ಪ್ರತೀ ಜೀವಿಗೆ ಸ್ವಾತಂತ್ರ್ಯ ಎನ್ನುವುದು ಅಗತ್ಯವಾಗಿರುತ್ತದೆ. ತಮ್ಮದೇ ಪ್ರಪಂಚದಲ್ಲಿ ಸ್ವಚ್ಛಂದವಾಗಿ ಜೀವಿಸುವ ಜೀವಿಗಳನ್ನು ಕಟ್ಟಿಹಾಕುವ ಹಕ್ಕು ಯಾರಿಗೂ ಇರುವುದಿಲ್ಲ. ಇಲ್ಲೊಂದು ಹಿಮಾಲಯದ ಕಪ್ಪು ಕರಡಿ(Himalayan Black Bear)ಯನ್ನು ರಕ್ಷಿಸಿ ಕಾಡಿಗೆ ಬಿಟ್ಟ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಎಫ್ಎಸ್ ಅಧಿಕಾರಿ(IFS Officer) ಪರ್ವೀನ್ ಕಸ್ವಾನ್(Praveen Kaswan) ಅವರು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ 44 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
How freedom looks like !! A Himalayan Black Bear was stranded. Our teams launched operation since morning. Rescue work was successful without any injury to people or animal. Team work. pic.twitter.com/HdTFl217zI
— Parveen Kaswan, IFS (@ParveenKaswan) February 28, 2022
ವಿಡಿಯೋದಲ್ಲಿ ಅರಣ್ಯ ಅಧಿಕಾರಿಗಳ ಗುಂಪು ಕರಡಿಯನ್ನು ಸೆರೆಹಿಡಿದು ಬಲೆಯಲ್ಲಿ ಹಾಕಿ ನಂತರ ಕಾಡಿನ ಕಡೆಗೆ ಮುಖ ಮಾಡಿ ಇಟ್ಟು ದೂರ ಹೋಗುತ್ತಾರೆ. ಎಲ್ಲರೂ ದೂರ ಹೋದಂತೆ ಕರಡಿ ಬಲೆಯಿಂದ ಹೊರಬಂದು ಕಾಡಿನೆಡೆಗೆ ಓಡಿಹೋಗುತ್ತದೆ. ಈ ಕುರಿತು ಪರ್ವೀನ್ ಅವರು, ವಿಡಿಯೋ ಹಂಚಿಕೊಂಡು, ಸ್ವಾತಂತ್ರ್ಯ ಹೇಗಿದೆ! ಹಿಮಾಲಯದ ಕಪ್ಪು ಕರಡಿ ಸಿಲುಕಿಕೊಂಡಿತ್ತು. ನಮ್ಮ ತಂಡಗಳು ಕಾರ್ಯಾಚರಣೆ ಆರಂಭಿಸಿವೆ. ಜನರು ಮತ್ತು ಪ್ರಾಣಿಗಳಿಗೆ ಯಾವುದೇ ಅಪಾಯವಾಗದಂತೆ ರಕ್ಷಣಾ ಕಾರ್ಯ ಯಶಸ್ವಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
ಕರಡಿಯನ್ನು ಸೆರೆಹಿಡಿದ ನಂತರ ವೈದ್ಯಕೀಯ ಚಿಕಿತ್ಸೆ ನೀಡಿ ಕಾಡಿಗೆ ಬಿಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸದ್ಯ , ಕರಡಿಯನ್ನು ರಕ್ಷಿಸಿ ಕಾಡಿಗೆ ಬಿಟ್ಟ ಕಿರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ವಿಡಿಯೋ ನೋಡಿ, ಉತ್ತಮ ಕೆಲಸ ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:
Viral Video: ಕವ್ವಾಲಿ ಹಾಡುವಾಗ ಮುರಿದುಬಿದ್ದ ವೇದಿಕೆ: ತಂಡದ ಸದಸ್ಯರು ಮಾಡಿದ್ದೇನು ಗೊತ್ತಾ?