ಸಾಮಾನ್ಯವಾಗಿ ಊಟಕ್ಕೆಂದು ರೆಸ್ಟೋರೆಂಟ್ಗೆ ಹೋದರೆ ಮಹಾ ಅಂದ್ರೂ ಎಷ್ಟು ಖರ್ಚಾಗಬಹುದು? ಎಂದಾದರೂ ರೆಸ್ಟೋರೆಂಟ್ನಲ್ಲಿ ಡಿನ್ನರ್ಗಾಗಿ ಲಕ್ಷಾಂತರ ರೂಪಾಯಿ ಸುರಿದ ಸುದ್ದಿಯನ್ನ ಕೇಳಿದ್ದೀರಾ? ಇದೀಗ ವೈರಲ್ ಆದ ಸುದ್ದಿ ಜನರನ್ನು ಬೆರಗಾಗುವಂತೆ ಮಾಡಿದೆ. ನಾಲ್ವರು ಸೇರಿ ಲಂಡನ್ನ ರೆಸ್ಟೋರೆಂಟ್ನಲ್ಲಿ ಬರೋಬ್ಬರಿ 38 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ವಿಶೇಷ ಎಂದರೆ ವಿಶ್ವ ಪ್ರಸಿದ್ಧತೆ ಪಡೆದ ಬಾಣಸಿಗನ ರೆಸ್ಟೋರೆಂಟ್ ಆಗಿದ್ದು, ಒಟ್ಟೂ ಬಿಲ್ನ ಸ್ಕ್ರೀನ್ ಶಾಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ನಾಲ್ವರು ಸೇರಿ ಆರ್ಡರ್ ಮಾಡಿದ 22 ವಿವಿಧ ಖಾದ್ಯಗಳನ್ನು ಬಿಲ್ನಲ್ಲಿ ನೋಡಬಹುದು. ಎಲ್ಲವೂ ಸಹ ಹೈ ರೇಟ್ನ ತಿಂಡಿಗಳು. ಈ ವಿವಿಧ ಆಹಾರಕ್ಕೆ ನೀಡುವ ಹಣ ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಜೈಂಟ್ ಟೊಮಾಹಾಕ್ ಸ್ಟೀಕ್, ಬರ್ಗರ್, ಪ್ರಾನ್ ಟೆಂಪುರಾ ರೋಲ್ಸ್ ಎಂಬೆಲ್ಲಾ ತಿಂಡಿಗಳ ಹೆಸರು ಬಿಲ್ಗಳಲ್ಲಿವೆ. ಬಿಲ್ನಲ್ಲಿದ್ದ ಒಟ್ಟು ಮೌಲ್ಯವನ್ನು ನೋಡಿ ಕೆಲವರು ಆಶ್ಚರ್ಯಗೊಂಡರು. ಇನ್ನು ಕೆಲವರು, ಇದು ಲಂಡನ್ನಂತಹ ನಗರದಲ್ಲಿ ನಿರೀಕ್ಷಿಸಬಹುದು ಎಂದು ಅಭಿಪ್ರಾಯ ತಿಳಿಸಿದರು.
ನುಸ್ರೆಟ್ ಗೋಕೀ ವಿಶ್ವ ಪ್ರಸಿದ್ಧ ಬಾಣಸಿಗ. ಜಗತ್ತು ಅವರನ್ನು ಸಾಲ್ಟ್ ಬೇ ಎಂದು ಕರೆಯುತ್ತಿದೆ. ಅವರು ವಿಶೇಷವಾಗಿ ನಾನ್ವೆಜ್ ವಿತ್ ಸಾಲ್ಟ್ ಜತೆಗೆ ಮಸಾಲೆ ಪದಾರ್ಥಗಳನ್ನು ಸೇರಿಸಿ ತಯಾರಿಸುವ ಹೊಸ ತಂತ್ರವು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುತ್ತವೆ.
ಅವರ ವಿಶಿಷ್ಟವಾದ ಆಹಾರ ಶೈಲಿ ರೆಸ್ಟೋರೆಂಟ್ ಗ್ರಾಹಕರಿಗೆ ರುಚಿ ಹೆಚ್ಚಿಸುತ್ತಿದೆ. ಪ್ರತೀ ವಾರ ಟ್ವಿಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ನೋಡಬಹುದು. ನುಸ್ರೆಟ್ ತನ್ನ ಸಾಮಾಜಿಕ ಮಾಧ್ಯಮ ಹಿಂಬಾಲಕರಿಗೆ ಹೊಸ ಹೊಸ ವಿಷಯಗಳನ್ನು ತಿಳಿಸುತ್ತಲೇ ಇರುತ್ತಾರೆ. ಅವುಗಳಲ್ಲಿ ಹೆಚ್ಚಿನವು, ಮಾಂಸಗಳನ್ನು ಕತ್ತರಿಸುತ್ತಿರುವ ದೃಶ್ಯ ಮತ್ತು ಮಸಾಲೆ ಸೇರಿಸುತ್ತಿರುವ ದೃಶ್ಯವನ್ನು ನೋಡಬಹುದು.
ನುಸ್ರೆಟ್ ಸ್ಟೀಕ್ಹೌಸ್ನಲ್ಲಿ ನಾಲ್ವರ ಊಟ ಮಾಡಿದ ಬಳಿಕ ಬಿಲ್ ಒಟ್ಟು 38 ಲಕ್ಷವಾಗಿತ್ತು. ಬಿಲ್ ನೋಡಿ ಕೆಲವರು ಆಕ್ರೋಶ ಹೊರಹಾಕಿದ್ದಾರೆ, ಇನ್ನು ಕೆಲವರು ಆಶ್ಚರ್ಯಗೊಂಡು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ:
Viral News: ಶಾಲೆಯ ಮಕ್ಕಳೊಂದಿಗೆ ಸ್ನೇಹ ಬೆಳೆಸಿದ ಕಾಡು ಗಿಳಿ; ಹೃದಯಸ್ಪರ್ಶಿ ಕಥೆಯಿದು
Viral News: ನಾಪತ್ತೆಯಾಗಿದ್ದು ತಾನೇ ಎಂದು ತಿಳಿಯದೆ ಕಾಡಿನಲ್ಲಿ ತನ್ನನ್ನೇ ಹುಡುಕಾಡಿದ ಕುಡುಕ!