ವೈರಲ್ ವಿಡಿಯೋ: ಸಾಮಾಜಿಕ ಜಾಲತಾಣಗಳಲ್ಲಿ ಥರಹೇವಾರಿ ವಿಡಿಯೋಗಳು ಟ್ರೆಂಡಿಂಗ್ ಆಗುತ್ತಿರುತ್ತವೆ. ಹಾವು, ಮೊಸಳೆ, ಹುಲಿಗಳು ಮುಂತಾದ ವಿವಿಧ ಪ್ರಾಣಿಗಳ ವೀಡಿಯೊಗಳಂತೂ ಹೆಚ್ಚಾಗಿ ವೈರಲ್ ಆಗುತ್ತವೆ. ಇತ್ತೀಚಿಗೆ ಮಾನವೀಯತೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಾನವೀಯತೆ ಬತ್ತಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಕೆಲವರಿಗೆ ಪ್ರಾಣಿಗಳ ಮೇಲಿನ ಪ್ರೀತಿ, ಮಾನವೀಯತೆ ಕೊಂಚವೂ ಕಡಿಮೆಯಾಗಿಲ್ಲ. ಅದು ದೊಡ್ಡ ಗುಣ! ಅಂತಹವರು ಮಾನವೀಯತೆ ತೋರುವ ಯಾವುದೇ ಅವಕಾಶವನ್ನು ಮಿಸ್ ಮಾಡಿಕೊಳ್ಳುದಿಲ್ಲ. ಅವರಿಗೆ ಏನೇ ಆಗಲಿ, ಸಂಕಷ್ಟಅದಲ್ಲಿರುವವರನ್ನು ತಮ್ಮ ಪ್ರಾಣ ಒತ್ತೆಯಿಟ್ಟಾದರೂ ರಕ್ಷಿಸುತ್ತಾರೆ. ಅಂತಹದ್ದಲೊಂದು ವೀಡಿಯೊ ನಿಮಗಾಗಿ ಇಲ್ಲಿದೆ. ಮಾನವೀಯತೆ ಎಂದರೆ ಇದೇ… ಹುಡುಗಿಯೊಬ್ಬಳು ಬೆಕ್ಕಿನ ಮರಿ ಉಳಿಸಿದ ವೈರಲ್ ವಿಡಿಯೋ ಇಲ್ಲಿದೆ.
ಬಾಲಕಿಯೊಬ್ಬಳು ಚರಂಡಿಯಲ್ಲಿ ಸಿಲುಕಿಬಿದ್ದಿದ್ದ ಬೆಕ್ಕನ್ನು ಸಾಕಷ್ಟು ಪ್ರಯತ್ನಪಟ್ಟು ಕೊನೆಗೂ ಅದನ್ನು ಸುರಕ್ಷಿತವಾಗಿ ತನ್ನ ಕೈಯಾರೆ ಹೊರತೆಗೆದಿದ್ದಾಳೆ. ಬೆಕ್ಕನ್ನು ಹೊರ ತೆಗೆಯಲು ಚರಂಡಿಯ ಗ್ರಿಲ್ಸ್ ಮೇಲೆ ಮಲಗಿ, ರಸ್ತೆಯ ಕೆಳಗಿರುವ ಚರಂಡಿಯಲ್ಲಿ ಕೈ ಹಾಕಿ ಬೆಕ್ಕನ್ನು ರಕ್ಷಿಸಿದ್ದಾಳೆ. ಬೆಕ್ಕಿನ ಸಂರಕ್ಷಣೆಯಲ್ಲಿ ಮಾನವೀಯತೆ ತೋರಿಸಿ ಅದರ ಪ್ರಾಣ ಉಳಿಸಿದ್ದಕ್ಕಾಗಿ ನೆರೆದಿದ್ದವರು ಪ್ರಶಂಸೆಯ ಸುರಿಮಳೆಗೈದಿರುವುದು ಕಂಡುಬಂದಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಆಕೆಯನ್ನು ಅಭಿನಂದಿಸುತ್ತಿದ್ದಾರೆ. ಹುಡುಗಿಯ ಕೈಗೆ ಬೆಕ್ಕಿನ ಮರಿ ಬಂದ ತಕ್ಷಣ, ಅವಳು ಅದನ್ನು ತನ್ನ ಮಡಿಲಲ್ಲಿ ತೆಗೆದುಕೊಂಡು, ಮಾತೃಪ್ರೇಮ ತೋರಿ ಸಂಭ್ರಮಿಸಿದ್ದಾಳೆ.
This group of friends heard a kitten meowing and noticed it had fallen down a storm drain.
This is the moment one of the girls was able to rescue the kitten! ?????? ?❤️? ??
— GoodNewsCorrespondent (@GoodNewsCorres1) August 14, 2022