Girlfriend On Rent: ಬಾಡಿಗೆ ಗರ್ಲ್ ಫ್ರೆಂಡ್; ಈ ಹುಡುಗಿಯ ಕಡೆಯಿಂದ ಸಿಂಗಲ್ಸ್​​​​ ಹುಡುಗರಿಗೆ ಬಿಗ್​​ ಆಫರ್​

ನೀವು ಒಬ್ಬಂಟಿಯಾಗಿದ್ದು, ಹುಡುಗಿಯ ಜೊತೆ ಡೇಟಿಂಗ್ ಮಾಡಲು ಬಯಸಿದರೆ, ನಾನು ನಿಮ್ಮೊಂದಿಗೆ ಬರಲು ಸಿದ್ಧ ಎಂದು ಯುವತಿಯೊಬ್ಬಳು ಹೇಳಿದ್ದಾಳೆ. ಆದರೆ ನೀವು ಅದರ ಬಾಡಿಗೆಯನ್ನು ಪಾವತಿಸಬೇಕು. ಸದ್ಯ ಬಾಡಿಗೆ ಗರ್ಲ್ ಫ್ರೆಂಡ್ ಪೋಸ್ಟ್​​​ ಎಲ್ಲೆಡೆ ವೈರಲ್​ ಆಗಿದೆ.

Girlfriend On Rent: ಬಾಡಿಗೆ ಗರ್ಲ್ ಫ್ರೆಂಡ್; ಈ ಹುಡುಗಿಯ ಕಡೆಯಿಂದ ಸಿಂಗಲ್ಸ್​​​​ ಹುಡುಗರಿಗೆ ಬಿಗ್​​ ಆಫರ್​

Updated on: May 31, 2024 | 2:51 PM

ಡೇಟಿಂಗ್‌ಗೆ ಹೋಗಲು ಬಯಸುವ ಸಿಂಗಲ್ ಹುಡುಗರಿಗಾಗಿ ಯುವತಿಯೊಬ್ಬಳು ಆಫರ್ ಮುಂದಿಟ್ಟಿದ್ದಾಳೆ. ಗರ್ಲ್ ಫ್ರೆಂಡ್ ಆಗಿ ಬಾಡಿಗೆಗೆ ಸಿಗುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಫರ್ ಪೋಸ್ಟ್ ಮಾಡಿದ್ದಾಳೆ. ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಹುಡುಗಿ ರೇಟ್ ಕಾರ್ಡ್ ಅನ್ನು ಸಹ ಹಂಚಿಕೊಂಡಿದ್ದಾಳೆ, ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮನೆ, ಕಾರು, ಕಚೇರಿ, ಪೀಠೋಪಕರಣಗಳಂತಹ ವಸ್ತುಗಳು ಬಾಡಿಗೆಗೆ ಸಿಗುವುದನ್ನು ಕೇಳಿದ್ದೇವೆ, ಆದರೆ ಗೆಳತಿಯನ್ನು ಬಾಡಿಗೆಗೆ ಪಡೆಯುವ ಸಂಗತಿಯನ್ನು ಕೇಳಿದ್ದೀರಾ?. ಈ ಯುವತಿಯನ್ನು ದಿವ್ಯಾ ಎಂದು ಗುರುತಿಸಲಾಗಿದ್ದು, 1,500 ರೂ.ನಿಂದ 10,000 ರೂ.ವರೆಗಿನ ಯೋಜನೆಗಳನ್ನು ಈಕೆ ಪ್ರಸ್ತಾಪಿಸಿರುವುದನ್ನು ಫೋಸ್ಟ್ನಲ್ಲಿ ಕಾಣಬಹುದು.

ಬಾಡಿಗೆ ಎಷ್ಟು ಪಾವತಿಸಬೇಕು ಗೊತ್ತಾ? ಇಲ್ಲಿದೆ ನೋಡಿ:

ದಿವ್ಯಾ ಇನ್ಸ್ಟಾಗ್ರಾಮ್ ರೀಲ್ ಮಾಡಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾಳೆ. ಈ ರೀಲ್ ವೈರಲ್ ಆಗಿದ್ದು, ಜನರು ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ನೀವು ಒಬ್ಬಂಟಿಯಾಗಿದ್ದು, ಹುಡುಗಿಯ ಜೊತೆ ಡೇಟಿಂಗ್ ಮಾಡಲು ಬಯಸಿದರೆ, ನಾನು ನಿಮ್ಮೊಂದಿಗೆ ಬರಲು ಸಿದ್ಧ ಎಂದು ದಿವ್ಯಾ ಹೇಳಿದ್ದಾಳೆ. ಆದರೆ ನೀವು ಅದರ ಬಾಡಿಗೆಯನ್ನು ಪಾವತಿಸಬೇಕು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಕಾಫಿ ಡೇಟ್​: 1500 ರೂ

ಲಂಚ್​ ಆ್ಯಂಡ್​ ಮೂವಿ ಡೇಟ್​ : ರೂ 2000

ಈವೆಂಟ್ ಕಂಪ್ಯಾನಿಯನ್: ರೂ 3500

ಲಾಂಗ್​ ಡ್ರೈವ್​​​: ರೂ 4000

ಮನೆಯಲ್ಲಿ ಒಟ್ಟಿಗೆ ಅಡುಗೆ ಮಾಡುತ್ತಾ ಸಂಗಾತಿಯೊಂದಿಗೆ ಸಮಯ ಕಳೆಯಲು: 3500 ರೂ

ಶಾಪಿಂಗ್ ವಿಹಾರ: ರೂ 4500 ವಾರಾಂತ್ಯದ ವಿಹಾರ (2 ದಿನಗಳು): ರೂ 10,000

ಇದನ್ನೂ ಓದಿ: ಮದುವೆಯಾದ ಎರಡೇ ದಿನದಲ್ಲೇ ಮಗುವಿಗೆ ಜನ್ಮ ನೀಡಿದ ಯುವತಿ; ಶಾಕ್​​ಗೆ ಒಳಗಾಗ ವರನ ಕುಟುಂಬ

ಸಾಮಾನ್ಯ ಕಾಫಿ ಡೇಟ್‌ನಿಂದ ವಾರಾಂತ್ಯದ ರಜೆಯವರೆಗಿನ ಪ್ರತಿಯೊಂದು ರೀತಿಯ ದಿನಾಂಕದ ದರವನ್ನು ಸಹ ಯುವತಿ ಉಲ್ಲೇಖಿಸಿದ್ದಾಳೆ. ಹುಡುಗಿ ದೆಹಲಿ ಮೂಲದವಳು ಮತ್ತು ಇನ್ಸ್ಟಾಗ್ರಾಮ್ನಲ್ಲಿ ಖಾತೆಯನ್ನು divya_giri__ ಎಂದು ಗುರುತಿಸಲಾಗಿದೆ. ಹುಡುಗಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ 12 ಸಾವಿರಕ್ಕೂ ಹೆಚ್ಚು ಫಾಲೋವರ್ಸ್​​ಗಳನ್ನು ಹೊಂದಿದ್ದಾಳೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us