ಜಾಗತಿಕ ತಾಪಮಾನ (Global Warming) ಹೆಚ್ಚಳವನ್ನು ಹವಾಮಾನ ಬದಲಾವಣೆಯ ಪರಿಣಾಮ ಎಂದು ಸರಳವಾಗಿ ವಿವರಿಸಬಹುದು. ಜಾಗತಿಕ ತಾಪಮಾನ ಹೆಚ್ಚಳ ಅಥವಾ ಗ್ಲೋಬಲ್ ವಾರ್ಮಿಂಗ್ನ ಮುಖ್ಯ ಕಾರಣ ಮರಗಳನ್ನು ಕಡಿಯುವುದು (Tree Cutting). ನೀವು ಪ್ರತಿನಿತ್ಯ ಬಳಸುವ ಪುಸ್ತಕ, ಪೇಪರ್, ಟೀ ಕಪ್ಸ್ ಇವೆಲ್ಲದಕ್ಕೂ ಮರಗಳನ್ನು ಕಡಿಯುತ್ತಾರೆ. ಇನ್ನು ಇಂತಹ ಸಮಸ್ಯೆಯನ್ನು ನಿವಾರಿಸಲು ತಜ್ಞರು, ಪರಿಸರವಾದಿಗಳ ಹಲವಾರು ಮಾರ್ಗವನ್ನು ಸೂಚಿಸುತ್ತಾರೆ. ಆದರೆ ಇಲ್ಲೊಬ್ಬ ತಂದೆ-ಮಗ ಸರಳ ಪರಿಹಾರವನ್ನು ಕಂಡುಕೊಂಡು ಪ್ರಧಾನಿ ಮೋದಿ (PM Narendra Modi) ಯವರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
ಡಾ. ದೀಪಕ್ ಕೃಷ್ಣಮೂರ್ತಿ ತಮ್ಮ ಟ್ವಿಟ್ಟರ್ನಲ್ಲಿ ಪೇಪರ್ ಅಟ್ಟಿಯ ಫೋಟೋ ಒಂದನ್ನು ಹಂಚಿಕೊಂಡು, “ನನ್ನ ಮಗ ಪ್ರತಿ ವರ್ಷ ಶಾಲೆ ಮುಗಿದ ಬಳಿಕ ತನ್ನ ನೋಟ್ ಬುಕ್ಸ್ ಅಲ್ಲಿ ಬಳಸದೆ ಇರುವ ಹಾಳೆಗಳನ್ನು ಬೇರ್ಪಡಿಸಿ ಇಡುತ್ತಾನೆ. ನಾನು ಅದನ್ನು ಜೋಡಿಸಿ ರಫ್ ವರ್ಕ್ ಮಾಡಲು ಉಪಯೋಗಿಸುತ್ತೇನೆ. ಈ ರೀತಿ ನಾವು ಪರಿಸರ ಉಳಿಸಲು ಪುಟ್ಟ ಹೆಜ್ಜೆಯನ್ನು ಇಟ್ಟಿದ್ದೀವಿ” ಎಂದು ಬರೆದುಕೊಂಡಿದ್ದಾರೆ.
A good team effort this is, with a larger message of sustainable living. Compliments to your son and you.
Would urge others as well to share similar efforts, which will create greater awareness on recycling and ‘waste to wealth.’ https://t.co/c2wfdA2gA5
— Narendra Modi (@narendramodi) March 7, 2023
ಇದೀಗ ಈ ಟ್ವೀಟ್ಗೆ ಸ್ವತಃ ಪ್ರಧಾನಿ ಮೋದಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. “ನೀವಿಬ್ಬರು ಸುಸ್ಥಿರ ಪರಿಸರ ಅಭಿವೃದ್ಧಿಯ (Sustainable Development) ಸಂದೇಶವನ್ನು ಬಹಳ ಸರಳವಾಗಿ ನೀಡಿದ್ದೀರಿ. ನಿಮ್ಮ ಹಾಗು ನಿಮ್ಮ ಮಗನ ಈ ಪ್ರಯತ್ನಕ್ಕೆ ಅಭಿನಂದನೆಗಳು. ಇದೇ ರೀತಿಯ ಪ್ರಯತ್ನಗಳನ್ನು ಇತರರನ್ನು ಪ್ರೇರೇಪಿಸುತ್ತದೆ, ಇದು ಮರುಬಳಕೆ ಮತ್ತು ‘ತ್ಯಾಜ್ಯದಿಂದ ಸಂಪತ್ತು’ ಎಂಬ ತತ್ವವನ್ನು ಸಾರಿ ಜನರಲ್ಲಿ ಅರಿವು ಮೂಡಿಸುತ್ತದೆ. ಎಲ್ಲರು ಇಂತಹ ಅಭ್ಯಾಸಗಳನ್ನು ಅನುಸರಿಸಿ ಎಂದು ನಾನು ಪ್ರೇರೇಪಿಸುತ್ತೇನೆ” ಎಂದು ಮೋದಿ ಡಾ. ದೀಪಕ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಭತ್ಯೆ; ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಏರಿಕೆ; ಈ ರಾಜ್ಯದವರಿಗೆ ಹೋಳಿ ಗಿಫ್ಟ್
“ಧನ್ಯವಾದಗಳು ಸರ್, ದೇಶಕ್ಕಾಗಿ ದುಡಿಯುತ್ತಿರುವ ನಿಮಗೆ ನನ್ನ ಪ್ರಣಾಮಗಳು” ಎಂದು ಡಾ. ದೀಪಕ್ ಉತ್ತರಿಸಿದ್ದಾರೆ. ಈ ಟ್ವೀಟ್ ಅನ್ನು ನೋಡಿದ ನೆಟ್ಟಿಗರೊಬ್ಬರು, ವಾವ್! ಬಾಸ್ ಅವರೇ ಪ್ರಶಂಸೆ ನೀಡಿದ್ದಾರೆ ಎಂದರೆ ಇನ್ನೊಬ್ಬರು ಪೇಪರ್ ಉಳಿಸಿದರೆ ಮರಗಳನ್ನು ಉಳಿಸಿದಂತೆ, ಇದರಿಂದ ಪರಿಸರವನ್ನು ಉಳಿಸಬಹುದು ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:29 pm, Tue, 7 March 23