ಮೊಸಳೆಯನ್ನು (crocodile) ಕಂಡಾಗ ಅಗುವಷ್ಟು ಹೆದರಿಕೆ ಹುಲಿ ಅಥವಾ ಚಿರತೆಯನ್ನು ನೋಡಿದಾಗ ಆಗುವುದಿಲ್ಲ ಅಂತ ಒಬ್ಬ ಇಂಗ್ಲಿಷ್ ಜೀವಶಾಸ್ತ್ರಜ್ಞ ಹೇಳಿದ್ದರಲ್ಲಿ ಅತಿಶಯೋಕ್ತಿಯೇನೂ ಇಲ್ಲ ಮಾರಾಯ್ರೇ. ಮೊಸಳೆಯನ್ನು ನೋಡುವಾಗ ನಮ್ಮಲ್ಲೂ ಭಯ ಹುಟ್ಟುತ್ತದೆ. ಕೆಲವರಲ್ಲಂತೂ ಮೊಸಳೆ ಅಂದಾಕ್ಷಣ ಬೆನ್ನ ಮೂಳೆಯಲ್ಲಿ ನಡುಕ ಶುರುವಾಗುತ್ತದೆ. ಸ್ಟೀವ್ ಇರ್ವಿನ್ (Steve Irwin) ನಿಮಗೆ ನೆನಪಿದ್ದಾರೆ ತಾನೆ?
ಆಸ್ಟ್ರೇಲಿಯಾದ ವನ್ಯಜೀವಿ ತಜ್ಞ, ಪರಿಸರವಾದಿ ಮತ್ತು ಟಿವಿ ಪರ್ಸನಾಲಿಟಿಯಾಗಿದ್ದ ಇರ್ವಿನ್ 2006 ರಲ್ಲಿ ಒಂದು ವಿಷಕಾರಿ ಮೀನಿನ ಕಡಿತದಿಂದ ಸಾಯುವ ಮುನ್ಮ ತಮ್ಮ ಬದುಕಿನ ಹೆಚ್ಚಿನ ಭಾಗವನ್ನು ಮೊಸಳೆಗಳೊಂದಿಗೆ ಸವೆಸಿದ್ದರು. ಮೊಸಳೆಗಳನ್ನು ಅವರು ಸಾಕು ಪ್ರಾಣಗಳಂತೆ ಟ್ರೀಟ್ ಮಾಡುತ್ತಿದ್ದರು.
ಆದರೆ ನೀವೇನೇ ಹೇಳಿ ಮಾರಾಯ್ರೇ, ಮೊಸಳೆ ಹರಿತವಾದ ಹಲ್ಲು, ಚಾಕುವಿನಂತೆ ಕಾಣುವ ಕೋರೆಹಲ್ಲು, ಅದರ ಕ್ರೂರ ದೃಷ್ಟಿ ಮತ್ತು ಒರಟು ಚರ್ಮ ಎಂಟೆದೆಯವರಲ್ಲೂ ಭಯ ಹುಟ್ಟಿಸುತ್ತದೆ.
ನಾವು ಮೊಸಳೆಗಳ ಬಗ್ಗೆ ಇಷ್ಟೆಲ್ಲ ಯಾಕೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಸುಳಿವು ಸಿಕ್ಕಿರಬಹುದು. ಟ್ವಿಟರ್ ನಲ್ಲಿ ಒಂದು ವಿಡಿಯೋವನ್ನು ಶೇರ್ ಮಾಡಲಾಗಿದ್ದು ಇದರಲ್ಲಿ ಚಿತ್ರಿತವಾಗಿರುವ ಮೊಸಳೆ ತನ್ನ ವಿಚಿತ್ರ ನಡಾವಳಿಕೆಯಿಂದ ನಮ್ಮಲ್ಲಿ ಮತ್ತಷ್ಟು ಭಯ ಹುಟ್ಟಿಸುತ್ತದೆ. ನಿಮಗೆ ಮೊಸಳೆಗಳ ಬಗ್ಗೆ ವಿಪರೀತ ಭಯವಿದ್ದರೆ ಈ ವಿಡಿಯೋವನ್ನು ನೋಡದಿರುವುದೇ ಒಳ್ಳೇದು. ಯಾಕೆಂದರೆ ಅದರ ನಾಗಾಲೋಟದ ಓಟ ನಿಮ್ಮಲ್ಲಿ ಭಯವನ್ನು ಹೆಚ್ಚಿಸುತ್ತದೆ.
