Shocking News: ಫ್ಲಿಪ್ ​ಕಾರ್ಟ್​ನಲ್ಲಿ ಆರ್ಡರ್ ಮಾಡಿದ್ದು 53,000 ರೂ. Apple iPhone 12 ಫೋನ್​; ಕೈಗೆ ಸಿಕ್ಕಿದ್ದು ಮಾತ್ರ ನಿರ್ಮಾ ಸೋಪ್!

Viral News: ಫ್ಲಿಪ್ ಕಾರ್ಟ್ ವಸ್ತುಗಳ ಮಾರಾಟದ ಸಮಯದಲ್ಲಿ ಗ್ರಾಹಕ ಆ್ಯಪಲ್ ಐಫೋನ್ 12 ಮೊಬೈಲ್ಅನ್ನು ಆರ್ಡರ್ ಮಾಡಿದ್ದರು. ಆದರೆ ಮನೆಗೆ ಆರ್ಡರ್ ರಿಸೀವ್ ಮಾಡಿದ ತಕ್ಷಣ ಸಿಕ್ಕ ವಸ್ತು ನೋಡಿದ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ.

Shocking News: ಫ್ಲಿಪ್ ​ಕಾರ್ಟ್​ನಲ್ಲಿ ಆರ್ಡರ್ ಮಾಡಿದ್ದು 53,000 ರೂ. Apple iPhone 12 ಫೋನ್​; ಕೈಗೆ ಸಿಕ್ಕಿದ್ದು ಮಾತ್ರ ನಿರ್ಮಾ ಸೋಪ್!
ಫ್ಲಿಪ್ ​ಕಾರ್ಟ್​ನಲ್ಲಿ ಆರ್ಡರ್ ಮಾಡಿದ್ದು 53,000 ರೂ. Apple iPhone 12 ಫೋನ್​; ಬಂದಿದ್ದು ಮಾತ್ರ ನಿರ್ಮಾ ಸೋಪ್!
Edited By:

Updated on: Oct 11, 2021 | 11:46 AM

ಫ್ಲಿಪ್ ​ ಕಾರ್ಟ್​ನಲ್ಲಿ ದುಬಾರಿ ಮೊಬೈಲ್ ಫೋನ್ ಆರ್ಡರ್ ಮಾಡಿದ ಗ್ರಾಹಕರಿಗೆ ಆಘಾತವೊಂದು ಕಾದಿತ್ತು. ಇನ್ನೇನು ಕೈಯಲ್ಲಿ ಹೊಸ ಆ್ಯಪಲ್ ಐಫೋನ್ 12 ಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ಸಿಕ್ಕಿದ್ದು ಮಾತ್ರ ನಿರ್ಮಾ ಸೋಪ್! ಈ ಘಟನೆಯನ್ನು ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಶಾಕಿಂಗ್​ ಸುದ್ದಿಇದೀಗ ಫುಲ್​ ವೈರಲ್​ ಆಗಿದೆ.

ಫ್ಲಿಪ್ ಕಾರ್ಟ್ ವಸ್ತುಗಳ ಮಾರಾಟದ ಸಮಯದಲ್ಲಿ ಗ್ರಾಹಕ ಆ್ಯಪಲ್ ಐಫೋನ್ 12 ಮೊಬೈಲ್ಅನ್ನು ಆರ್ಡರ್ ಮಾಡಿದ್ದರು. ಆದರೆ ಮನೆಗೆ ಆರ್ಡರ್ ರಿಸೀವ್ ಮಾಡಿದ ತಕ್ಷಣ ಸಿಕ್ಕ ವಸ್ತು ನೋಡಿದ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. 53,000 ರೂಪಾಯಿ ಮೌಲ್ಯದ ಫೋನ್ ಇರಬೇಕಾಗಿದ್ದ ಜಾಗದಲ್ಲಿ 2 ನಿರ್ಮಾ ಸೋಪ್ ಕಂಡು ಗ್ರಾಹಕರು ಶಾಕ್ ಆಗಿದ್ದಾರೆ.

ಗ್ರಾಹಕ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಆರ್ಡರ್ ತಂದುಕೊಟ್ಟ ಸಿಬ್ಬಂದಿಯೊಂದಿಗೆ ಒಟಿಪಿ ಹಂಚಿಕೊಳ್ಳಲು ಅವರು ನಿರಾಕರಿಸಿದರು ಏಕೆಂದರೆ ಆರ್ಡರ್ ಮಾಡಿದ ವಸ್ತುವೇ ಬೇರೆ ಬಂದ ವಸ್ತುವೇ ಬೇರೆ! ಗ್ರಾಹಕ ಫ್ಲಿಪ್​ ಕಾರ್ಟ್​ ಕಸ್ಟಮರ್ ಕೇರ್​ಗೆ ದೂರು ನೀಡಿದರು ಬಳಿಕ ವಿತರಣಾ ವ್ಯವಸ್ಥೆಯಲ್ಲಿ ತಪ್ಪಾದ್ದರಿಂದ ಕಂಪನಿಯು ತಪ್ಪನ್ನು ಒಪ್ಪಿಕೊಂಡಿತು.

ಕಂಪನಿಯು ಗ್ರಾಹಕರಿಗೆ ಮರುಪಾವತಿ ಮಾಡಿದೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ಇಂತಹ ಘಟನೆಗಳು ಅಪರೂಪವಾಗಿದ್ದರೂ ಸಹ ಗ್ರಾಹಕರು ತಮ್ಮ ಆರ್ಡರ್ ಪಡೆಯುವ ಮೊದಲು ಎಲ್ಲವನ್ನೂ ಪರಿಶೀಲಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ:

Viral News: ನಾಪತ್ತೆಯಾಗಿದ್ದು ತಾನೇ ಎಂದು ತಿಳಿಯದೆ ಕಾಡಿನಲ್ಲಿ ತನ್ನನ್ನೇ ಹುಡುಕಾಡಿದ ಕುಡುಕ!

Viral News: ಆಟೋರಿಕ್ಷಾದಲ್ಲಿದ್ದ ಪ್ರಯಾಣಿಕನ ಕೈಯಿಂದ 1 ಲಕ್ಷ ರೂ. ಕಿತ್ತೆಸೆದ ಮಂಗ! ನೋಟುಗಳೆಲ್ಲಾ ರಸ್ತೆ ಪಾಲು

Published On - 11:45 am, Mon, 11 October 21