
ಶಾಲೆಗೆ ಹೋಗುವ ಪುಟ್ಟ ಮಕ್ಕಳ ಊಟದ ಡಬ್ಬಿ ತಯಾರಿಸುವುದು ಅಮ್ಮಂದಿರ ಪಾಲಿಗೆ ಒಂದು ಸವಾಲಿನ ಕೆಲಸವೇ ಸರಿ. ಮಕ್ಕಳು ಯಾವುದನ್ನು ತಿನ್ನುತ್ತಾರೆ. ಯಾವುದನ್ನು ತಿನ್ನುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯಕ್ಕೂ ಹಿತವಾಗುವ ಆಹಾರವನ್ನು ತುಂಬಿಸಿ ಕಳುಹಿಸಬೇಕು. ಅದರಲ್ಲೂ ಕ್ರಿಯೇಟಿವ್ ಆಗಿ ಯೋಚಿಸಿ ಡಬ್ಬಿಯನ್ನು ಅಲಂಕರಿಸಿ ಕಳುಹಿಸಬೇಕು, ಇಲ್ಲೊಬ್ಬರು ಅಮ್ಮ ತನ್ನ ಮಗಳ ಟಿಫಿನ್ ಬಾಕ್ಸ್ಅನ್ನು ರೆಡಿ ಮಾಡಿ ಕಳುಹಿಸಿದ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜರ್ಮನ್ನ ಸಿಲ್ಕ್ ಎನ್ನುವ ಮಹಿಳೆ ಹಂಚಿಕೊಂಡಿರುವ ಫೋಟೋ ಇದೀಗ ವೈರಲ್ ಆಗಿದೆ.
ಪ್ರತಿದಿನ ಬೆಳಿಗ್ಗೆ, ಸಿಲ್ಕ್ ತನ್ನ ಮಗಳ ಟಿಫಿನ್‌ಗಾಗಿ ಆಹಾರದಿಂದ ಸುಂದರವಾದ ವಿನ್ಯಾಸಗಳನ್ನು ರಚಿಸಲು ಸುಮಾರು ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತಾಳಂತೆ. ಆಹಾರವು ಸಾಮಾನ್ಯವಾಗಿ ವಿವಿಧ ಹಣ್ಣುಗಳು, ತರಕಾರಿಗಳು ಮತ್ತು ಕ್ರೀಮ್ ಚೀಸ್ ಸ್ಯಾಂಡ್‌ವಿಚ್‌ಗಳ ಮಿಶ್ರಣವಾಗಿದೆ. ಡೈಲಿ ಮೇಲ್ ಪ್ರಕಾರ, ಸಿಲ್ಕ್ ಚಮತ್ಕಾರಿ ಆಕಾರಗಳನ್ನು ಕೆತ್ತಲು ವಿವಿಧ ಕುಕೀ ಕಟ್ಟರ್‌ಗಳು ಮತ್ತು ಚೂಪಾದ ಚಾಕುಗಳನ್ನು ಬಳಸುತ್ತಾರೆ.
ಆಕೆಯ ಮಗಳು ಓಟ್ ಮೀಲ್ ಅನ್ನು ತೆಗೆದುಕೊಂಡು ಹೋಗುವುದಾದರೆ ಅದರ ಮೇಲೆ ಹೂವುಗಳು, ನಕ್ಷತ್ರಗಳು ಅಥವಾ ರಾಕೆಟ್‌ಗಳ ಆಕಾರದಲ್ಲಿ ಕತ್ತರಿಸಿದ ಹಣ್ಣುಗಳನ್ನು ಸಿಲ್ಕ್ ಇಡುತ್ತಾರೆ. ಊಟದ ಪೆಟ್ಟಿಗೆಯು ಕಪ್ಪೆಗಳು, ಕೋಳಿಗಳು, ಜೇನುನೊಣಗಳು, ಲೇಡಿಬರ್ಡ್‌ಗಳು, ಕರಡಿಗಳು, ಬಾತುಕೋಳಿಗಳು ಮತ್ತು ಹಣ್ಣು, ಬ್ರೆಡ್, ಚೀಸ್ ಅಥವಾ ಅಕ್ಕಿಯಿಂದ ಮಾಡಿದ ಬಸವನಗಳಂತಹ ಪ್ರಾಣಿಗಳನ್ನು ರೀತಿಯ ಆಕೃತಿಗಳನ್ನು ಮಾಡಿ ಇಟ್ಟು ಊಟದ ಡಬ್ಬಿಯನ್ನು ಸಿಂಗರಿಸುತ್ತಾರೆ.
ಸದ್ಯ ಸಿಲ್ಕ್ ಅವರ ಕ್ರಿಯೇಟಿವಿಟಿಗೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅಮ್ಮಂದಿರು ಹೀಗೂ ಊಟದ ಡಬ್ಬಿಯನ್ನು ರೆಡಿ ಮಾಡಬಹುದಾ ಎಂದು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ರಸ್ತೆ ಬದಿ ನಿಂತು ಕಚ್ಚಾ ಬಾದಾಮ್ ಹಾಡಿಗೆ ಡ್ಯಾನ್ಸ್ ಮಾಡಿದ ಮಹಿಳೆ: 8 ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದ ವಿಡಿಯೋ