Viral Photo: 60 ಸೆಕೆಂಡ್​​ನಲ್ಲಿ ಚಿತ್ರದಲ್ಲಿರುವ ನೀರಾನೆಯನ್ನು ಪತ್ತೆಹಚ್ಚಿ, ನೀವೆಷ್ಟು ಶಾರ್ಪಿ ಇದಿರಾ ಎಂದು ತಿಳಿಯಿರಿ…

| Updated By: ವಿವೇಕ ಬಿರಾದಾರ

Updated on: Jun 26, 2022 | 8:06 PM

ನೀರಿನಲ್ಲಿರುವ ನೀರಾನೆಯನ್ನು 60 ಸೆಕೆಂಡ್​​ನಲ್ಲಿ ಪತ್ತೆಹಚ್ಚುವಂತೆ ಚಿತ್ರಗಾರ ನೆಟ್ಟಿಗರಿಗೆ ಸವಾಲ್​​ ಹಾಕಿದ್ದಾರೆ.

Viral Photo: 60 ಸೆಕೆಂಡ್​​ನಲ್ಲಿ ಚಿತ್ರದಲ್ಲಿರುವ ನೀರಾನೆಯನ್ನು ಪತ್ತೆಹಚ್ಚಿ, ನೀವೆಷ್ಟು ಶಾರ್ಪಿ ಇದಿರಾ ಎಂದು ತಿಳಿಯಿರಿ...
ವೈರಲ್​ ಚಿತ್ರ
Follow us on

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ (Social Media) ನಮ್ಮ ಬುದ್ದಿಗೆ ಕಸರತ್ತು ಕೊಡುವಂತಹ ಸಾಕಷ್ಟು ಚಿತ್ರಗಳು ವೈರಲ್​​ (Viral) ಆಗುತ್ತಿವೆ.  ಸದ್ಯ  ವೈರಲ್​​ ಆಗಿರೋ ಚಿತ್ರದಲ್ಲಿ ಕೂಡ ನೀರಾನೆಯನ್ನು (Hippopotamus) ಪತ್ತೆ ಹಚ್ಚಬೇಕಾಗಿದೆ. ಆದರೆ ನೀರಾನೆಯನ್ನು ಅಷ್ಟು ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ.  ಚಿತ್ರವು ಒಂದು ಪ್ರಕೃತಿ ಸೌಂದರ್ಯದಿಂದ ಕೂಡಿದೆ. ಚಿತ್ರದಲ್ಲಿ ಒಂದು ಉದ್ಯಾನವನದ ರೀತಿ ಇದ್ದು ಸ್ಚಲ್ಪ ಭಾಗ ನೀರು ಮತ್ತು ಮರಳಿನಿಂದ ಕೂಡಿದೆ. ಹಾಗೇ ಚಿತ್ರದಲ್ಲಿ ಸುತ್ತಲೂ ಗಿಡ ಮರಗಳಿದ್ದು, ಬಾತುಕೋಳಿಗಳಿವೆ. ಈ ಬಾತು ಕೋಳಿಗಳ ಮಧ್ಯೆ ನೀರಾನೆ ಇದ್ದು, ಮೊಸಳೆಯನ್ನು ಪತ್ತೆಹಚ್ಚಲು ಚಿತ್ರಗಾರ ಹೇಳಿದ್ದಾರೆ.

60 ಸೆಕೆಂಡ್​ನ ಈ ಚಾಲೆಂಜ್ ಫುಲ್ ವೈರಲ್
ಮೊಸಳೆಯನ್ನು ಕೇವಲ 60 ಸೆಕೆಂಡುಗಳಲ್ಲಿ ಪತ್ತೆ ಹಚ್ಚುವಂತೆ ಹೇಳಲಾಗಿದೆ. ಆದರೆ ವೀಕ್ಷಕರಿಗೆ 60 ಸೆಕೆಂಡುಗಳಲ್ಲಿ ಮೊಸಳೆಯನ್ನು ಪತ್ತೆ ಹಚ್ಚಲು ಸಾದ್ಯವಾಗಲಿಲ್ಲ ಅಂದರೆ  ಮೊಸಳೆಯನ್ನು ಪತ್ತೆ ಹಚ್ಚಲು ಕೆಲವು ಸುಳಿವುಗಳು ಇಲ್ಲಿವೆ. ಚಿತ್ರದ ಕೆಳಗಿನ ಬಲಭಾಗದಲ್ಲಿರುವ ನೀರಿನ್ನು ಸೂಕ್ಷ್ಮವಾಗಿ ಗಮನಿಸಿ. ನೀರಿನಲ್ಲಿ ಮುಳುಗಿರುವ ನೀರಾನೆಯ  ಕಿವಿ ಮತ್ತು ಕಣ್ಣುಗಳು ಕಾಣುತ್ತದೆ. ನೀರಾನೆ ನೀರಿನಿಂದ ಹೊರಬರುವುದನ್ನು ನೀವು ನೋಡುತ್ತೀರಿ.