Video Viral: ಟ್ರಾಫಿಕ್ ಸಿಗ್ನಲ್‌ನಲ್ಲಿ ಬೈಕ್ ಸವಾರನ ಬ್ಯಾಗ್‌ನಿಂದ 40 ಲಕ್ಷ ರೂ. ಎಗರಿಸಿದ ಕಳ್ಳರು, ಇಲ್ಲಿದೆ ವಿಡಿಯೊ
ಮಾರ್ಚ್ 1ರ ಸಂಜೆ ಟ್ರಾಫಿಕ್‌ನಲ್ಲಿ ನಿಂತಿದ್ದ ಬೈಕ್ ಸವಾರರೊಬ್ಬರ ಬ್ಯಾಗ್‌ನಿಂದ ಮೂವರು ವ್ಯಕ್ತಿಗಳು 40 ಲಕ್ಷ ರೂ. ಹಣಗಳನ್ನು ಕಳ್ಳತನ ಮಾಡಿದ್ದಾರೆ. ಈ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಾರ್ಚ್ 1ರ ಸಂಜೆ ಟ್ರಾಫಿಕ್‌ನಲ್ಲಿ ನಿಂತಿದ್ದ ಬೈಕ್ ಸವಾರರೊಬ್ಬರ ಬ್ಯಾಗ್‌ನಿಂದ ಮೂವರು ವ್ಯಕ್ತಿಗಳು 40 ಲಕ್ಷ ರೂ. ಹಣಗಳನ್ನು ಕಳ್ಳತನ ಮಾಡಿದ್ದಾರೆ. ಈ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೆಹಲಿಯ ಕೆಂಪುಕೋಟೆ ಬಳಿ ಬೈಕ್ ಸವಾರನೊಬ್ಬನಿಂದ 40 ಲಕ್ಷ ರೂ. ಹಣವನ್ನು ದರೋಡೆ ಮಾಡಿದ್ದ ಮೂವರು ದರೋಡೆಕೋರರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೋಲಿಸರು ಮಂಗಳವಾರ ತಿಳಿಸಿದ್ದಾರೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ಬೈಕ್ ನಿಲ್ಲಿಸಿದಾಗ ಬೈಕ್‌ನಲ್ಲಿದ್ದ ಆ ವ್ಯಕ್ತಿಯ ಬ್ಯಾಗ್‌ನಿಂದ ಹಣವನ್ನು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯದ ಆಧಾರದ ಮೇಲೆ ಪೋಲಿಸರು ಅವರನ್ನು ಬಂಧಿಸಿದ್ದಾರೆ.
ಬ್ಯಾಗ್‌ನಲ್ಲಿ ಹಣವನ್ನು ಇಟ್ಟುಕೊಂಡು ಬಂದಿದ್ದ ಬೈಕ್ ಸವಾರನನ್ನು ಮೂವರು ದರೋಡೆಕೋರರು ಹಿಂದಿನಿಂದ ಹಿಂಬಾಲಿಸಿಕೊಂಡು ಬರುತ್ತಿರುತ್ತಾರೆ. ನಂತರ ಟ್ರಾಫಿಕ್ ಸಿಗ್ನಲ್‌ನಲ್ಲಿ ಬೈಕ್ ವೇಗ ನಿಧಾನಗೊಂಡು ಅಲ್ಲೇ ಇದ್ದ ಎರಡು ಕಾರುಗಳ ನಡುವೆ ನಿಂತಾಗ, ದರೋಡೆಕೋರರು ಇದುವೇ ಸರಿಯಾದ ಸಮಯ ಎಂದು ತಿಳಿದು ಕಳ್ಳತನ ಮಾಡಲು ವೇಗವಾಗಿ ಬೈಕ್‌ನತ್ತ ಬರುತ್ತಾರೆ ಎಂಬುದನ್ನು ಈ ದೃಶ್ಯದಲ್ಲಿ ಕಾಣಬಹುದು.
लूट का सीसीटीवी वीडियो दिल्ली के लाल किला के पास लूट का वीडियो।
मोटरसाइकिल सवार उमेश से 2 लडको ने 40 लाख रूपये लूटे
1 मार्च की शाम का सीसीटीवी
दिल्ली पुलिस ने इस मामले में 2 आरोपियों आकाश और अभिषेक को गिरफ्तार किया।
पुलिस ने 38 लाख रुपया बरामद किया।#Delhi #BREAKING pic.twitter.com/2fvnuNCG63
— Kumar Sahil (@KumarSahil30) March 7, 2023
ಇದನ್ನೂ ಓದಿ:Video Viral: ಬೀದಿಯಲ್ಲಿ ರಾಜಾರೋಷವಾಗಿ ಅಡ್ಡಾಡಿದ ಚಿರತೆ, ಭೋಜನ ನಂತರದ ನಡಿಗೆ ಎಂದ ನೆಟ್ಟಿಗರು
ಅದರಲ್ಲಿ ಒಬ್ಬನು ಬೈಕ್ ಸವಾರನ ಬೆನ್ನಿನಲ್ಲಿದ ಬ್ಯಾಗ್‌ನ ಜಿಪ್ ಬಿಚ್ಚಿ ನಿಧಾನವಾಗಿ ಬ್ಯಾಗ್‌ನಲ್ಲಿದ್ದ ಹಣದ ಕಟ್ಟನ್ನು ಹೊರತೆಗೆದು ವೇಗವಾಗಿ ಅದನ್ನು ಇನ್ನೊಬ್ಬ ದರೋಡೆಕೋರನಿಗೆ ರವಾನಿಸುತ್ತಾನೆ. ಈ ಭಯಾನಕ ಕಳ್ಳತನದ ದೃಶ್ಯಗಳು ಅಲ್ಲೇ ಇದ್ದ ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ಈ ಘಟನೆಯ ಬಳಿಕ ಮೂವರು ದರೋಡೆಕೋರರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಅವರನ್ನು ಆಕಾಶ್ ಮತ್ತು ಅಭಿಶೇಕ್ ಎಂದು ಗುರುತಿಸಲಾಗಿದೆ. ಈ ಗುಂಪು ಬೈಕ್ ಸವಾರನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು ಎಂದು ಪೋಲಿಸರು ತಿಳಿಸಿದ್ದಾರೆ. ಕಳ್ಳತನವಾಗಿರುವ 40 ಲಕ್ಷ ರೂ. ಹಣದಲ್ಲಿ 38 ಲಕ್ಷ ರೂಪಾಯಿಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
Published On - 5:57 pm, Tue, 7 March 23