ಇಡೀ ವಿಶ್ವದ ಆರ್ಥಿಕ ಸ್ಥಿತಿಗತಿ ಹಾಗೂ ಜನರ ಬದುಕನ್ನು ದುಸ್ಥಿತಿಗೆ ತಳ್ಳಿದ ಮಹಾಮಾರಿ ಕೊರೋನಾದ ಬಗ್ಗೆ ಅಚ್ಚರಿಯ ಸುದ್ದಿಯೊಂದು ಹರಿದಾಡುತ್ತಿದೆ. ಅದರಲ್ಲೂ ವಿಶ್ವ ಆರೋಗ್ಯ ಸಂಸ್ಥೆ (WHO) ಮಹಾನಿರ್ದೇಶಕರು ಹೇಳಿದ್ದಾಗಿ ಸುದ್ದಿ ಹರಿದಾಡುತ್ತಿರುವುದು ಕುತೂಹಲ ಕೆರಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಂತೆ, “ಧನ್ಯವಾದ ದೇವರೆ, ಕೋವಿಡ್ -19 ನಮ್ಮ ಹತ್ತಿರ ಎಲ್ಲಿಯೂ ಇಲ್ಲ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ( Tedros Adhanom Ghebreyesus) ಹೇಳಿದ್ದಾಗಿ ಸುದ್ದಿಯೊಂದು ಹರಿದಾಡುತ್ತಿದೆ.
ಇದನ್ನೂ ಓದಿ: Viral Video: ಗೋಲ್ಗಪ್ಪ ಪ್ರಿಯರೇ ಇಲ್ಲಿ ನೋಡಿ… ಗೋಲ್ಗಪ್ಪ ನೀರಿನ ರುಚಿಯನ್ನು ಹೆಚ್ಚಿಸಲು ಟಾಯ್ಲೆಟ್ ಕ್ಲೀನರ್ ಬಳಕೆ
“COVID-19 ನಮ್ಮ ಹತ್ತಿರ ಎಲ್ಲಿಯೂ ಇಲ್ಲ,” ಎಂದು ಪಂಜಾಬಿ ನ್ಯೂಸ್ ಪೋರ್ಟಲ್‌ನ ಪೋಸ್ಟ್ನಲ್ಲಿ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರನ್ನು ಉಲ್ಲೇಖಿಸಿದ್ದು, AFWA ನಡೆಸಿದ ಫ್ಯಾಕ್ಟ್ ಚೆಕ್ನಲ್ಲಿ ಇದು ಸುಳ್ಳು ಎಂದು ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಂತೆ “ಕೋವಿಡ್ -19 ನಮ್ಮ ಹತ್ತಿರ ಎಲ್ಲಿಯೂ ಇಲ್ಲ” ಎಂದು WHO ಮುಖ್ಯಸ್ಥರು ಎಲ್ಲೂ ಹೇಳಿಲ್ಲ. ಬದಲಾಗಿ “ವೈರಸ್‌ನ ಹೊಸ ಅಲೆಗಳು ಎಲ್ಲಿಯೂ ಹತ್ತಿರದಲ್ಲಿಲ್ಲ ಎಂಬುದನ್ನಷ್ಟೇ ಹೇಳಿರುವುದು ಫ್ಯಾಕ್ಟ್ ಚೆಕ್ನಲ್ಲಿ ತಿಳಿದುಬಂದಿದೆ.
ವೈರಲ್ ಆಗುತ್ತಿರುವ ಪೋಸ್ಟ್ ಕೆನಡಾ ಮೂಲದ ಪಂಜಾಬಿ ಟಿವಿ ಚಾನೆಲ್ ಪ್ರೈಮ್ ಏಷ್ಯಾ ಟಿವಿಯ ಲೋಗೋವನ್ನು ಹೊಂದಿದೆ. ಈ ಸುದ್ದಿಯ ಫೇಸ್‌ಬುಕ್ ಪೋಸ್ಟ್ ಅನ್ನು ಪರಿಶೀಲಿಸಿದಾಗ ಅದೇ ಪೋಸ್ಟ್ ಅನ್ನು ಅಲ್ಲಿ ಕಂಡುಬಂದಿದೆ. ಅದೇ ಪೋಸ್ಟ್ ಅನ್ನು ಪಂಜಾಬ್ ಟುಡೆ 24 ಮತ್ತು ಪಂಜಾಬ್ ಲೈವ್‌ನಲ್ಲಿ ಸಹ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಕೋವಿಡ್ ಹೆಮ್ಮಾರಿ ಜನರ ನಡುವೆಯಿಂದ ಮುಕ್ತವಾಗಿಲ್ಲ.
ಇದನ್ನೂ ಓದಿ: Viral Video: ಟೋಲ್ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡ “ದಿ ಗ್ರೇಟ್ ಖಲಿ”
ಡಬ್ಲ್ಯೂಎಚ್ಒ ಮುಖ್ಯಸ್ಥರು ಹೇಳಿದ್ದೇನು?
“ವೈರಸ್‌ನ ಹೊಸ ಅಲೆಗಳು ಕೋವಿಡ್ -19 ಎಲ್ಲಿಯೂ ಹತ್ತಿರದಲ್ಲಿಲ್ಲ ಎಂದು ಮತ್ತೆ ತೋರಿಸುತ್ತವೆ” ಎಂದು ಜುಲೈ 12 ರಂದು ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. “ವೈರಸ್ ಮುಕ್ತವಾಗಿ ಚಾಲನೆಯಲ್ಲಿದೆ. ತೀವ್ರತರವಾದ ಪ್ರಕರಣಗಳಿಗೆ ಆಸ್ಪತ್ರೆಗೆ ದಾಖಲಾಗುವ ಮತ್ತು ಜನರ ಸಂಖ್ಯೆ ಹೆಚ್ಚುತ್ತಿರುವ ದೇಶಗಳು ತಮ್ಮ ಸಾಮರ್ಥ್ಯದ ಆಧಾರದ ಮೇಲೆ ರೋಗದ ಹೊರೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿಲ್ಲ. ಕೋವಿಡ್-19 ಸ್ಥಿತಿಯನ್ನು ಸಾಮಾನ್ಯವಾಗಿ ದೀರ್ಘ ಕೋವಿಡ್ ಎಂದು ಕರೆಯಲಾಗುತ್ತದೆ. ವೈಜ್ಞಾನಿಕ ಸಮುದಾಯಗಳು, ರಾಜಕಾರಣಿಗಳು ಮತ್ತು ಸಾರ್ವಜನಿಕರ ನಡುವೆ ರೋಗದ ಅಪಾಯದ ಗ್ರಹಿಕೆಯಲ್ಲಿ ಸಂಪರ್ಕ ಕಡಿತಗೊಂಡಿದೆ ಎಂದು ಅಧಾನೊಮ್ ಘೆಬ್ರೆಯೆಸಸ್ ಹೇಳಿದರು.
ಇದನ್ನೂ ಓದಿ: Viral News: ಬಾಲಕನನ್ನು ಮೊಸಳೆ ನುಂಗಿದೆ ಎಂದುಕೊಂಡ ಜನ; ಹುಡುಗನ ಕಾಪಾಡಲು ಮಾಡಿದ ಪ್ಲಾನ್ ಏನು ಗೊತ್ತಾ?