ಬೆಡ್‌ರೂಮ್‌ಗೆ ಕರೆಸಿದ ಹೆಂಡ್ತಿ, ಮುಂದೇನಾಯ್ತು

ಆಗಸ್ಟ್ 23 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇದು ನಿಜವೇ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ ಅರೇ ಇದೇನಿದು ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್ ಶೇಖ್ ಹಮ್ದಾನ್​ಗೆ ಚಂಡೆ ವಾದ್ಯದ ಸ್ವಾಗತ
ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್ ಶೇಖ್ ಹಮ್ದಾನ್​ಗೆ ಚಂಡೆ ವಾದ್ಯದ ಸ್ವಾಗತ