Video: ಸ್ನೇಹಿತನೇ..ಸ್ನೇಹಿತನೆ ಹಾಡಿಗೆ ಭರತನಾಟ್ಯ ಮಾಡಿದ ಫ್ರೆಂಚ್​ ಡ್ಯಾನ್ಸರ್​; ಶೂ ಹಾಕಬಾರದಿತ್ತು ಎಂದು ಸಲಹೆ ಕೊಟ್ಟ ನೆಟ್ಟಿಗರು

| Updated By: Lakshmi Hegde

Updated on: Apr 18, 2022 | 8:14 PM

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುವ ಬಹುತೇಕ ಎಲ್ಲ ಹಾಡಿಗೂ ಜಿಕಾ ನೃತ್ಯ ಮಾಡುತ್ತಾರೆ. ಕಚ್ಚಾ ಬಾದಾಮ್​ ಹಾಡಿಗೆ ಕುಣಿದು ಸಖತ್ ಫೇಮಸ್ ಆಗಿದ್ದರು. ಇವರು ಮೂಲತಃ ಫ್ರೆಂಚ್​​ನವರು ಆಗಿದ್ದರೂ, ವಿವಿಧ ಪ್ರಕಾರದ ನೃತ್ಯಗಳನ್ನು ಕಲಿತಿದ್ದಾರೆ.

Video: ಸ್ನೇಹಿತನೇ..ಸ್ನೇಹಿತನೆ ಹಾಡಿಗೆ ಭರತನಾಟ್ಯ ಮಾಡಿದ ಫ್ರೆಂಚ್​ ಡ್ಯಾನ್ಸರ್​; ಶೂ ಹಾಕಬಾರದಿತ್ತು ಎಂದು ಸಲಹೆ ಕೊಟ್ಟ ನೆಟ್ಟಿಗರು
ಫ್ರೆಂಚ್​ ಡ್ಯಾನ್ಸರ್​ನ ನೃತ್ಯ
Follow us on

