Viral Video: 100 ವರ್ಷದ ದೈತ್ಯಾಕಾರದ ಕಡಲೇಡಿ ಹಿಡಿದ ಮೀನುಗಾರ!

| Updated By: Rakesh Nayak Manchi

Updated on: Jun 07, 2022 | 4:05 PM

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೀನುಗಾರರೊಬ್ಬರು ಇತ್ತೀಚೆಗೆ 100 ವರ್ಷದ ದೈತ್ಯಾಕಾರದ ಕಡಲೇಡಿಯನ್ನು ಹಿಡಿದಿದ್ದಾರೆ. ಇದರ ವಿಡಿಯೋವನ್ನು ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video: 100 ವರ್ಷದ ದೈತ್ಯಾಕಾರದ ಕಡಲೇಡಿ ಹಿಡಿದ ಮೀನುಗಾರ!
ಕಡಲೇಡಿ ಹಿಡಿದ ಮೀನುಗಾರ
Image Credit source: Instagram
Follow us on

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೀನುಗಾರರೊಬ್ಬರು ಇತ್ತೀಚೆಗೆ 100 ವರ್ಷದ ದೈತ್ಯಾಕಾರದ ಕಡಲೇಡಿ (Lobster)ಯನ್ನು ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ. ಮೀನುಗಾರ ಜಾಕೋಬ್ ನೋಲ್ಸ್ ಅವರು ಈ ಕಡಲೇಡಿಯನ್ನು ಹಿಡಿದಿದ್ದು, ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದಾರೆ. ಅಲ್ಲದೆ ”ಇದು ನಾವು ಹಿಡಿದಿರುವ ಅತಿ ದೊಡ್ಡ ಗಾತ್ರದ ಕಡಲೇಡಿ” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Trending: ವಿಜಯದ ಸಂಭ್ರಮದ ವೇಳೆ ತನ್ನ ಪತ್ನಿಗೆ ಗುದ್ದಿದ ಸೈಕ್ಲಿಸ್ಟ್

ವಿಡಿಯೋದಲ್ಲಿ ಜಾಕೋಬ್ ವಿವರಿಸಿದಂತೆ, ಕಡಲೇಡಿಯಲ್ಲಿ ಸಣ್ಣ ಉಗುರುಗಳು ಇದ್ದ ಕಾರಣ ಅದನ್ನು ಸುಲಭವಾಗಿ ಹಿಡಿಯಲು ಸಾಧ್ಯವಾಯಿತು. ತನ್ನ ಜೀವನದ ಒಂದು ಹಂತದಲ್ಲಿ ಉಗುರುಗಳನ್ನು ಕಳೆದುಕೊಂಡಿದೆ. ಅದಾಗ್ಯೂ ಕೆಲವು ಹೊಸ ಉಗುರುಗಳು ಬೆಳೆದಿವೆ. ಆದರೆ ಈ ಉಗುರುಗಳು ಅದರ ದೇಹಕ್ಕೆ ಹೊಂದಿಕೆಯಾಗುವುದಿಲ್ಲ. ದೇಹವು ಬಲಶಾಲಿಯಾಗಿದೆ ಎಂದು ಹೇಳಿದ್ದಾರೆ.

ತಾನು ನಾಲ್ಕನೇ ತಲೆಮಾರಿನ ಮೀನುಗಾರ ಎಂದು ಬಹಿರಂಗಪಡಿಸಿದ ಜಾಕೋಬ್, ನಾವು ಹಿಡಿದಿರುವ ಕಡಲೇಡಿಗೆ ಸುಮಾರು 100 ವರ್ಷ ಆಗಿರಬಹುದು. ತನಗಿಂತ ಮೊದಲು ಮೀನುಗಾರರಾಗಿದ್ದ ತನ್ನ ಕುಟುಂಬವು ಈ ಕಡಲೇಡಿಯನ್ನು ಹಿಡಿದಿರುವ ಸಾಧ್ಯತೆಯಿದೆ ಎಂದಿದ್ದಾರೆ.

ವಿಡಿಯೋ ವೀಕ್ಷಿಸಿ:

ಜಾಕೋಬ್ ಪ್ರಕಾರ, ಕಡಲೇಡಿ ವರ್ಷದಿಂದ ವರ್ಷಕ್ಕೆ ಅದೇ ಪ್ರದೇಶದ ಮೂಲಕ ವಲಸೆ ಹೋಗುವ ಸಾಧ್ಯತೆಯಿದೆ. ಈ ಕಡಲೇಡಿಗೆ ವಯಸ್ಸಾದ ಕಾರಣ ಉಗುರುಗಳ ಮೇಲೆ ಯಾವುದೇ ಹಲ್ಲುಗಳಿಲ್ಲ. ಆದಾಗ್ಯೂ ಕಠಿಣಚರ್ಮ ಹೊಂದಿದ್ದು, ಆರೋಗ್ಯಕರವಾಗಿದೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಇದು ಉತ್ತಮ ಸ್ಥಿತಿಯಲ್ಲಿದೆ. ಅದರ ಬಾಲದ ಗಾತ್ರ ನನ್ನ ಎರಡೂ ಕೈಗಳ ಗಾತ್ರದಷ್ಟಿದೆ ಎಂದು ವಿವರಿಸಿದರು.

ಇದನ್ನೂ ಓದಿ: Trending: ಯುಜ್ವೇಂದ್ರ ಚಹಾಲ್ ಪತ್ನಿ ಧನಶ್ರೀ ವಿಡಿಯೋ ವೈರಲ್

ಕಡಲೇಡಿಯನ್ನು ಮತ್ತೆ ನೀರಿಗೆ ಬಿಡುವ ಮೊದಲು ಜಾಕೋಬ್, ಕಡಲೇಡಿಯ ಉಗುರುಗಳ ಸಂಧಿಯಲ್ಲಿ ಮೀನನ್ನು ಇಟ್ಟು ನೀರಿಗೆ ಬಿಟ್ಟಿದ್ದಾರೆ. ಈ ವೇಳೆ ಅವರು “ನೀನು ಹೋಗು, ಹೋಗು ಕೆಲವು ಮರಿಗಳನ್ನು ಮಾಡು” ಎಂದು ಹೇಳಿದ್ದಾರೆ. ನ್ಯೂಸ್‌ವೀಕ್ ಪ್ರಕಾರ, ಮೈನೆಯಲ್ಲಿ, ಕಡಲೇಡಿಯನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಇಂಥ ಗಾತ್ರದ ಕಡಲೇಡಿಗಳನ್ನು ಸಂತಾನೋತ್ಪತ್ತಿಯ ಉದ್ದೇಶಗಳಿಗಾಗಿ ರಕ್ಷಿಸಲಾಗುತ್ತಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