Video: ತಿರುಮಲದಲ್ಲಿ 8 ಅಡಿಯ ದೈತ್ಯ ನಾಗರಹಾವು ಪತ್ತೆ: ವೈರಲ್ ವಿಡಿಯೋ

|

Updated on: Nov 28, 2024 | 3:19 PM

ತಿರುಮಲದ ಶೇಷಾಚಲಂ ಅರಣ್ಯದಲ್ಲಿ 8 ಅಡಿ ಉದ್ದದ ದೈತ್ಯ ನಾಗರಹಾವನ್ನು ಪತ್ತೆ ಹಚ್ಚಲಾಗಿದೆ. ರಿಂಗ್ ರೋಡ್ ಬಳಿಯ ಬಿ-ಟೈಪ್ ಕ್ವಾರ್ಟರ್ಸ್ ಬಳಿ ಕಾಣಿಸಿಕೊಂಡ ಈ ಹಾವು ಜನರನ್ನು ಭಯಭೀತರನ್ನಾಗಿಸಿತ್ತು. ಆದರೆ, ಟಿಟಿಡಿ ಅರಣ್ಯ ಇಲಾಖೆಯ ಭಾಸ್ಕರ್ ನಾಯ್ಡು ಅವರು ಜಾಣ್ಮೆಯಿಂದ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಿರುಮಲದ ಶೇಷಾಚಲಂ ಅರಣ್ಯ ಪ್ರದೇಶ ಪೂರ್ವ ಘಟ್ಟಗಳ ಅವಿಭಾಜ್ಯ ಅಂಗ. ಅಂಜನಾದ್ರಿ, ಗರುಡಾದ್ರಿ, ನಾರಾಯಣಾದ್ರಿ, ನೀಲಾದ್ರಿ, ಶೇಷಾದ್ರಿ, ವೆಂಕಟಾದ್ರಿ ಮತ್ತು ವೃಷಬಾದ್ರಿ ಎಂಬ ಏಳು ಬೆಟ್ಟಗಳನ್ನು ಆದಿಶೇಷನ ಪ್ರತಿರೂಪವೆಂದು ಪರಿಗಣಿಸಲಾಗಿದೆ. ಹಲವು ಅಪರೂಪದ ಪಕ್ಷಿಗಳು, ಸಸ್ಯಗಳು, ಪ್ರಾಣಿಗಳು ಶೇಷಾಚಲಂ ಅನ್ನು ತಮ್ಮ ಆವಾಸಸ್ಥಾನವನ್ನಾಗಿ ಆಯ್ಕೆ ಮಾಡಿಕೊಂಡಿವೆ. ಇದೀಗ ಇಲ್ಲಿನ ರಿಂಗ್ ರೋಡ್ ಬಳಿಯ ಬಿ-ಟೈಪ್ ಕ್ವಾರ್ಟರ್ಸ್ ಬಳಿ 8 ಅಡಿಯ ನಾಗರಹಾವು ಕಾಣಿಸಿಕೊಂಡಿದ್ದು, ಜನರನ್ನು ಭಯಬೀತಗೊಳಿಸಿತ್ತು. ಟಿಟಿಡಿ ಅರಣ್ಯ ಇಲಾಖೆಯ ಭಾಸ್ಕರ್ ನಾಯ್ಡು ಈ ದೈತ್ಯ ಹಾವನ್ನು ಜಾಣ್ಮೆಯಿಂದ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ದೈತ್ಯ ಹಾವನ್ನು ಹಿಡಿದಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 27, 2024 05:57 PM