ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಸೋಮವಾರ 14 ವರ್ಷದೊಳಗಿನ ಅಪ್ರಾಪ್ತರಿಗೆ ಸೋಶಿಯಲ್ ಮೀಡಿಯಾ ಬಳಕೆ ನಿಷೇಧದ ಮಸೂದೆಗೆ ಸಹಿ ಹಾಕಿದರು. ಈ ಮೂಲಕ ಈ ದೇಶದಲ್ಲಿ 14 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸದಂತೆ ಹೊಸ ಕಾನೂನು ಜಾರಿಗೊಳಿಸಲಾಗಿದೆ. ಇದಲ್ಲದೇ 14 ಮತ್ತು 15 ವರ್ಷ ವಯಸ್ಸಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಸಲು ಪೋಷಕರ ಒಪ್ಪಿಗೆ ಪಡೆಯಬೇಕು.
ಸಾಮಾಜಿಕ ಜಾಲತಾಣಗಳ ಬಳಕೆ ಅಪ್ರಾಪ್ತ ವಯಸ್ಸಿನ ಮಾನಸಿಕ ಆರೋಗ್ಯದ ಮೇಲೆ ನೇರ ಪ್ರಭಾವ ಬೀರುತ್ತದೆ. ಇದರಿಂದಲೇ ಈ ಹೊಸ ಕಾನುನೂ ಜಾರಿಗೊಳಿಸಲಾಗಿದೆ ಎಂದು ಡಿಸಾಂಟಿಸ್ ಹೇಳಿಕೆ ನೀಡಿರುವುದು ವರದಿಯಾಗಿದೆ.
ಇದನ್ನೂ ಓದಿ: ಟ್ರೈನ್ ಚಕ್ರಗಳಿಗೆ ರಬ್ಬರ್ ಟೈರ್ ಹಾಕಿದರೆ ಅದು ಸರಾಗವಾಗಿ ಚಲಿಸುತ್ತದಾ? ಈ ವೈರಲ್ ವೀಡಿಯೊ ನೋಡಿ
ನೂತನ ಕಾಯ್ದೆ ಪ್ರಕಾರ, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ 14 ವರ್ಷದೊಳಗಿನ ಎಲ್ಲಾ ಮಕ್ಕಳ ಖಾತೆಗಳನ್ನು ಡಿಲೀಟ್ ಮಾಡುವಂತೆ ಸೂಚನೆ ನೀಡಲಾಗಿದೆ. NetChoice, Facebook ಮೆಟಾ ಪ್ಲಾಟ್‌ಫಾರ್ಮ್‌ಗಳು, TikTok ಮತ್ತು Snap ಅನ್ನು ಒಳಗೊಂಡಿರುವ ಟೆಕ್-ಇಂಡಸ್ಟ್ರಿ ಟ್ರೇಡ್ ಅಸೋಸಿಯೇಷನ್, ಕಳೆದ ಜೂನ್‌ನಲ್ಲಿ ಅರ್ಕಾನ್ಸಾಸ್ ಕಾನೂನನ್ನು ನಿಲ್ಲಿಸಲು ಮೊಕದ್ದಮೆ ಹೂಡಿತ್ತು. 40 ಕ್ಕೂ ಹೆಚ್ಚು ರಾಜ್ಯಗಳು ಮೆಟಾ ವಿರುದ್ಧ ಮೊಕದ್ದಮೆ ಹೂಡಿದ ನಂತರ ವಿಷಯ ನಿರ್ಬಂಧಗಳು ಬಂದವು. ಈ ಕಾಯ್ದೆಯಿಂದ ನಮ್ಮ ಮಕ್ಕಳನ್ನು ಸುರಕ್ಷಿತವಾಗಿಡಲು ಹಾಗೂ ಉತ್ತಮ ಭವಿಷ್ಯ ರೂಪಿಸಲು ಪೋಷಕರಿಗೆ ಸಹಾಯವಾಗಲಿದೆ ಎಂದು ಗವರ್ನರ್ ರಾನ್ ಡೆಸ್ಯಾಂಟಿಸ್ ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Wed, 27 March 24