ನೀವು ಇನ್​ಸ್ಟಾಗ್ರಾಂ ಬಳಕೆದಾರರಾಗಿದ್ದರೆ, ಅದರಲ್ಲಿ ಸದಾ ವೈರಲ್​, ಟ್ರೆಂಡ್ ಆಗುತ್ತಿರುವ ವಿಡಿಯೋಗಳನ್ನೆಲ್ಲ ನೋಡುತ್ತಿದ್ದರೆ ನಿಮಗೆ ಖಂಡಿತ ಫ್ರೆಂಚ್ ಡ್ಯಾನ್ಸರ್​ ಜಿಕಾ ಗೊತ್ತಿರುತ್ತಾರೆ. ಇವರು ಮೂಲತಃ ಫ್ರೆಂಚ್​​ನ ನೃತ್ಯಗಾರನಾದರೂ  ಭಾರತೀಯ ಚಿತ್ರರಂಗದ ಹಲವು ಹಾಡುಗಳಿಗೆ ಈಗಾಗಲೇ ಡ್ಯಾನ್ಸ್​ ಮಾಡಿದ್ದಾರೆ. ಆ ವಿಡಿಯೋಗಳನ್ನು ತಮ್ಮ ಇನ್​ಸ್ಟಾಗ್ರಾಂ ಪೇಜ್​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕತ್ರೀನಾ ಕೈಪ್ ಅಭಿನಯದ ಸೂರ್ಯವಂಶಿ ಸಿನಿಮಾದ ಟಿಪ್​ಟಾಪ್ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಭಾರತೀಯ ಕಲಾಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದ ಅವರೀಗ ತಮಿಳಿನ ಸ್ನೇಹಿತನೇ..ಸ್ನೇಹಿತನೇ ರಿಮಿಕ್ಸ್ ಹಾಡಿಗೆ ಚೆಂದೆನೆಯ ಡ್ಯಾನ್ಸ್​ ಮಾಡಿದ್ದಾರೆ. ಭರತನಾಟ್ಯ ಶೈಲಿಯಲ್ಲಿ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುವ ಬಹುತೇಕ ಎಲ್ಲ ಹಾಡಿಗೂ ಜಿಕಾ ನೃತ್ಯ ಮಾಡುತ್ತಾರೆ. ಕಚ್ಚಾ ಬಾದಾಮ್​ ಹಾಡಿಗೆ ಕುಣಿದು ಸಖತ್ ಫೇಮಸ್ ಆಗಿದ್ದರು. ಇವರು ಮೂಲತಃ ಫ್ರೆಂಚ್​​ನವರು ಆಗಿದ್ದರೂ, ವಿವಿಧ ಪ್ರಕಾರದ ನೃತ್ಯಗಳನ್ನು ಕಲಿತಿದ್ದಾರೆ. ಈಗವರು ಸ್ನೇಹಿತನೇ..ಸ್ನೇಹಿತನೇ ರಿಮಿಕ್ಸ್​ಗೆ ಭರತನಾಟ್ಯ ಶೈಲಿಯಲ್ಲಿ ನೃತ್ಯ ಮಾಡಿದ್ದನ್ನೂ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.  ಈ ಹಾಡು 2000ನೇ ಇಸ್ವಿಯಲ್ಲಿ ತೆರೆಕಂಡ ತಮಿಳು ಸಿನಿಮಾ ಅಲೈ ಪಾಯುತೇಯದ್ದು. ಮೂಲತಃ ಇದನ್ನು ಹಾಡಿದ್ದು ಸಾಧನಾ ಸರ್ಗಮ್​ ಮತ್ತು ಶ್ರೀನಿವಾಸ್​. ಇತ್ತೀಚೆಗೆ ಈ ಹಾಡಿನ ರಿಮಿಕ್ಸ್​ ಸೋಷಿಯಲ್​ ಮಿಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅದೆಷ್ಟೋ ಜನರು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಹಾಗೇ, ಜಿಕಾ ಕೂಡ ಟ್ರೈ ಮಾಡಿದ್ದಲ್ಲದೆ, ನಾನು ಭರತನಾಟ್ಯಂ ಪ್ರಯತ್ನಿಸಿದೆ ಎಂದು ಕ್ಯಾಪ್ಷನ್ ಬರೆದಿದ್ದಾರೆ.

ಈ ನೃತ್ಯ ನೋಡಿದ ನೆಟ್ಟಿಗರು ಫುಲ್​ ಖುಷಿ ಪಟ್ಟಿದ್ದಾರೆ. ವಿಡಿಯೋಕ್ಕೆ ಭಾರತೀಯರೂ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.  ನಾನು ನಿಮ್ಮ ಬಹುದೊಡ್ಡ ಅಭಿಮಾನಿ ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು ನೀವು ಭರತನಾಟ್ಯ ಪ್ರಯತ್ನಿಸಿದ್ದು ಸಂತೋಷ. ಆದರೆ ಭರತನಾಟ್ಯವನ್ನು ಮಾಡುವಾಗ ಕಾಲಿಗೆ ಶೂ ಹಾಕಿಕೊಳ್ಳಬಾರದು ಎಂಬ ಸಲಹೆಯನ್ನೂ ಕೊಟ್ಟಿದ್ದಾರೆ. 4 ದಿನಗಳ ಹಿಂದೆಯೇ ವಿಡಿಯೋ ವೈರಲ್ ಆಗಿದ್ದು, ಈಗಾಗಲೇ ಲಕ್ಷಕ್ಕೂ ಮೀರಿ ವೀವ್ಸ್​ ಪಡೆದುಕೊಂಡಿದೆ.

ಇದನ್ನೂ ಓದಿ: Electricity shortage ಈ ಬೇಸಿಗೆಯಲ್ಲಿ ಭಾರತದಲ್ಲಿ ವಿದ್ಯುತ್ ಕೊರತೆಯುಂಟಾಗುತ್ತಿರುವುದಕ್ಕೆ ಕಾರಣಗಳೇನು?