ನೂಡಲ್ಸ್ ಅಂದ್ರೆ ನಿಮಗಿಷ್ಟಾನಾ? ಇಲ್ವಾ? ಸಾಮಾನ್ಯವಾಗಿ ದಿಢೀರ್ ಸ್ನ್ಯಾಕ್ಸ್ (Snacks) ತಯಾರಿಸಲು ಮೊದಲ ಆಯ್ಕೆ ನೂಡಲ್ಸ್ ಅಥವಾ ಮ್ಯಾಗಿ. ಇತ್ತೀಚಿನಗಿನವರಿಗಂತೂ ನೂಡಲ್ಸ್ನಂತಹ ಫುಡ್ಗಳನ್ನು ತುಂಬಾ ಇಷ್ಟಪಡುತ್ತಾರೆ. ಈಗೆಲ್ಲಾ ಇನ್ಸ್ಟಂಟ್ ಮ್ಯಾಗಿ ಇರೋದ್ರಿಂದ ಕೆಲ ನಿಮಿಷಗಳಲ್ಲಿ ಮನೆಯಲ್ಲಿಯೇ ರೆಸಿಪಿ (Recipe) ತಯಾರಿಸಿಕೊಳ್ಳಬಹುದು. ಸಾಮಾನ್ಯವಾಗಿ ನೂಡಲ್ಸ್ಅನ್ನು ಬಿಸಿ ನೀರಿನಲ್ಲಿ ಬೇಯಿಸಿ ಮಸಾಲಾ ಜೊತೆ ಮಿಶ್ರಣ ಮಾಡಿ ತಯಾರಿಸಲಾಗುತ್ತೆ. ಆದರೆ ಇದೀಗ ಫುಲ್ ವೈರಲ್ ಆದ ಸುದ್ದಿಯೊಂದರಲ್ಲಿ ನೂಡಲ್ಸ್ಅನ್ನು(Noodles) ಫಾಂಟಾ ಕೋಲ್ಡ್ ಡ್ರಿಂಕ್ಸ್ (Fanta Cold Drinks) ಜೊತೆ ತಯಾರಿಸಲಾಗಿದೆ. ನೀರಿನ ಬದಲು ಫಾಂಟಾ ಹಾಕಿ ನೂಡಲ್ಸ್ ತಯಾರಿಸಲಾಗಿದೆ. ಫಾಂಟಾ ಕೋಲ್ಡ್ ಡ್ರಿಂಕ್ಸ್ ವಿತ್ ನೂಡಲ್ಸ್ ರೆಸಿಪಿ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಫುಲ್ ವೈರಲ್ ಆಗಿದೆ.
ಯೂಟ್ಯೂಬ್ನಲ್ಲಿ ಈ ರೆಸಿಪಿಯ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ದೆಹಲಿಯ ಎನ್ಸಿಆರ್ ಫುಡ್ ಸ್ಟ್ರೀಟ್ನಲ್ಲಿ ತಯಾರಾಗುತ್ತಿದ್ದ ಈ ಹೊಸ ರೆಸಿಪಿಯನ್ನು ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. 4 ನಿಮಿಷದ ಈ ವಿಡಿಯೊ ಸಕತ್ ವೈರಲ್ ಆಗಿದೆ.
ಪಾತ್ರೆಗೆ ತುಪ್ಪು ಹಾಕುವ ಮೂಲಕ ರೆಸಿಪಿ ಪ್ರಾರಂಭವಾಗುತ್ತದೆ. ಫಾಂಟಾ ವಿತ್ ನೂಡಲ್ಸ್ಅನ್ನು ಹೇಗೆ ತಯಾರಿಸುವುದು ಎಂಬುದನ್ನು ವಿಡಿಯೊದಲ್ಲಿ ನೋಡಬಬಹುದಾಗಿದೆ. ಕೆಲವರು ಈ ರೆಸಿಪಿ ನೋಡಿ ಕನ್ಫ್ಯೂಸ್ ಆಗಿದ್ದರೆ, ಇನ್ನು ಕೆಲವರು ವಿಲಕ್ಷಣ ಆಹಾರ ಸಂಯೋಜನೆ ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವರಿಗೆ ಈ ರೆಸಿಪಿ ಇಷ್ಟವಾಗಿಲ್ಲ.
ನವೆಂಬರ್ 18ಕ್ಕೆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಸುಮಾರು 13 ಸಾವಿರ ವೀಕ್ಷಣೆಗಳನ್ನು ಮತ್ತು 10 ಸಾವಿರ ಲೈಕ್ಸ್ಗಳನ್ನು ಗಳಿಸಿಕೊಂಡಿದೆ. ನಾನು ಈ ಹಿಂದೆ ಚಿಲ್ಲಿ ಹನಿ ನೂಡಲ್ಸ್ ತಿಂದಿದ್ದೆ ಅದು ರುಚಿಯಾಗಿತ್ತು, ಈ ಫಾಂಟಾ ವಿತ್ ನೂಡಲ್ಸ್ ಕೂಡಾ ಸಿಹಿಯಾಗಿರಬಹುದು ಎಂದು ಓರ್ವರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರಿಗೆ ಈ ಹೊಸ ರೆಸಿಪಿ ಟೇಸ್ಟ್ ಮಾಡಬೇಕೆಂದೆನಿಸಿದರೆ, ಇನ್ನು ಕೆಲವರು ರೆಸಿಪಿ ವಿಲಕ್ಷಣ ಆಹಾರ ಸಂಯೋಜನೆಯಿಂದ ಕೂಡಿದೆ ಎಂದಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಇದನ್ನೂ ಓದಿ:
Viral Video: ದೈತ್ಯ ಆನೆ ಕಬ್ಬಿಣದ ಬೇಲಿ ಏರುತ್ತಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ವಿಡಿಯೊ ನೋಡಿ
Viral Video: ವಧು ಮತ್ತು ಸ್ನೇಹಿತೆಯರು ಸೇರಿ ಪ್ರಿಯಾಂಕಾ ಚೋಪ್ರಾ ಹಾಡಿಗೆ ಸಕತ್ ಸ್ಟೆಪ್; ವಿಡಿಯೊ ಫುಲ್ ವೈರಲ್
Published On - 9:11 am, Sun, 21 November 21