I had never seen a crocodile galloping?? pic.twitter.com/PjdnaDVrss
— Susanta Nanda IFS (@susantananda3) August 23, 2022
ಐ ಎಫ್ ಎಸ್ ಅಧಿಕಾರಿ ಸುಶಾಂತ ನಂದಾ ಶೇರ್ ಮಾಡಿರುವ ವಿಡಿಯೋನಲ್ಲಿ ಮೊಸಳೆಗೆಂದೇ ನಿರ್ಮಿಸಲಾಗಿರುವ ಪ್ರದೇಶದಲ್ಲಿ ಈ ಉಭಯವಾಸಿ ಕುದುರೆಗಳ ಹಾಗೆ ನಾಗಾಲೋಟದಿಂದ (ನೆಗೆಯುತ್ತಾ ಓಡುವುದು) ಓಡುತ್ತಾ ವ್ಯಕ್ತಿಯೊಬ್ಬನನ್ನು ಬೆನ್ನಟ್ಟುತ್ತಿದೆ. ತನ್ನ ಪಂಜುಗಳ ಮೇಲೆ ನಿಂತಿರುವ ಮೊಸಳೆ ಮನುಷ್ಯನೆಡೆ ಅವನು ಊಹಿಸುವದಕ್ಕಿಂತ ವೇಗವಾಗಿ ಧಾವಿಸುತ್ತದೆ. ವ್ಯಕ್ತಿ ಅದರಿಂದ ತಪ್ಪಿಸಿಕೊಂಡು ಓಡುತ್ತಿರುವುದು ಭಯಾನಕ ದೃಶ್ಯ ಮಾರಾಯ್ರೇ.
ನಂದಾ ಅವರು ತಾವು ಶೇರ್ ಮಾಡಿರುವ ಸದರಿ ವಿಡಿಯೋಗೆ, ‘ನಾಗಾಲೋಟದಿಂದ ಮೊಸಳೆ ಓಡುತ್ತಿರುವುದನ್ನು ನಾನ್ಯಾವತ್ತೂ ನೋಡಿರಲಿಲ್ಲ‘ ಅಂತ ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೋವನ್ನು ಈಗಾಗಲೇ 30 ಸಾವಿರಕ್ಕೂ ಹೆಚ್ಚು ಜನ ನೋಡಿದ್ದಾರೆ. ಮೊಸಳೆ ಅಷ್ಟು ವೇಗವಾಗಿ ಓಡುವುದು ನೆಟ್ಟಿಗರನ್ನು ದಂಗಾಗಿಸಿದೆ. ಬಹಳಷ್ಟು ಜನರು ಒಂದು ಪಕ್ಷ ಮೊಸಳೆಯೊಂದು ಹೀಗೆ ತಮ್ಮತ್ತ ಧಾವಿಸಿದರೆ ಭಯದಿಂದ ಓಡುವುದನ್ನು ಮರೆತು ಅದಕ್ಕೆ ಶರಣಾಗಿ ಬಿಡುತ್ತಾರಂತೆ. ಇನ್ನೂ ಕೆಲವರು ಮೊಸಳೆಯ ಅಸ್ವಭಾವಿಕ ನಡಾವಳಿಯಿಂದ ಆಶ್ವರ್ಯಚಿಕಿತರಾಗಿದ್ದಾರೆ.
it would be cramping up for ages with that burst
— Amith Deshmukh (@deshmukh_amith) August 23, 2022
Wow this is something new to see. May be he had been long time to hunting grounds. Fed up being in Zoo. ? ? ? ?
They should not keep them isolated for long that they start inventing things for themselves. Nature always has an answer.— VG (@GwdVda2022) August 23, 2022